
‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬುದು ವಿಶೇಷ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಈ ಸಿನಿಮಾಗೆ ಮತ್ತೊಂದು ಭಾಗ ಬರಲಿದೆ ಎಂದು ಚಾಪ್ಟರ್ 1 ಕ್ಲೈಮ್ಯಾಕ್ಸ್ನಲ್ಲಿ ಹೇಳಲಾಗಿತ್ತು. ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ.
‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಮಾಡೋದಾಗಿ ತಂಡದವರು ಹೇಳಿದರು. ರಿಷಬ್ ಅವರು ಒಂದು ವರ್ಷಗಳ ಕಾಲ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ‘ಕಾಂತಾರ: ಚಾಪ್ಟರ್ 2’ ಬರಲಿದೆ ಎಂಬ ಮಾಹಿತಿ ನೀಡಲಾಗಿದೆ. ‘ಕಾಂತಾರ’ ಸಿನಿಮಾದ ಸೀಕ್ವೆಲ್ ಇದಾಗಲಿದೆ. ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬ ಬಗ್ಗೆ ರಿಷಬ್ ಅವರು ಇಷ್ಟು ದಿನ ಪ್ರತಿಕ್ರಿಯೆ ನೀಡಿರಿಲಿಲ್ಲ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ರಿಷಬ್ ಸದ್ಯ ಬ್ರೇಕ್ನಲ್ಲಿ ಇದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.
ಜೀ ಕನ್ನಡದಲ್ಲಿ ‘ಜೀ ಕುಟುಂಬ ಅವಾರ್ಡ್ಸ್’ ಪ್ರಸಾರ ಕಾಣುವುದಿದೆ. ಇದರ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ರಿಷಬ್ ಶೆಟ್ಟಿ ಅವರು ಇದಕ್ಕೆ ಅತಿಥಿಯಾಗಿ ತೆರಳಿದ್ದರು. ಆಗ ‘ಕಾಂತಾರ: ಚಾಪ್ಟರ್ 2’ ಚಿತ್ರದ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ನೆಕ್ಸ್ಟ್ ರೆಸ್ಟ್’ ಎಂದು ರಿಷಬ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ವಿಶ್ವ ಮಟ್ಟದಲ್ಲಿ 700 ಕೋಟಿ; ಕನ್ನಡಕ್ಕಿಂತ ಹಿಂದಿಯಲ್ಲೇ ಹೆಚ್ಚು ಗಳಿಕೆ
‘ನನಗೆ ಕೆರ್ಕೊಳಕೆ ಪುರುಸೊತ್ತು ಇರಬಾರದು, ಅಷ್ಟು ಕೆಲಸ ಕೊಡಬೇಕು’ ಎಂದು ರಿಷಬ್ ದೇವರ ಬಳಿ ಕೇಳಿಕೊಂಡಿದ್ದರಂತೆ. ಅದು ಈಗ ಈಡೇರಿದೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಸದ್ಯಕ್ಕಂತೂ, ‘ಕಾಂತಾರ: ಚಾಪ್ಟರ್ 2’ ಸೆಟ್ಟೇರಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.