Honganasu: ಪ್ರೀತಿ ತಿರಸ್ಕರಿಸಿದ ವಸುಧರಾ; ಸಾಕ್ಷಿಯನ್ನೇ ಮದುವೆ ಆಗ್ತಾನಾ ರಿಷಿ?

Honganasu Serial Update: ರಿಷಿ ಮಾಮೂಲಿಯಂತೆ ಮಾತನಾಡುತ್ತಿದ್ದಾನೆ ಎಂದುಕೊಂಡು ‘ನೀವೆಂದರೆ ನನಗೂ ತುಂಬಾ ಇಷ್ಟ’ ಎಂದಳು ವಸು. ಸಾಕ್ಷಿ ಜೊತೆ ನಿಶ್ಚಿತಾರ್ಥ ಆಗಿದ್ದ ವಿಚಾರವನ್ನು ರಿಷಿ ಬಿಚ್ಚಿಟ್ಟ.

Honganasu: ಪ್ರೀತಿ ತಿರಸ್ಕರಿಸಿದ ವಸುಧರಾ; ಸಾಕ್ಷಿಯನ್ನೇ ಮದುವೆ ಆಗ್ತಾನಾ ರಿಷಿ?
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 08, 2022 | 11:48 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾಳನ್ನು ಎಕ್ಸಾಮ್ ಬರೆಯಲು ಕರ್ಕೊಂಡು ಹೋಗುವ ನೆಪದಲ್ಲಿ ಲವ್ ಪ್ರಪೋಸ್ ಮಾಡಲು ತಯಾರಿ ನಡೆಸಿದ್ದಾನೆ ರಿಷಿ. ವಸುಧರಾಗಾಗಿ ಗಿಫ್ಟ್ ಕೂಡ ಖರೀದಿ ಮಾಡಿರುವ ರಿಷಿ ಸಖತ್ ಎಕ್ಸಾಯಿಟ್ ಆಗಿದ್ದಾನೆ. ವಸು ಖಂಡಿತ ತನ್ನ ಪ್ರೀತಿ ಒಪ್ಪಿಕೊಳ್ಳುತ್ತಾಳೆ ಎನ್ನುವ ಭ್ರಮೆಯಲ್ಲಿದ್ದಾನೆ ಆತ. ಸಾಕ್ಷಿ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾಳೆ. ಎಕ್ಸಾಮ್ ಮುಗಿಸಿ ಹೊರ ಬಂದ ವಸುಧರಾ ರಿಷಿಗೆ ಫೋನ್ ಮಾಡಿದಳು.

ಎಕ್ಸಾಮ್ ಮುಗಿಸಿ ಬಂದ ವಸುಧರಾಳನ್ನು ಕರ್ಕೊಂಡು ಹೊರಟ ರಿಷಿ. ವಸುಗೆ ಪ್ರಪೋಸ್ ಮಾಡಲೇ ಬೇಕೆಂದು ನಿರ್ಧರಿಸಿರುವ ರಿಷಿ ಸಂತೋಷದಲ್ಲಿದ್ದಾನೆ. ರಿಷಿಯಲ್ಲಾದ ಬದಲಾವಣೆ ವಸುಗೆ ಅಚ್ಚರಿ ಮೂಡಿಸಿದೆ. ಒಂದು ಸರ್ಪ್ರೈಸ್ ಇದೆ ಎಂದು ವಸುಧರಾಳನ್ನು ಕರೆದುಕೊಂಡು ಹೋಟೆಲ್ ಬಳಿಗೆ ಬಂದ ರಿಷಿ. ಆಗಲೇ ರಾತ್ರಿ ಆಗಿತ್ತು. ರಿಷಿ ತನ್ನ ಮನಸ್ಸಲ್ಲಿ ಬಚ್ಚಿಟ್ಟಿದ್ದ ಪ್ರೀತಿಯನ್ನು ಬಹಿರಂಗ ಪಡಿಸಿದ. ಮಾಮೂಲಿಯಂತೆ ರಿಷಿ ಮಾತನಾಡುತ್ತಿದ್ದಾನೆ ಎಂದುಕೊಂಡು ‘ನೀವೆಂದರೆ ನನಗೂ ತುಂಬಾ ಇಷ್ಟ’ ಎಂದಳು ವಸು. ಸಾಕ್ಷಿ ಜೊತೆ ನಿಶ್ಚಿತಾರ್ಥ ಆದ ವಿಚಾರವನ್ನು ಬಿಚ್ಚಿಟ್ಟ ರಿಷಿ. ‘ಸಾಕ್ಷಿ ಮತ್ತೆ ಬಂದಿದ್ದಾಳೆ. ಆದರೆ ಅವಳನ್ನು ಕಂಡರೆ ನನಗೆ ಇಷ್ಟವಿಲ್ಲ’ ಎಂದು ಹೇಳಿದ ರಿಷಿ.

ಕೊನೆಗೂ ತಾನು ತಂದ ಗಿಫ್ಟ್ ಅನ್ನು ವಸುಗೆ ನೀಡಿ ಇಲ್ಲೇ ಓಪನ್ ಮಾಡಿ ನೋಡಬೇಕು ಎಂದು ಹೇಳಿದ ರಿಷಿ. ಅವನ ಮುಂದೆಯೇ ಗಿಫ್ಟ್ ಓಪನ್ ಮಾಡಿದ ವಸುಗೆ ಶಾಕ್ ಆಯಿತು. ಗಿಫ್ಟ್ ಒಳಗೆ ಹಾರ್ಟ್ ಸಿಂಬಲ್ ಇತ್ತು. ಅದರಲ್ಲಿ ವಸುಧರಾ ಮತ್ತು ರಿಷಿ ಫೋಟೋ ಇಟ್ಟು ಐ ಲವ್ ಯೂ ಎಂದು ಬರೆಯಲಾಗಿತ್ತು. ಗಿಫ್ಟ್ ಕೊಟ್ಟ ಬಳಿಕ ವಸುಧರಾ ಈ ಪ್ರೀತಿಯನ್ನು ಒಪ್ಪಿಕೊಂಡು ತಬ್ಬಿಕೊಳ್ಳುತ್ತಾಳೆ ಎಂದು ನಿಂತಲ್ಲೇ ಕನಸು ಕಂಡ ರಿಷಿ. ಆದರೆ ವಸು ಹಾಗೆ ಮಾಡಿಲ್ಲ.

ಇದನ್ನೂ ಓದಿ: Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ

ರಿಷಿ ಪ್ರೀತಿಯನ್ನು ತಿರಸ್ಕರಿಸಿದಳು ವಸುಧರಾ. ‘ನಿಮಗೆ ಮಾತ್ರ ಪ್ರೀತಿ ಹುಟ್ಟಿದ್ರೆ ಸಾಕಾಗಲ್ಲ, ನೀವು ಲವ್ ಯೂ ಅಂದ ಮಾತ್ರಕ್ಕೆ ನಾನು ಒಪ್ಪಿಕೊಳ್ಳಬೇಕು ಅಂತೇನಿಲ್ಲ’ ಎಂದಳು ವಸು. ವಸುಧರಾ ಮಾತುಗಳು ರಿಷಿಗೆ ಶಾಕ್ ಆಯಿತು. ಖಂಡಿತವಾಗಿಯೂ ಪ್ರೀತಿ ಒಪ್ಪಿಕೊಳ್ಳುತ್ತಾಳೆ ಅಂತ ಭಾವಿಸಿದ್ದ ರಿಷಿಗೆ ವಸುಧರಾ ಹೇಳಿದ್ದು ಸಿಡಿಲು ಬಡಿದಂತೆ ಆಯಿತು. ರಿಜೆಕ್ಟ್ ಮಾಡಲು ಕಾರಣವೇನು ಎಂದು ಕೇಳಿದ ರಿಷಿ. ತಾಯಿ ಪ್ರೀತಿಯನ್ನೇ ಒಪ್ಪಿಕೊಳ್ಳದವರು ನನ್ನನ್ನು ಪ್ರೀತಿಸಲು ಹೇಗೆ ಸಾಧ್ಯ ಎಂದು ವಸು ಪ್ರಶ್ನೆ ಮಾಡಿದಳು.

ಇದನ್ನೂ ಓದಿ: Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ

‘ಸಾಕ್ಷಿಯಿಂದ ತಪ್ಪಿಸಿಕೊಳ್ಳಲು ನನ್ನನ್ನು ಪ್ರೀತಿಸುತ್ತಿದ್ದೀನಿ ಎಂದು ಹೇಳುತ್ತಿದ್ದೀರಿ ಅಷ್ಟೆ, ನಿಜಕ್ಕೂ ಇದು ಪ್ರೀತಿನೇ ಅಲ್ಲ’ ಎಂದು ವಸು ಕಿಡಿ ಕಾರಿದಳು. ವಸುಧರಾ ಮಾತಿನಿಂದ ಸಿಟ್ಟಾದ ರಿಷಿ ಕೆಂಡಾಮಂಡಲವಾದ. ನನ್ನ ಪ್ರೀತಿಗೆ ಅವಮಾನ ಮಾಡಬೇಡ ಎಂದು ರೇಗಿದ. ರಿಷಿ ಎಷ್ಟೇ ಹೇಳಿದರೂ ಪ್ರೀತಿ ಒಪ್ಪಿಕೊಳ್ಳದ ವಸು ಗಿಫ್ಟ್ ಅನ್ನು ವಾಪಸ್ ನೀಡಿ ಹೊರಟು ಹೋದಳು. ರಿಷಿ ಜೋರಾಗಿ ಕಿರುಚುತ್ತಾ ಅಲ್ಲೇ ಕುಸಿದು ಹೋದ. ರಿಷಿ ಮತ್ತು ವಸುಧರಾ ಮಾತುಕತೆಯನ್ನು ದೂರದಿಂದನೇ ನಿಂತು ನೋಡುತ್ತಿದ್ದಳು ಸಾಕ್ಷಿ.

‘ರಿಷಿ ಸರ್..’ ಎನ್ನುತ್ತಾ ಸದಾ ಜೊತೆಯಲ್ಲೇ ಇರುತ್ತಿದ್ದ ವಸು ಮನಸ್ಸಲ್ಲಿ ನಿಜಕ್ಕೂ ಪ್ರೀತಿ ಇಲ್ವಾ? ಸಾಕ್ಷಿ ಕಾರಣಕ್ಕಾಗಿ ರಿಷಿಯನ್ನು ತಿರಸ್ಕರಿಸಿದಳಾ ವಸು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ