‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಬಗ್ಗೆ ಸುದೀಪ್ ಮಾತು; ಲೀಕ್ ಆಯ್ತು ಲುಕ್

| Updated By: ರಾಜೇಶ್ ದುಗ್ಗುಮನೆ

Updated on: Jul 13, 2022 | 7:23 PM

Kannada Bigg Boss Season 9: ‘ಬಿಗ್ ಬಾಸ್’ ಶೋ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಎಲ್ಲಾ ಸೀಸನ್​ಗಳು ಯಶಸ್ಸು ಕಂಡಿದೆ. ಎಂಟನೇ ಸೀಸನ್ ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಈಗ ಹೊಸ ಸೀಸನ್ ಆಗಸ್ಟ್​ನಲ್ಲೇ ಆರಂಭವಾಗುವ ನಿರೀಕ್ಷೆ ಇದೆ.

‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಬಗ್ಗೆ ಸುದೀಪ್ ಮಾತು; ಲೀಕ್ ಆಯ್ತು ಲುಕ್
ಸುದೀಪ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada 9) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾರೆಲ್ಲ ದೊಡ್ಮನೆ ಒಳಗೆ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. ಹೀಗಿರುವಾಗಲೇ ಹೊಸ ಸೀಸನ್​ನ ಪ್ರೋಮೋ ಶೂಟಿಂಗ್ ಪೂರ್ಣಗೊಂಡಿದೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಕಡೆಯಿಂದಲೇ ಅಪ್​ಡೇಟ್​ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಕಂಡ ಬಳಿಕ ಹೊಸ ಸೀಸನ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.

‘ಬಿಗ್ ಬಾಸ್’ ಶೋ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಎಲ್ಲಾ ಸೀಸನ್​ಗಳು ಯಶಸ್ಸು ಕಂಡಿದೆ. ಎಂಟನೇ ಸೀಸನ್ ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಈಗ ಹೊಸ ಸೀಸನ್ ಆಗಸ್ಟ್​ನಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್ ಪ್ರೋಮೋ ಹೇಗಿರಲಿದೆ ಎನ್ನುವ ಕುತೂಹಲ ಕಾಡುತ್ತಿದೆ. ‘ಬಿಗ್ ಬಾಸ್ ಕನ್ನಡ ಹೊಸ ಸೀಸನ್​ಗಾಗಿ ಪ್ರೋಮೋ ಶೂಟ್ ಮುಗಿಸಿದೆ. ಇಡೀ ತಂಡಕ್ಕೆ ನನ್ನ ಧನ್ಯವಾದ. ಈ ಶೂಟ್​ನಲ್ಲಿ ಭಾಗಿಯಾದ ಎಲ್ಲರಿಗೂ ಥ್ಯಾಂಕ್ಸ್​. ಪ್ರೋಮೋ ಶೀಘ್ರವೇ ಬರಲಿದೆ. ನಿಜಕ್ಕೂ ಇದು ಸೂಪರ್ ಘೋಷಣೆ’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ
BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ
‘ಬಿಗ್ ಬಾಸ್’ ಹೊಸ ಸೀಸನ್​ ಬಗ್ಗೆ ಆರಂಭವಾಗಿದೆ ಗುಸುಗುಸು; ಆರಂಭ ಯಾವಾಗ?
‘ಬಿಗ್​ ಬಾಸ್​ ತೆಲುಗು ಸೀಸನ್​ 6’ ರಿಯಾಲಿಟಿ ಶೋಗೆ ನಿರೂಪಕಿ ಆಗ್ತಾರಾ ಸಮಂತಾ ರುತ್​ ಪ್ರಭು?
ಲೈವ್​ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ

ಹೊಸ ಸೀಸನ್ ಆರಂಭಕ್ಕೂ ಮೊದಲೇ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಜನಸಾಮಾನ್ಯರಿಗೂ ಅವಕಾಶ ನೀಡಬೇಕು ಎನ್ನುವ ಕೋರಿಕೆ ಇಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ವ್ಯಕ್ತಿಗಳಿಗೆ ಕಳೆದ ಸೀಸನ್​ನಲ್ಲಿ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಹಿರಿತೆರೆ ಹಾಗೂ ಕಿರುತೆರೆಯಿಂದ ಯಾರು ಆಗಮಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ‘ಬಿಗ್ ಬಾಸ್’ ಹೊಸ ಸೀಸನ್​ ಬಗ್ಗೆ ಆರಂಭವಾಗಿದೆ ಗುಸುಗುಸು; ಆರಂಭ ಯಾವಾಗ?

ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ. ಈ ಸಿನಿಮಾ ತೆರೆಕಂಡ ಬಳಿಕ ಬಿಗ್ ಬಾಸ್ ಆರಂಭ ಆಗಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಕೊವಿಡ್ ಅಬ್ಬರ ಇಲ್ಲದ ಕಾರಣ ಈ ಬಾರಿ ಅದ್ದೂರಿಯಾಗಿ ‘ಬಿಗ್ ಬಾಸ್’ ಆರಂಭ ಆಗಲಿದೆ ಎನ್ನಲಾಗುತ್ತಿದೆ.

Published On - 7:10 pm, Wed, 13 July 22