Honganasu Kannada Serial: ಐ ಲವ್ ಯೂ ಎಂದ ವಸುಧರಾಗೆ ಕಪಾಳಕ್ಕೆ ಬಾರಿಸಿದ ರಿಷಿ

| Updated By: ಮದನ್​ ಕುಮಾರ್​

Updated on: Dec 20, 2022 | 7:58 PM

Honganasu Serial Update: ರಿಷಿಯನ್ನು ಬೆಂಕಿಯಿಂದ ರಕ್ಷಿಸಿದ ವಸುಗೆ ಮಹೇಂದ್ರ ಮತ್ತು ಜಗತಿ ಇಬ್ಬರೂ ಧನ್ಯವಾದ ಹೇಳಿದರು. ರಿಷಿ ಮೇಲೆ ಪ್ರೀತಿ ಇಲ್ಲ ಅಂದರೆ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದಳು ಜಗತಿ.

Honganasu Kannada Serial: ಐ ಲವ್ ಯೂ ಎಂದ ವಸುಧರಾಗೆ ಕಪಾಳಕ್ಕೆ ಬಾರಿಸಿದ ರಿಷಿ
ಹೊಂಗನಸು ಸೀರಿಯಲ್
Follow us on

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾ ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆ ಕಾಲೇಜು ಲ್ಯಾಬ್‌ಗೆ ಬೆಂಕಿ ಬಿದ್ದಿದೆ ರಿಷಿ ಸರ್ ಕೂಡ ಸಿಲುಕಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಶಾಕ್ ಆದಳು ವಸುಧರಾ. ರಿಷಿ ಹೆಸರು ಹೇಳುತ್ತಿದ್ದಂತೆ ಲ್ಯಾಬ್ ಕಡೆ ಆಕೆ ಓಡಿದಳು. ಬೆಂಕಿ, ಹೊಗೆಯ ನಡುವೆಯೂ ಲ್ಯಾಬ್ ಒಳಗೆ ನುಗ್ಗಿ ಸಿಲುಕಿದ್ದ ರಿಷಿಯನ್ನು ಕಾಪಾಡಿದಳು.

ರಿಷಿಯನ್ನು ಬೆಂಕಿಯಿಂದ ರಕ್ಷಿಸಿದ ವಸುಗೆ ಮಹೇಂದ್ರ ಮತ್ತು ಜಗತಿ ಇಬ್ಬರೂ ಧನ್ಯವಾದ ಹೇಳಿದರು. ರಿಷಿ ಮೇಲೆ ಪ್ರೀತಿ ಇಲ್ಲ ಅಂದರೆ ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದಳು ಜಗತಿ.  ಮಹೇಂದ್ರ ಮತ್ತು ಜಗತಿ ಏನೇ ಕೇಳಿದರೂ ಮಾತನಾಡದೆ ಸೈಲೆಂಟ್ ಆಗಿಯೇ ನಿಂತಿದ್ದಳು ವಸು. ಬಳಿಕ ರಿಷಿಯನ್ನು ಪ್ರೀತಿಸುತ್ತಿದ್ದೀನಾ ಎನ್ನುವ ಯೋಚನೆ ಮಸುಗೆ ಶುರುವಾಯಿತು. ಇತ್ತ ರಿಷಿ ಕೂಡ ವಸುಧರಾಳ ಬಗ್ಗೆಯೇ ಯೋಚಿಸುತ್ತಿದ್ದಾನೆ. ಇಷ್ಟೆಲ್ಲಾ ಪ್ರೀತಿ ಇಟ್ಟುಕೊಂಡರೂ ವಸುಧರಾ ಯಾಕೆ ರಿಜೆಕ್ಟ್ ಮಾಡಿದಳು, ಆಕೆಯನ್ನೇ ಮತ್ತೆ ಕೋಳೋಣ ಅಂದುಕೊಂಡ. ಆದರೆ ಪ್ರೀತಿ ರಿಜೆಕ್ಟ್ ಮಾಡಿದ ಘಟನೆ ನೆನೆದು ಅವಳ ಸಹವಾಸವೇ ಬೇಡ ಎಂದು ಸೈಲೆಂಟ್ ಆದ.

ಇದನ್ನೂ ಓದಿ: Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ

ಪ್ರೀತಿ ರಿಜೆಕ್ಟ್ ಮಾಡಿ, ರಿಷಿಗೆ ತುಂಬಾ ನೋವು ಕೊಟ್ಟೆ ಎಂದು ನೊಂದುಕೊಳ್ಳುತ್ತಿದ್ದ ವಸುಧರಾ ಕನಸಲ್ಲಿ ರಿಷಿಗೆ ಪ್ರಪೋಸ್ ಮಾಡಿದಳು. ಅವತ್ತು ಪ್ರೀತಿ ರಿಜೆಕ್ಟ್ ಮಾಡಿದೆ ಆದರೆ ಇವಾಗ ಗೊತ್ತಾಯಿತು, ಐ ಲವ್ ಯೂ ಸರ್ ಎಂದು ರಿಷಿ ಮುಂದೆ ಪ್ರೀತಿ ವಿಚಾರ ಬಾಯ್ಬಿಟ್ಟಳು. ಇಷ್ಟೆಲ್ಲ ನೋವು ಕೊಟ್ಟು ಈಗ ಪ್ರೀತಿ ಇದೆ ಎಂದು ಹೇಳುತ್ತಿದ್ದಿಯಾ ಎಂದು ವಸು ಕಪಾಳಕ್ಕೆ ಜೋರಾಗಿ ಬಾರಿಸಿದ ರಿಷಿ. ನಿದ್ದೆಯಲ್ಲಿದ್ದ ವಸುಧರಾ ಬೆಚ್ಚಿಬಿದ್ದು ಎದ್ದು ಕುಳಿತಳು. ಇದು ಕನಸು ಅಷ್ಟೆನಾ ಎಂದುಕೊಂಡು ಸಮಾಧಾನ ಪಟ್ಟುಕೊಂಡಳು.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ಕಾಲೇಜಿಗೆ ಹೊರಟ ವಸುಗೆ ಸಾಕ್ಷಿ ಎದುರಾದಳು. ರಿಷಿಯನ್ನು ಕಾಪಾಡಿದ್ದಕ್ಕೆ ಸ್ವೀಟ್ ಕೊಟ್ಟಳು ಸಾಕ್ಷಿ. ವಸುಧರಾಗೆ ಆಗಲೇ ರಿಷಿ ಮೇಲೆ ಪ್ರೀತಿ ಇದೆ ಎನ್ನುವ ಕ್ಲಾರಿಟಿ ಸಿಕ್ಕಿದೆ. ಸಾಕ್ಷಿ ಮುಂದೆ ಧೈರ್ಯವಾಗಿಯೇ ಮಾತನಾಡಿದ ವಸು, ‘ರಿಷಿ ಸರ್ ಸಿಕ್ತಾರೆ ಅಂತ ಕನಸು ಕಾಣಬೇಡ, ಯಾವತ್ತೂ ಸಿಗಲ್ಲ. ಸಿಗೋಕೆ ಬಿಡೋದೂ ಇಲ್ಲ’ ಎಂದು ಸಾಕ್ಷಿಗೆ ಖಡಕ್ ಆಗಿ ಹೇಳಿದಳು. ವಸು ಮಾತು ಕೇಳಿ ಶಾಕ್ ಆದಳು ಸಾಕ್ಷಿ. ರಿಷಿಯಿಂದ ದೂರ ಆಗ್ತೀನಿ ಅಂತ ಹೇಳಿ ಈಗ್ಯಾಕೆ ಹೊಸ ಡ್ರಾಮ ಮಾಡ್ತಿದ್ದೀಯಾ ಎಂದು ಕಿಡಿ ಕಾರಿದಳು ಸಾಕ್ಷಿ. ಯಾವುದೆೇ ಕಾರಣಕ್ಕೂ ರಿಷಿಯನ್ನು ಬಿಟ್ಟುಕೊಡಲ್ಲ ಎಂದು ಹೇಳಿ ಸ್ವೀಟ್‌ ಅನ್ನು ಸಾಕ್ಷಿಗೆ ತಿನಿಸಿ ಹೊರಟು ಹೋದಳು. ವಸುಧರಾ ವರ್ತನೆ ಸಾಕ್ಷಿಗೆ ಅಚ್ಚರಿ ಮೂಡಿಸಿತು.

ವಸುಧರಾ ಮತ್ತು ರಿಷಿ ಇಬ್ಬರೂ ಮತ್ತೆ ಮೊದಲಿನ ಹಾಗೆ ಆಗಬೇಕೆಂದು ಪ್ಲಾನ್ ಮಾಡಿ ರಿಷಿಯನ್ನು ರೆಸ್ಟೋರೆಂಟ್‌ಗೆ ಕರ್ಕೊಂಡು ಬಂದ ಗೌತಮ್. ಆದರೆ ವಸುಧರಾಳನ್ನು ನೋಡುತ್ತಿದ್ದಂತೆಯೇ ಅಲ್ಲಿಂದ ವಾಪಾಸ್ ಹೊರಟ. ಬಳಿಕ ಮತ್ತೆ ರೆಸ್ಟೋರೆಂಟ್‌ಗೆ ಬಂದ ರಿಷಿ ಧನ್ಯವಾದ ಎಂದು ಬರೆದು ಲೆಟರ್ ಇಟ್ಟು ಹೋದ. ರಿಷಿ ಕೊಟ್ಟ ಲೆಟರ್ ನೋಡಿ ಖುಷಿಯಾದಳು ವಸುಧರಾ. ತನ್ನ ಮನಸ್ಸಲ್ಲಿರೋ ಪ್ರೀತಿಯನ್ನು ಹೇಳಿಕೊಳ್ಳುತ್ತಾಳಾ ವಸುಧರಾ? ಮುಂದಿನ ಸಂಚಿಕೆಯಲ್ಲಿ ಗೋತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.