Honganasu: ಆಕ್ಸಿಡೆಂಟ್ ಆಗಿ ಬಿದ್ದಿದ್ದ ರಿಷಿ ನೋಡಿ ವಸುಧರಾ ಶಾಕ್

| Updated By: ಮದನ್​ ಕುಮಾರ್​

Updated on: Dec 14, 2022 | 5:13 PM

Honganasu Serial Update: ವಸುಧರಾ ಮೇಲಿನ ಕೋಪಕ್ಕೆ ಸಾಕ್ಷಿ ಜೊತೆ ರಿಷಿ ಹೊರಟ. ದಾರಿಯಲ್ಲಿ ಹೋಗುವಾಗ ಸಾಕ್ಷಿಯ ಮಾತುಗಳಿಂದ ಇರಿಟೇಟ್ ಆದ ರಿಷಿ ಕಾರನ್ನು ಮಧ್ಯದಲ್ಲೇ ನಿಲ್ಲಿಸಿ ಇಳಿದುಕೊಂಡ.

Honganasu: ಆಕ್ಸಿಡೆಂಟ್ ಆಗಿ ಬಿದ್ದಿದ್ದ ರಿಷಿ ನೋಡಿ ವಸುಧರಾ ಶಾಕ್
ಹೊಂಗನಸು ಸೀರಿಯಲ್
Follow us on

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾಳನ್ನು ಮರೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ ರಿಷಿಗೆ. ಕಾಲೇಜಿನಲ್ಲಿ ವಸುಧರಾಳನ್ನು ಮಾತನಾಡಿಸದೆ ಆಕೆಯಿಂದ ದೂರ ಇದ್ದಾನೆ ರಿಷಿ. ಆಕೆ ಸಾರಿ ಕೇಳಿದರೂ ಸಹ ರಿಷಿ ಕೋಪ ತಣ್ಣಗಾಗಿಲ್ಲ. ಪ್ರೀತಿ ರಿಜೆಕ್ಟ್ ಮಾಡಿದ್ದನ್ನು ನೆನಪಿಸಿಕೊಂಡು ವಸು ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದಾನೆ. ಇಬ್ಬರನ್ನೂ ಹೇಗಾದರೂ ಮಾಡಿ ಒಂದು ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾರೆ ಮಹೇಂದ್ರ ಮತ್ತು ಜಗತಿ.

ಕಾಲೇಜು ಮುಗಿಸಿ ರೆಸ್ಟೋರೆಂಟ್ ಕೆಲಸಕ್ಕೆ ಹೊರಟಿದ್ದ ವಸುಧರಾಳನ್ನು ನೋಡಿ ತಡೆದು ನಿಲ್ಲಿಸಿದಳು ಸಾಕ್ಷಿ. ರಿಷಿಯಿಂದ ದೂರ ಹೋಗು ಅಂತ ಹೇಳಿದರೂ ಇನ್ನೂ ಅವನ ಮನಸ್ಸಲ್ಲೇ ಇದ್ದೀಯಾ ಎಂದು ವಸುಗೆ ಕ್ಲಾಸ್ ತೆಗೆದುಕೊಂಡಳು. ಅಷ್ಟೆಯಲ್ಲದೇ ರಿಷಿ ಜೊತೆ ಇರುವ ಫೋಟೋಗಳನ್ನು ತೋರಿಸಿ ಇದನ್ನು ಪೇಪರ್ ಮತ್ತು ಟಿವಿಯಲ್ಲಿ ಬರುವ ಹಾಗೆ ಮಾಡುತ್ತೇನೆ, ನಿಮ್ಮಿಬ್ಬರ ವಿಚಾರವನ್ನು ಎಲ್ಲಾ ಕಡೆ ಹಬ್ಬಿಸುತ್ತೇನೆ ಎಂದು ವಸುಗೆ ಬೆದರಿಕೆ ಹಾಕಿದಳು ಸಾಕ್ಷಿ. ಯಾವುದಕ್ಕೂ ಭಯ ಬೀಳದೆ  ಧೈರ್ಯವಾಗಿಯೇ ಸಾಕ್ಷಿಗೆ ಸರಿಯಾಗಿ ತಿರುಗೇಟು ನೀಡಿದಳು ವಸು. ಇನ್ಮುಂದೆ ನನ್ನ ದಾರಿಗೆ ಅಡ್ಡ ಬರಬೇಡ ಎಂದು ಖಡಕ್ ಆಗಿಯೇ ಹೇಳಿ ಹೊರಟಳು ವಸುಧರಾ.

ಇದನ್ನೂ ಓದಿ: Honganasu: ವಸು ಕ್ಷಮೆ ಕೇಳಿದ್ರೂ ತಣಿದಿಲ್ಲ ರಿಷಿ ಕೋಪ; ಮತ್ತೆ ಒಂದು ಮಾಡ್ತಾರಾ ಮಹೇಂದ್ರ-ಜಗತಿ?

ರಿಷಿಯನ್ನು ಒತ್ತಾಯ ಮಾಡಿ ರೆಸ್ಟೋರೆಂಟ್‌ಗೆ ಕರೆದುಕೊಂಡು ಬಂದ ಮಹೇಂದ್ರ. ಇಲ್ಲಿಗೆ ಯಾಕೆ ಕರ್ಕೊಂಡು ಬಂದಿದ್ದು ಎಂದು ರಿಷಿ ಜಗಳವಾಡಿದ. ಕಾಫಿ ಚೆನ್ನಾಗಿ ಇರುತ್ತೆ ಅದಕ್ಕೆ ಎಂದು ಸಮಾಧಾನ ಮಾಡಿ ರಿಷಿಯನ್ನು ರೆಸ್ಟೋರೆಂಟ್​ನಲ್ಲಿ ಮಹೇಂದ್ರ ಕೂರಿಸಿದ. ಆಗಲೇ ಜಗತಿ ಕೂಡ ಬಂದು ಕುಳಿತಿದ್ದಳು. ವಸುಧರಾಳನ್ನು ನೋಡಿ ಮತ್ತಷ್ಟು ಕೋಪ ಮಾಡಿಕೊಂಡ ರಿಷಿ. ಕಾಫಿ ಅಥವಾ ಐಸ್ ಕ್ರೀಮ್ ತರೋದಾ ಸರ್ ಎಂದು ವಸು ಕೇಳಿದಳು. ವಸು ಮಾತನಾಡುತ್ತಿದ್ದಂತೆಯೇ ಉರಿದು ಬಿದ್ದ ರಿಷಿ ಅಲ್ಲಿಂದ ಹೊರಟು ನಿಂತ. ಆಗ ಸಾಕ್ಷಿ ಎಂಟ್ರಿ ಕೊಟ್ಟಳು. ಸಾಕ್ಷಿ ಬಂದಿದ್ದು ನೋಡಿ ಮಹೇಂದ್ರ ಮತ್ತು ಜಗತಿ ಇಬ್ಬರೂ ಶಾಕ್ ಆದರು. ಸಾಕ್ಷಿ ಸರಿಯಾದ ಸಮಯಕ್ಕೆ ಬಂದಳು ಎಂದುಕೊಂಡ ರಿಷಿ ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡ. ತನ್ನನ್ನು ನೋಡಿ ಕೋಪ ಮಾಡಿಕೊಳ್ಳುತ್ತಿದ್ದ ರಿಷಿ ದಿಢೀರ್ ಅಂತ ಡ್ರಾಪ್ ಕೇಳಿದ್ದು ನೋಡಿ ಸಾಕ್ಷಿ ಖುಷಿ ಪಟ್ಟಳು.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ವಸುಧರಾ ಮೇಲಿನ ಕೋಪಕ್ಕೆ ಸಾಕ್ಷಿ ಜೊತೆ ರಿಷಿ ಹೊರಟ. ದಾರಿಯಲ್ಲಿ ಹೋಗುವಾಗ ಸಾಕ್ಷಿಯ ಮಾತುಗಳಿಂದ ಇರಿಟೇಟ್ ಆದ ರಿಷಿ ಕಾರನ್ನು ಮಧ್ಯದಲ್ಲೇ ನಿಲ್ಲಿಸಿ ಇಳಿದುಕೊಂಡ. ವಸುಧರಾ ಗುಂಗಲ್ಲೇ ನಡೆದುಕೊಂಡು ಹೋಗುತ್ತಿದ್ದ ರಿಷಿ ಆಕ್ಸಿಡೆಂಟ್ ಆಗಿ ರಸ್ತೆ ಪಕ್ಕದಲ್ಲಿ ಬಿದ್ದ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವಸು, ರಿಷಿಯನ್ನು ನೋಡಿ ಶಾಕ್ ಆದಳು. ರಿಷಿ ತಲೆಯಲ್ಲಿ ರಕ್ತ ಸೋರುತ್ತಿತ್ತು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಳು. ಬಳಿಕ ಮನೆಗೆ ಕರ್ಕೊಂಡು ಹೋದಳು. ತಲೆಗೆ ಏಟು ಮಾಡಿಕೊಂಡು ಬಂದ ರಿಷಿ ನೋಡಿ ಮಹೇಂದ್ರ ಮತ್ತು ಜಗತಿ ಶಾಕ್ ಆದರು. ನಡೆದ ವಿಚಾರವನ್ನು ವಸುಧರಾ ವಿವರಿಸಿದಳು. ರಿಷಿಯನ್ನು ನೋಡಲು ಮನೆಯೊಳಗೆ ಬರುತ್ತಿದ್ದ ವಸುಧರಾಳನ್ನು ದೇವಯಾನಿ ತಡೆದು ನಿಲ್ಲಿಸಿದಳು.

ರಿಷಿ ಸ್ಥಿತಿಗೆ ನೀನೇ ಕಾರಣ ಇನ್ಮುಂದೆ ಮನೆಯೊಳಗೆ ಮಾತ್ರವಲ್ಲ, ರಿಷಿಯಿಂದ ದೂರ ಹೋಗು ಎಂದು ವಸುಗೆ ಜೋರಾಗಿಯೇ ಬೈದಳು ದೇವಯಾನಿ. ಒಂದು ಬಾರಿ ರಿಷಿನ ನೋಡ್ತೀನಿ ಅಂತ ಕೇಳಿಕೊಂಡರೂ ಬಿಡದೆ ವಸುಧರಾಳನ್ನು ಹಾಗೆ ಕಳುಹಿಸಿದಳು ದೇವಯಾನಿ. ಇದೇ ಗ್ಯಾಪ್ ನಲ್ಲಿ ಸಾಕ್ಷಿಗೆ ಫೋನ್ ಮಾಡಿ ರಿಷಿಯನ್ನು ನೋಡಿಕೊಳ್ಳಲು ಬಾ ಎಂದ ಹೇಳಿದಳು ದೇವಯಾನಿ. ರಿಷಿಯಿಂದ ಶಾಶ್ವತವಾಗಿ ದೂರ ಆಗ್ತಾಳಾ ವಸು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.