‘ನನ್ನ ಮಗ ನಿಧನ ಹೊಂದಿಲ್ಲ, ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗಿದೆ’; ಮಂಡ್ಯ ರವಿ ತಂದೆಯ ಸ್ಪಷ್ಟನೆ
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಈಗ ಅವರನ್ನು ಮಂಡ್ಯಕ್ಕೆ ಕರೆದೊಯ್ಯಲಾಗುತ್ತಿದೆ.
‘ನನ್ನ ಮಗ ಸತ್ತಿಲ್ಲ. ಅವನ ಸ್ಥಿತಿ ತುಂಬಾನೇ ಗಂಭೀರವಾಗಿದೆ’ ಎಂದು ಮಂಡ್ಯ ರವಿ ತಂದೆ ಅವರು ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯ ರವಿ (Mandya Ravi) ಜಾಂಡೀಸ್ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ಅವರ ಸ್ಥಿತಿ ಗಂಭೀರ ಆಗಿರುವ ಕಾರಣ ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.
ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಪ್ರಾರ್ಥನೆ: 42ನೇ ವಯಸ್ಸಿಗೆ ಕಿರುತೆರೆ ನಟ ಮಂಡ್ಯ ರವಿ ನಿಧನ
ಮಂಡ್ಯ ರವಿ ಅವರಿಗೆ ಕಾಮಾಲೆ ರೋಗ ಇತ್ತು. ಇದರ ಜೊತೆಗೆ ಕಿಡ್ನಿ ಸಮಸ್ಯೆ ಕಾಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
Published On - 4:59 pm, Wed, 14 September 22