‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​

ಬಿಗ್​ ಬಾಸ್​ಗೆ ಬರುವುದಕ್ಕೂ ಮುನ್ನವೇ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಸ್ನೇಹಿತರಾಗಿದ್ದರು. ಆದರೆ ದೊಡ್ಮನೆಯೊಳಗೆ ಅವರಿಬ್ಬರು ಕಿತ್ತಾಡುವಂತೆ ಆಯಿತು. ಈಗ ಮನೆಯ ವಾತಾವರಣ ಬದಲಾಗುತ್ತಿದೆ. ವಿನಯ್​-ಕಾರ್ತಿಕ್​ ಒಂದಾಗಿದ್ದಾರೆ. ಆದರೆ ಸಂಗೀತಾ ಶೃಂಗೇರಿ ಅವರನ್ನು ಕಂಡರೆ ವಿನಯ್​ ಗೌಡ ಅವರಿಗೆ ಆಗುವುದಿಲ್ಲ.

‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​
ವಿನಯ್​ ಗೌಡ, ಕಾರ್ತಿಕ್​ ಮಹೇಶ್​

Updated on: Dec 11, 2023 | 10:11 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ವಿನಯ್​ ಗೌಡ (Vinay Gowda) ಮತ್ತು ಕಾರ್ತಿಕ್​ ಮಹೇಶ್​ ಅವರು ಪರಮ ವೈರಿಗಳಂತೆ ಆಡುತ್ತಿದ್ದರು. ಹಲವು ಟಾಸ್ಕ್​ಗಳಲ್ಲಿ ಅವರಿಬ್ಬರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಸದಾ ಕಾಲ ಸಂಗೀತಾ ಶೃಂಗೇರಿ ಜೊತೆ ಇರುತ್ತಿದ್ದ ಕಾರ್ತಿಕ್​ ಮಹೇಶ್​ (Karthik Mahesh) ಅವರು ವಿನಯ್​ ಗೌಡ ಜೊತೆ ದ್ವೇಷ ಕಟ್ಟಿಕೊಂಡಿದ್ದರು. ಆದರೆ ಈಗ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ವಾತಾವರಣ ಬದಲಾಗಿದೆ. ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಪರಸ್ಪರ ಕೈ ಜೋಡಿಸಿದ್ದಾರೆ. ಇದರಿಂದ ದೊಡ್ಮನೆಯ ಆಟ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

ಸಂಗೀತಾ ಶೃಂಗೇರಿ ಅವರನ್ನು ಕಂಡರೆ ವಿನಯ್​ ಗೌಡ ಅವರಿಗೆ ಆಗುವುದಿಲ್ಲ ಎಂಬುದು ಬಹಿರಂಗ ಸತ್ಯ. ಬಿಗ್​ ಬಾಸ್​ಗೆ ಬರುವುದಕ್ಕೂ ಮುನ್ನವೇ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಸ್ನೇಹಿತರಾಗಿದ್ದರು. ಆದರೆ ದೊಡ್ಮನೆಯೊಳಗೆ ಅವರಿಬ್ಬರು ಕಿತ್ತಾಡುವಂತೆ ಆಯಿತು. ಇದಕ್ಕೆಲ್ಲ ಸಂಗೀತಾ ಶೃಂಗೇರಿ ಕಾರಣ ಎಂಬ ಅನಿಸಿಕೆ ಹಲವರದ್ದು. ಈಗ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಅವರು ಸ್ನೇಹದಿಂದ ಆಟ ಮುಂದುವರಿಸಲು ನಿರ್ಧರಿಸಿದ್ದಾರೆ.

‘ನಿನ್ನತನ ನೀವು ಬಿಟ್ಟುಕೊಡಬೇಡ, ನನ್ನತನ ನಾನು ಬಿಟ್ಟುಕೊಡಲ್ಲ. ನೀನು ಚೆನ್ನಾಗಿ ಆಡುತ್ತಿದ್ದೀಯ. ನಮ್ಮ ಮಧ್ಯೆ ಯಾರೇ ಬಂದರೂ ಕೂಡ ಯಾವತ್ತಿದ್ದರೂ ನೀನು ನನ್ನ ಫ್ರೆಂಡ್​’ ಎಂದು ವಿನಯ್​ ಗೌಡ ಹೇಳಿದ್ದಾರೆ. ಅದಕ್ಕೆ ಕಾರ್ತಿಕ್​ ಮಹೇಶ್​ ಕೂಡ ಹೌದು ಎಂದಿದ್ದಾರೆ. ಇಬ್ಬರೂ ಕೂಡ ಕೈ ಜೋಡಿಸಿದ್ದು, ಇನ್ಮುಂದೆ ಅವರ ಆಟದ ವೈಖರಿ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಕಣ್ಣು ತೆಗೆದುಬಿಡಿ..’: ವೈದ್ಯರಿಗೆ ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದು ಯಾಕೆ?

ಸಂಗೀತಾ ಶೃಂಗೇರಿ ಅವರ ಕಣ್ಣಿಗೆ ನೋವಾಗಿದೆ. ಅದು ಇನ್ನೂ ಸರಿ ಆಗಿಲ್ಲ. ಅವರ ಓಲೈಸಲು ಕಾರ್ತಿಕ್​ ಮಹೇಶ್​ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಅವರ ನಡುವಿನ ಸಂಬಂಧ ಈಗ ಮೊದಲಿನಂತೆ ಇಲ್ಲ. ಅಪಾರ್ಥ ಮಾಡಿಕೊಳ್ಳುವುದು, ಪದೇ ಪದೇ ಜಗಳ ಆಡುವುದು ಮುಂದುವರಿದಿದೆ. ಇದು ಇಬ್ಬರ ಆಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ದಿನ ಕಳೆದಂತೆಲ್ಲ ಪೈಪೋಟಿ ಜೋರಾಗುವುದರಿಂದ ಸ್ನೇಹ, ಮುಲಾಜು ಬಿಟ್ಟು ಆಟ ಆಡುವುದು ಅನಿವಾರ್ಯ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us