AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು; ಕರ್ಣನ ತಂದೆ ರಿವೀಲ್

‘ಕರ್ಣ’ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ರಮೇಶ್ ಸಹೋದರಿ ತಾರಾ, ಕರ್ಣ ರಮೇಶ್‌ನ ಸ್ವಂತ ಮಗ ಎಂಬ ಕಟು ಸತ್ಯ ಬಹಿರಂಗಪಡಿಸಿದ್ದಾಳೆ. ಹಾದಿಬದಿಯ ಮಗನೆಂದು ಕೀಳಾಗಿ ಕಂಡ ರಮೇಶ್‌ಗೆ ಈಗ ಕರ್ಣನಿಂದಲೇ ಸಂಕಷ್ಟ. ಕಥೆ ರೋಚಕವಾಗಿದ್ದು, ರಮೇಶ್‌ಗೆ ಬೇರೆ ಪತ್ನಿ ಇದ್ದಳೇ ಎಂಬ ಅನುಮಾನವೂ ಮೂಡಿದೆ.

‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು; ಕರ್ಣನ ತಂದೆ ರಿವೀಲ್
ಕರ್ಣ ಧಾರಾವಾಹಿImage Credit source: Zee Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 09, 2026 | 7:56 AM

Share

‘ಕರ್ಣ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ಟಿಆರ್​​​ಪಿಯಲ್ಲೂ ನಂಬರ್ 1 ಸ್ಥಾನದಲ್ಲಿ ಇದೆ. ಹೀಗಿರುವಾಗಲೇ ‘ಕರ್ಣ’ ಧಾರಾವಾಹಿಯಲ್ಲಿ ಒಂದು ಕಟು ಸತ್ಯವೂ ರಿವೀಲ್ ಆಗಿದೆ ಎನ್ನಬಹುದು. ಕರ್ಣನು ರಮೇಶ್ ಮಗ ಎಂಬ ಕಟು ಸತ್ಯವನ್ನು ರಮೇಶ್ ತಂಗಿ ತಾರಾ ರಿವೀಲ್ ಮಾಡಿದ್ದಾಳೆ. ಇದು ಶಾಕಿಂಗ್ ಎನಿಸಿದೆ. ಇದು ಧಾರಾವಾಹಿಯಲ್ಲಿ ದೊಡ್ಡ ತಿರುವಿಗೆ ಕಾರಣ ಆಗಬಹುದು ಎಂದು ಊಹಿಸಲಾಗಿದೆ. ಮುಂದಿನ ಕಥೆ ಮತ್ತಷ್ಟು ರೋಚಕವಾಗಿದೆ.

‘ಕರ್ಣ’ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿವೆ. ಇದರಲ್ಲಿ ಈಗ ದೊಡ್ಡ ತಿರುವು ಬರುವ ಸೂಚನೆ ಸಿಕ್ಕಿದೆ. ಅದೇನೆಂದರೆ, ಕರ್ಣ ಧಾರಾವಾಹಿಯಲ್ಲಿ ಕರ್ಣನು ಹಾದಿಯಲ್ಲಿ ಸಿಕ್ಕ ಮಗ ಎಂದು ಹೇಳಲಾಗಿತ್ತು. ಆತ ಬೀದಿಯಲ್ಲಿ ಸಿಕ್ಕವನು ಎಂಬ ಕಾರಣಕ್ಕೆ ರಮೇಶ್ ಆತನನ್ನು ಕೀಳಾಗಿ ನೋಡುತ್ತಾ ಬಂದಿದ್ದಾನೆ. ಆದರೆ, ಅಸಲಿ ಕಥೆ ಬೇರೆಯೇ ಇದೆ.

ಆದರೆ, ಈಗ ಎಲ್ಲವೂ ಬದಲಾಗಿದೆ. ರಮೇಶ್ ಸಹೋದರಿ ಒಂದು ಶಾಕಿಂಗ್ ವಿಷಯ ರಿವೀಲ್ ಮಾಡಿದ್ಧಾಳೆ. ಕರ್ಣನು ರಮೇಶ್ ಮಗ ಎಂಬುದನ್ನು ಹೇಳಿದ್ದಾಳೆ. ಕರ್ಣನಿಗೆ ಸಾಕಷ್ಟು ತೊಂದರೆ ಕೊಡುವ ಕೆಲಸ ರಮೇಶ್​​ನಿಂದ ಆಗಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಕರ್ಣ ತೊಂದರೆ ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ. ‘ನಾನು ಆಟ ಆಡಿಸ್ತೀನಿ, ನೀನು ಆಟ ಆಡಬೇಕು’ ಎಂದು ಅವಾಜ್ ಹಾಕಿದ್ದಾನೆ ಕರ್ಣ.

ಇದನ್ನೂ ಓದಿ: ಗೋವಾ, ಗೋಕರ್ಣದಲ್ಲಿ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾಗೆ ಮೊದಲ ಹಂತದ ಶೂಟಿಂಗ್

ಹೀಗಿರುವಾಗಲೇ ರಮೇಶ್​​ನ ಸ್ಥಿತಿ ನೋಡಿ ಆತನ ಸಹೋದರಿ ತಾರಾ ಒಳಗೊಳಖಗೆ ಖುಷಿ ಆಗಿದ್ದಾಳೆ. ‘ನಿನಗೆ ಈ ಪರಿಸ್ಥಿತಿ ಬರೋಕೆ ನಿನ್ನ ಸ್ವಂತ ಮಗನೇ ಕಾರಣ ಅಣ್ಣ’ ಎಂದು ಹೇಳಿಕೊಂಡಿರುವುದು ಚರ್ಚೆಗೆ ಕಾರಣ ಆಗಿದೆ. ‘ಕರ್ಣ’ ಧಾರಾವಾಹಿಯಲ್ಲಿ ರಮೇಶ್​​ಗೆ ಮತ್ತೊಂದು ಪತ್ನಿ/ ಪ್ರೀತಿ ಇತ್ತು ಎಂಬ ಅನುಮಾನ ಆರಂಭದಲ್ಲೇ ಬಂದಿತ್ತು. ಆದರೆ, ನಂತರ ಅದು ಅಲ್ಲಿಗೇ ನಿಂತಿತ್ತು. ಈಗ ಈ ಅನುಮಾನ ಮತ್ತಷ್ಟು ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!