ಬಿಗ್​ ಬಾಸ್​ ಕನ್ನಡ 11: ಹೊಸ ಆ್ಯಂಕರ್​ ಬಗ್ಗೆ ಸುಳಿವು ನೀಡಿದ ‘ಕಲರ್ಸ್​ ಕನ್ನಡ’

ಪ್ರೋಮೋದ ಕೊನೆಯಲ್ಲಿ ನಗುವ ಧ್ವನಿ ಇದೆ. ಅದು ರಿಷಬ್​ ಶೆಟ್ಟಿ ಅವರ ಧ್ವನಿ ಎಂದು ಕೆಲವರು ಊಹಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ಕ್ಕೆ ಆ್ಯಂಕರ್​ ಬದಲಾಗುತ್ತಾರೆ ಎಂಬ ಊಹೆಯ ಬಗ್ಗೆ ಪ್ರೇಕ್ಷಕರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರದಲ್ಲೇ ಶೋ ಆರಂಭ ಆಗಲಿದೆ. ಕಂಟೆಸ್ಟೆಂಟ್ಸ್​ ಯಾರು ಎಂಬ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.

ಬಿಗ್​ ಬಾಸ್​ ಕನ್ನಡ 11: ಹೊಸ ಆ್ಯಂಕರ್​ ಬಗ್ಗೆ ಸುಳಿವು ನೀಡಿದ ‘ಕಲರ್ಸ್​ ಕನ್ನಡ’
ಬಿಗ್​ ಬಾಸ್​ ಕನ್ನಡ ಸೀಸನ್​ 11
Follow us
ಮದನ್​ ಕುಮಾರ್​
|

Updated on: Sep 10, 2024 | 9:19 PM

ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶುರುವಾಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬುದಕ್ಕಿಂತಲೂ ಆ್ಯಂಕರ್​ ಯಾರು ಎಂಬ ಪ್ರಶ್ನೆಯೇ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ. ಆ ಪ್ರಶ್ನೆಯನ್ನು ಇನ್ನಷ್ಟು ದೊಡ್ಡದು ಮಾಡುವ ರೀತಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಕಲರ್ಸ್​ ಕನ್ನಡ’ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ಪ್ರೋಮೋ ವೈರಲ್​ ಆಗಿದೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿಲ್ಲ. ಅವರಿಗೆ ಸಂಬಂಧಿಸಿದ ಹ್ಯಾಶ್​ ಟ್ಯಾಗ್​ ಕೂಡ ಇಲ್ಲ! ಹಾಗಾಗಿ ವೀಕ್ಷಕರಲ್ಲಿ ಕೌತುಕ ಜಾಸ್ತಿ ಆಗಿದೆ.

ಕಿಚ್ಚ ಸುದೀಪ್​ ಅವರು ಕಳೆದ 10 ಸೀಸನ್​ಗಳಿಗೆ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್​ ಎಂದರೆ ಸುದೀಪ್​, ಸುದೀಪ್​ ಎಂದರೆ ಬಿಗ್ ಬಾಸ್​ ಎಂಬ ರೀತಿ ಭಾವನೆ ಎಲ್ಲರಲ್ಲೂ ಇದೆ. ಆದರೆ ಈ ಬಾರಿ ಅವರು ಇರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಹೊಸ ಸೀಸನ್​ಗೆ ನಿರೂಪಕರ ಬದಲಾವಣೆ ಆಗಲಿದೆ ಎಂಬ ಗಾಸಿಪ್​ ಸಾಕಷ್ಟು ದಿನಗಳಿಂದ ಕೇಳಿಬರುತ್ತಿದೆ.

ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..

ಹೊಸ ಪ್ರೋಮೋದಲ್ಲಿ ಏನಿದೆ?

‘ಇದು ಬಿಗ್​ ಬಾಸ್​.. ನಮಸ್ಕಾರ ಕರ್ನಾಟಕ, ಹೇಗಿದ್ದೀರ? 10 ವರ್ಷದಿಂದ ನೋಡ್ತಾನೇ ಇದ್ದೀರ. ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕೆಂದರೆ ಇದು ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ’ ಎಂಬ ಬಿಗ್​ ಬಾಸ್​ ಧ್ವನಿ ಕೇಳಿಸಿದೆ. ‘ಹಾಗಾದ್ರೆ ಆ್ಯಂಕರ್​ ಕೂಡ ಹೊಸುಬ್ರ?’ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಆ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಈ ಪ್ರೋಮೋಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ‘ಆ್ಯಂಕರ್​ ಚೇಂಜ್​ ಮಾಡಬೇಡಿ’ ಎಂದು ಕಿಚ್ಚ ಸುದೀಪ್​ ಫ್ಯಾನ್ಸ್​ ಮನವಿ ಮಾಡಿದ್ದಾರೆ. ಸುದೀಪ್​ ಅಲ್ಲದೇ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ‘ರಿಷಬ್​ ಶೆಟ್ಟಿ ಅವರು ನಿರೂಪಣೆ ಮಾಡ್ತಾರೆ’ ಎಂದು ಕೆಲವರು ಊಹಿಸಿದ್ದಾರೆ. ರಿಷಬ್ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ