‘ಎಲ್ಲ ಆಸ್ತಿಯನ್ನೂ ಭುವಿಗೆ ಬರೆದಿದ್ದೇನೆ’; ಹರ್ಷನ ಎದುರು ನಿಜ ವಿಚಾರ ರಿವೀಲ್ ಮಾಡಿದ ಅಮ್ಮಮ್ಮ
‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ತಾಯಿ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಇದನ್ನು ಲಕೋಟೆಯಲ್ಲಿ ಬರೆದು ಇಟ್ಟಿದ್ದಾಳೆ. ಆದರೆ, ಈ ವಿಚಾರ ಸದ್ಯಕ್ಕೆ ರಿವೀಲ್ ಆಗಿರಲಿಲ್ಲ.
‘ಕನ್ನಡತಿ’ ಧಾರಾವಾಹಿಯ (Kannadathi Serial) ಕಥೆ ಹೊಸ ರೀತಿಯಲ್ಲಿ ಸಾಗುತ್ತಿದೆ. ಹರ್ಷ ಹಾಗೂ ಭುವಿ ಪರಸ್ಪರ ಪ್ರೀತಿಸಿ ಮದುವೆ ಆದವರು. ಇವರಿಬ್ಬರ ಮದುವೆಯಿಂದ ವಿಲನ್ ಸಾನಿಯಾ ಹಾಗೂ ವರುಧಿನಿ ವಿಚಲಿತಗೊಂಡಿದ್ದಾರೆ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಈ ಮಧ್ಯೆ, ಮಹತ್ವದ ಘಟನೆ ಒಂದು ನಡೆಯುವ ಸೂಚನೆ ಸಿಕ್ಕಿದೆ. ಭುವಿಯ ಹಸರಿಗೆ ಆಸ್ತಿ ಬರೆಯಲಾಗಿದೆ ಎಂಬ ವಿಚಾರವನ್ನು ರತ್ನಮಾಲಾ ರಿವೀಲ್ ಮಾಡಿದ್ದಾಳೆ. ಇದು ಕನಸೋ ಅಥವಾ ನಿಜವೋ ಎಂಬುದಷ್ಟೇ ಸದ್ಯದ ಕುತೂಹಲ.
‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ತಾಯಿ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಇದನ್ನು ಲಕೋಟೆಯಲ್ಲಿ ಬರೆದು ಇಟ್ಟಿದ್ದಾಳೆ. ಆದರೆ, ಈ ವಿಚಾರ ಸದ್ಯಕ್ಕೆ ರಿವೀಲ್ ಆಗಿರಲಿಲ್ಲ. ರತ್ನಮಾಲಾ ಹಾಗೂ ಅವಳ ಮನೆಯ ವಕೀಲನಿಗೆ ಮಾತ್ರ ಈ ವಿಚಾರ ತಿಳಿದಿದೆ. ಈ ವಿಷಯ ಯಾವಾಗ ರಿವೀಲ್ ಆಗಲಿದೆ ಎಂದು ಫ್ಯಾನ್ಸ್ ಕಾದಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.
ರತ್ನಮಾಲಾ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಳೆ. ಅವಳು ಕಂಬ್ಯಾಕ್ ಮಾಡಬೇಕು ಎಂಬುದು ಕುಟುಂಬದವರು ಹಾಗೂ ಧಾರಾವಾಹಿ ವೀಕ್ಷಕರ ಕೋರಿಕೆ. ಶೀಘ್ರದಲ್ಲೇ ರತ್ನಮಾಲಾ ಮರಳಲಿದ್ದಾಳೆ ಎನ್ನಲಾಗುತ್ತಿದೆ. ಒಂದು ದೊಡ್ಡ ಟ್ವಿಸ್ಟ್ ನೀಡಿ ಆಕೆ ಕಂಬ್ಯಾಕ್ ಮಾಡುವ ಸೂಚನೆ ಸಿಕ್ಕಿದೆ. ಈ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ.
ಭುವಿಗೆ ತೊಂದರೆ ಕೊಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾಳೆ ಸಾನಿಯಾ. ಭುವಿ ಅವಳ ಕಾಟ ತಾಳಲಾರದೆ ಕೆಲಸವನ್ನೂ ಕೂಡ ಬಿಟ್ಟಿದ್ದಾಳೆ. ಈಗ ಮಾಲಾ ಸಂಸ್ಥೆಗೆ ಭುವಿ ಎಂಡಿ ಆಗುವ ಸೂಚನೆ ಸಿಕ್ಕಿದೆ. ಅಮ್ಮಮ್ಮನ್ನು ಹಿಂಬದಿಯಿಂದ ತೋರಿಸಲಾಗಿದೆ.
ಇದನ್ನೂ ಓದಿ: ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ
‘ಹರ್ಷ ಹೇಗಿದ್ದೀಯಾ? ನಾನು ಬೇಗ ಬಂದು ಬಿಡ್ತೀನಿ. ಒಂದು ಕೆಲಸ ಬೇಗ ಆಗಬೇಕು. ನಾನು ಗಂಭೀರ ವಿಚಾರ ಹೇಳಬೇಕಿತ್ತು. ಭುವಿ ಹತ್ತಿರ ಒಂದು ಲಕೋಟೆ ಇದೆ. ಇಡೀ ಆಸ್ತಿ ಅವಳ ಹೆಸರಿಗೆ ಬರೆದಿದ್ದೇನೆ. ಬೇಸರ ಮಾಡಿಕೊಳ್ಳಬೇಡ. ಇದು ನಿನಗೆ ಬೇಡ. ಎಲ್ಲವನ್ನೂ ಅವಳೇ ನೋಡಿಕೊಂಡು ಹೋಗ್ತಾಳೆ’ ಎಂದು ಅಮ್ಮಮ್ಮನ ಮಾತನ್ನು ತೋರಿಸಲಾಗಿದೆ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ. ಇದು ಕನಸೋ ಅಥವಾ ನನಸೋ ಎಂಬ ಪ್ರಶ್ನೆಯೂ ವೀಕ್ಷಕರ ಮನದಲ್ಲಿದೆ.
Published On - 5:14 pm, Wed, 27 July 22