‘ನಾನಿಲ್ಲದೆ ಕಾರ್ತಿಕ್ ಜೀರೋ’; ಮುಲಾಜಿಲ್ಲದೆ ಹೇಳಿದ ಸಂಗೀತಾ ಶೃಂಗೇರಿ

|

Updated on: Jan 19, 2024 | 2:28 PM

. ಕ್ಲೋಸ್ ಸರ್ಕಲ್​ನಲ್ಲಿದ್ದ ತನಿಷಾ ಎಲಿಮಿನೇಟ್ ಆಗಿದ್ದಾರೆ. ನಮ್ರತಾ ಕೂಡ ದೂರ ಆಗಿದ್ದಾರೆ. ಸಂಗೀತಾ ಅಂತೂ ಕಾರ್ತಿಕ್ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ‘ನಾನಿಲ್ಲದೆ ಕಾರ್ತಿಕ್ ಜೀರೋ’ ಎಂದು ಸಂಗೀತಾ ಹೇಳಿದ್ದಾರೆ.

‘ನಾನಿಲ್ಲದೆ ಕಾರ್ತಿಕ್ ಜೀರೋ’; ಮುಲಾಜಿಲ್ಲದೆ ಹೇಳಿದ ಸಂಗೀತಾ ಶೃಂಗೇರಿ
ಸಂಗೀತಾ-ಕಾರ್ತಿಕ್
Follow us on

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ (Karthik Mahesh) ಅವರು ತಮ್ಮ ನಿಜವಾದ ಗೇಮ್​ನತ್ತ ಗಮನ ಹರಿಸಲು ವಿಫಲರಾಗುತ್ತಿದ್ದಾರೆ. ಅವರು ಇತ್ತೀಚೆಗೆ ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಿರುವುದೇ ಇದಕ್ಕೆ ಕಾರಣ. ಕ್ಲೋಸ್ ಸರ್ಕಲ್​ನಲ್ಲಿದ್ದ ತನಿಷಾ ಎಲಿಮಿನೇಟ್ ಆಗಿದ್ದಾರೆ. ನಮ್ರತಾ ಕೂಡ ದೂರ ಆಗಿದ್ದಾರೆ. ಸಂಗೀತಾ ಅಂತೂ ಕಾರ್ತಿಕ್ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ‘ನಾನಿಲ್ಲದೆ ಕಾರ್ತಿಕ್ ಜೀರೋ’ ಎಂದು ಸಂಗೀತಾ ಹೇಳಿರೋ ಮಾತು ಗಮನ ಸೆಳೆದಿದೆ. ತುಕಾಲಿ ಸಂತೋಷ್ ಬಳಿ ಸಂಗೀತಾ ಈ ಮಾತನ್ನು ಹೇಳಿದ್ದಾರೆ.

ಇತ್ತೀಚೆಗೆ ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಆಗಮಿಸಿದ್ದರು. ಈ ವೇಳೆ ಹೊರಗೆ ಯಾವ ರೀತಿ ಕಾಣುತ್ತಿದೆ ಎಂಬುದನ್ನು ಕೆಲವರು ಹೇಳಿದ್ದರು. ಈ ಪೈಕಿ ಅನೇಕರು ಹೈಲೈಟ್ ಮಾಡಿದ್ದು ನಮ್ರತಾ ಹಾಗೂ ಕಾರ್ತಿಕ್ ಫ್ರೆಂಡ್​ಶಿಪ್​ನ. ಇದು ಬೇರೆ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಸ್ನೇಹಿತ್, ಮೈಕಲ್ ಮೊದಲಾದವರು ಹೇಳಿದ್ದರು. ಇದು ಕಾರ್ತಿಕ್​ ಹಾಗೂ ನಮ್ರತಾಗೆ ಅತಿಯಾಗಿ ಕಾಡಿದೆ.

ಇದನ್ನೂ ಓದಿ: ‘ಮೊದಲು ನೀವು ಏನು ಅಂತ ನೋಡಿಕೊಳ್ಳಿ’: ಸಂಗೀತಾಗೆ ವರ್ತೂರು ಸಂತೋಷ್​ ಆವಾಜ್​

ತುಕಾಲಿ ಸಂತೋಷ್ ಕಿವಿಗೂ ಈ ವಿಚಾರ ಬಿದ್ದಿದೆ. ಇದನ್ನು ಸಂಗೀತಾ ಕಿವಿಗೆ ತಲುಪಿಸುವ ಕೆಲಸ ಮಾಡಲು ಬಂದರು ಅವರು. ‘ನಾನು ಕಾರ್ತಿಕ್​ಗೆ ಮೊದಲೇ ಹೇಳಿದ್ದೆ. ಸರಿಯಾಗಿ ಕಾಣುತ್ತಿಲ್ಲ ಎಂದು ಎಚ್ಚರಿಸಿದ್ದೆ’ ಎಂದು ಹೇಳೋಕೆ ಬಂದರು ತುಕಾಲಿ ಸಂತೋಷ್. ‘ಅವರದ್ದು ಅವರಿಗೆ ಬಿಡಿ. ನಿಮಗೆ ಯಾಕೆ ಅದರ ಆಲೋಚನೆ. ನನಗೂ ಅದು ಅನಿಸಿದೆ. ಆದರೆ, ಹೇಳಿದರೆ ಬೇರೆ ರೀತಿ ಅರ್ಥ ಆಗುತ್ತದೆ ಎಂದು ನಾನೇ ಸುಮ್ಮನಿದ್ದೆ. ನಾನಿಲ್ಲದೆ ಕಾರ್ತಿಕ್ ನಿಜಕ್ಕೂ ಜೀರೋ’ ಎಂದರು ಸಂಗೀತಾ ಶೃಂಗೇರಿ. ಇದಕ್ಕೆ ತುಕಾಲಿ ಸಂತೋಷ್ ಕೂಡ ತಲೆ ಆಡಿಸಿದರು.

ಏನಿದು ಜೀರೋ ಲೆಕ್ಕಾಚಾರ

ಬಿಗ್ ಬಾಸ್ ಮನೆಯಲ್ಲಿ ಈ ಮೊದಲು ಚಟುವಟಿಕೆ ಒಂದನ್ನು ನೀಡಲಾಗಿತ್ತು. ಇದರ ಪ್ರಕಾರ ಯಾರು ಇಲ್ಲದಿದ್ದರೆ ಯಾರು ಜೀರೋ ಎಂದು ಹೇಳಬೇಕಿತ್ತು. ‘ಕಾರ್ತಿಕ್ ಇಲ್ಲದೆ ಸಂಗೀತಾ ಜೀರೋ’ ಎಂದಿದ್ದರು ವಿನಯ್‌. ‘ಸಂಗೀತಾ ಇಲ್ಲದೆ ಕಾರ್ತಿಕ್ ಜೀರೋ’ ಎಂದು ನಮ್ರತಾ ಹಾಗೂ ವರ್ತೂರು ಸಂತೋಷ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:59 pm, Fri, 19 January 24