AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹ್ನವಿ ಬಳಸಿದ ಗಾಂಚಲಿ ಪದದಿಂದ ರಣರಂಗ ಆಯ್ತು ಬಿಗ್ ಬಾಸ್ ಮನೆ

ದೊಡ್ಮನೆಯಲ್ಲಿ ಜಗಳ ಆಡುವಾಗ ಮಾತಿನ ಭರದಲ್ಲಿ ಜಾಹ್ನವಿ ಅವರು ಜಂಟಿಗಳ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ. ಗಾಂಚಲಿ ಅಂತ ಬೈಯ್ಯಬೇಡಿ ಎಂದು ಜಂಟಿಗಳೆಲ್ಲರೂ ಜಾಹ್ನವಿ ವಿರುದ್ಧ ರೇಗಾಡಿದ್ದಾರೆ. ಅದರಿಂದ ಬಿಗ್ ಬಾಸ್ ಮನೆಯ ಕೆಲಸಗಳೆಲ್ಲವೂ ನಿಂತಲ್ಲೇ ನಿಂತಿವೆ. ಆಟಕ್ಕಿಂತಲೂ ಜಗಳವೇ ಜಾಸ್ತಿ ಆಗಿದೆ.

ಜಾಹ್ನವಿ ಬಳಸಿದ ಗಾಂಚಲಿ ಪದದಿಂದ ರಣರಂಗ ಆಯ್ತು ಬಿಗ್ ಬಾಸ್ ಮನೆ
Bbk 12
ಮದನ್​ ಕುಮಾರ್​
|

Updated on:Oct 06, 2025 | 10:47 PM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಜಗಳ ಶುರುವಾಗಲು ಒಂದು ಸಣ್ಣ ವಿಷಯ ಸಾಕು. ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ಸಿಗುವ ಸಲವತ್ತುಗಳು ಕೆಲವು ಮಾತ್ರ. ಆದರೆ ಆ ಸವಲತ್ತುಗಳನ್ನು ಕಿತ್ತುಕೊಂಡರೆ ಎಲ್ಲರ ತಾಳ್ಮೆ ಕೆಡುತ್ತದೆ. ಅಂಥ ಪರಿಸ್ಥಿತಿ ಬರಲು ಕಾರಣ ಆದವರ ಮೇಲೆ ಇನ್ನುಳಿದವರು ಕೆಂಡಕಾರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಈಗ ಹಾಗೆಯೇ ಆಗಿದೆ. ಜಂಟಿಗಳು ಮತ್ತು ಒಂಟಿಗಳು ಎಂಬ ಥೀಮ್​​ನಲ್ಲಿ ಈ ಬಾರಿಯ ಆಟ ನಡೆಯುತ್ತಿದೆ. ಜಂಟಿಗಳು ಮಾಡಿದ ತಪ್ಪಿನಿಂದ ಒಂಟಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಅದರಿಂದಾಗಿ ಜಗಳ ಜೋರಾಗಿದೆ. ಈ ನಡುವೆ ಜಾಹ್ನವಿ ಅವರು ಗಾಂಚಲಿ ಎಂಬ ಪದ ಬಳಸಿದ್ದಕ್ಕೆ ಬಿಗ್ ಬಾಸ್ ಮನೆಯೇ ರಣರಂಗ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಿ 7 ದಿನಗಳ ಕಳೆದಿವೆ. ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಮುಂದಿನ ದಿನಗಳ ಸ್ಪರ್ಧೆ ಇನ್ನಷ್ಟು ಕಠಿಣ ಆಗಿರುತ್ತವೆ. ಹಾಗಾಗಿ ಎಲ್ಲರೂ ತಮ್ಮ ಅಸ್ತಿತ್ವಕ್ಕಾಗಿ ಅಗ್ರೆಷನ್ ತೋರಿಸಲು ಆರಂಭಿಸಿದ್ದಾರೆ. ಜಾಹ್ನವಿ, ಮಂಜು ಭಾಷಿಣಿ, ಅಶ್ವಿನಿ ಗೌಡ, ಅಶ್ವಿನಿ, ಅಭಿಷೇಕ್ ಮುಂತಾದವರು ಕೂಗಾಟ ಜಾಸ್ತಿ ಮಾಡಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಜಂಟಿಗಳು ಕೆಲವು ನಿಯಮಗಳನ್ನು ಉಲ್ಲಂಘಿಸಿದರು. ಅದನ್ನು ಬಿಗ್ ಬಾಸ್ ಗಂಭೀರವಾಗಿ ಪರಿಗಣಿಸಿದರು. ಜಂಟಿಗಳು ನಿಯಮ ಉಲ್ಲಂಘಿಸದಂತೆ ಒಂಟಿಗಳು ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ ಒಂಟಿಗಳಿಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮುಂದಿನ ಆದೇಶದ ತನಕ ಒಂಟಿಗಳು ಬೆಡ್ ರೂಮ್ ಬಳಸುವಂತಿಲ್ಲ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಇದರಿಂದ ಜಂಟಿಗಳ ಮೇಲೆ ಒಂಟಿಗಳಿಗೆ ವಿಪರೀತ ಕೋಪ ಬಂದಿದೆ.

ಮಾತಿನ ಭರದಲ್ಲಿ ಜಾಹ್ನವಿ ಅವರು ಜಂಟಿಗಳ ಮೇಲೆ ಗಾಂಚಲಿ ಎಂಬ ಪದ ಬಳಸಿದ್ದಾರೆ. ಆ ಪದವನ್ನು ಕೇಳಿ ಜಂಟಿಗಳು ಗರಂ ಆದರು. ಗಾಂಚಲಿ ಅಂತ ಹೇಳಬೇಡಿ ಎಂದು ಅಶ್ವಿನಿ, ಅಭಿಷೇಕ್, ಮಂಜು ಭಾಷಿಣಿ ಮುಂತಾದವರು ತಿರುಗಿಬಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈ ಮೀರಿತು. ಜಗಳ ಜೋರಾಗಿದೆ.

ಇದನ್ನೂ ಓದಿ: ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ದಾರೆ, ತೇಜೋವಧೆ ಸಹಿಸಲ್ಲ: ಜಾಹ್ನವಿಯ ಮಾಜಿ ಪತಿ ಆಕ್ರೋಶ

ಗಾಂಚಲಿ ಎಂಬುದು ಕೆಟ್ಟ ಪದ ಎಂದು ಮಂಜು ಭಾಷಿಣಿ ಹೇಳಿದರು. ಆದರೆ ಅದು ಒಂದು ಸಾಮಾನ್ಯ ಪದ ಎಂದು ಜಾಹ್ನವಿ ಅವರು ವಾದಿಸಿದರು. ಈ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಮ್ಮತ ಮೂಡಲಿಲ್ಲ. ದೊಡ್ಮನೆಯಲ್ಲಿ ರಂಪಾಟ ಜಾಸ್ತಿ ಆಗಿದೆ. ಕಿತ್ತಾಟ, ಕಿರುಚಾಟವೇ ಅತಿಯಾಗಿದೆ. ಇದರ ನಡುವೆ ಗಿಲ್ಲಿ ಅವರು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡು ಕಾಮಿಡಿ ಕಿಕ್ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:41 pm, Mon, 6 October 25