ಇನ್ಮುಂದೆ ರಾಜಣ್ಣ- ರೂಪೇಶ್ ಬೆಸ್ಟ್ ಫ್ರೆಂಡ್ಸ್ ಅಲ್ಲ; ಒಂದು ಮಾತಿನಿಂದ ಮುರಿದುಬಿತ್ತು ಫ್ರೆಂಡ್ಶಿಪ್
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ತಮ್ಮಿಷ್ಟದ ಸ್ಪರ್ಧಿಗಳಿಗೆ ಪತ್ರ ಬರೆಯುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರೂಪೇಶ್ ರಾಜಣ್ಣ ಅವರು ರೂಪೇಶ್ ಶೆಟ್ಟಿಗೆ ಲೆಟರ್ ಬರೆದಿದ್ದರು.
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ (Roopesh Rajanna), ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ (Aryavardhan Guruji) ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇವರದ್ದು ಒಂದು ಗುಂಪು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇವರ ಮಧ್ಯೆ ಈಗ ವೈಮನಸ್ಸು ಮೂಡಿದೆ. ಇವರು ಬೇರೆ ಆಗುವ ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣ ಆಗಿದ್ದು ರಾಜಣ್ಣ ಆಡಿದ ಮಾತುಗಳು. ಈ ಕಾರಣದಿಂದ ಇವರು ಬೇರೆ ಆಗುವ ಸೂಚನೆ ಸಿಕ್ಕಿದೆ. ಅಷ್ಟಕ್ಕೂ ಇವರ ಮಧ್ಯೆ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ತಮ್ಮಿಷ್ಟದ ಸ್ಪರ್ಧಿಗಳಿಗೆ ಪತ್ರ ಬರೆಯುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರೂಪೇಶ್ ರಾಜಣ್ಣ ಅವರು ರೂಪೇಶ್ ಶೆಟ್ಟಿಗೆ ಲೆಟರ್ ಬರೆದಿದ್ದರು. ‘ನೀವು ಉತ್ತಮರು. ನಾನು ಮನಸ್ಸಲ್ಲಿ ಯಾವುದನ್ನೂ ಇಟ್ಟುಕೊಂಡು ಹೇಳಲ್ಲ. ನಾನು ಹಲವು ಬಾರಿ ಹೇಳಿದ್ರೂ ನೀವು ಅದನ್ನು ತಿದ್ದಿಕೊಂಡಿಲ್ಲ. ಉದಾಹರಣೆಗೆ ಹೇಳಬೇಕು ಎಂದರೆ ಶ್ಯೂ ಹಾಕಿಕೊಂಡಾಗ ಒದೆಯಬೇಡಿ ಎಂದು ಹೇಳಿದ್ದೆ. ಆದರೆ, ಅದನ್ನು ನೀವು ಮುಂದುವರಿಸಿದ್ದೀರಿ. ನನ್ನ ವಯಸ್ಸು 38, ನಿಮ್ಮ ವಯಸ್ಸು 31. ನೀವು ನನಗೆ ಅನೇಕ ಬಾರಿ ಮಗನೇ ಎಂದು ಹೇಳಿದ್ರಿ. ನಾನು ಅದನ್ನು ಹೇಳಬೇಡಿ ಎಂದು ಹೇಳಿದ್ದೆ. ಆದರೆ, ಅದನ್ನು ನೀವು ಮುಂದುವರಿಸಿದ್ದೀರಿ. ಇದು ಸರಿ ಅಲ್ಲ’ ಎಂದು ರೂಪೇಶ್ ರಾಜಣ್ಣ ಓಪನ್ ಆಗಿ ಹೇಳಿದ್ದಾರೆ.
ಈ ಮಾತುಗಳನ್ನು ರೂಪೇಶ್ ರಾಜಣ್ಣ ತುಂಬಾನೇ ಗಂಭೀರವಾಗಿ ಹೇಳಿದ್ದಾರೆ. ಇದರಿಂದ ರೂಪೇಶ್ ಶೆಟ್ಟಿಗೆ ಬೇಸರ ಆಗಿದೆ. ‘ಜತೆಯಲ್ಲೇ ಇದ್ದಾಗ ಇದನ್ನು ಹೇಳಬಹುದಿತ್ತು. ಎಲ್ಲರ ಎದುರು ರೂಪೇಶ್ ರಾಜಣ್ಣ ಹೀಗೆ ಹೇಳಬಾರದಿತ್ತು’ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ. ನವೆಂಬರ್ 20ರ ಎಪಿಸೋಡ್ನಲ್ಲಿ ಈ ವಿಚಾರದ ಬಗೆಗಿನ ಚರ್ಚೆ ಮುಂದುವರಿದಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ.
View this post on Instagram
ಇದನ್ನೂ ಓದಿ: Arun Sagar: ಮಗಳ ಗಲ್ಲಕ್ಕೆ ಗಾಯ; ಬಿಗ್ ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್
ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಮಧ್ಯೆ ನಡೆದ ಮಾತುಕತೆ ಪ್ರೋಮೋದಲ್ಲಿದೆ. ಈ ಪ್ರೋಮೋದಲ್ಲಿ ರೂಪೇಶ್ ಶೆಟ್ಟಿ ಹಾಗೂ ಆರ್ಯುವರ್ಧನ್ ಬೇಸರದಲ್ಲಿ ಮಾತನಾಡಿದ್ದಾರೆ. ನೀವು ಗೆಳೆಯರೇ ಅಲ್ಲ ಎಂಬರ್ಥ ಬರುವ ರೀತಿಯಲ್ಲಿ ಸಂಭಾಷಣೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Tue, 20 December 22