‘ಪ್ರಶಾಂತ್ ನೀವೊಬ್ರೇ ರಿಯಲ್​, ಉಳಿದವರೆಲ್ಲರೂ ಫೇಕ್​’ ಎಂದ ಸುದೀಪ್​; ‘ನಾಯಿಬಾಲ ಡೊಂಕು’ ಎಂದ ಸಂಬರ್ಗಿ

| Updated By: ರಾಜೇಶ್ ದುಗ್ಗುಮನೆ

Updated on: Dec 03, 2022 | 9:40 PM

ಈ ವಾರ ಬಿಗ್ ಬಾಸ್ ಭಿನ್ನ ಟಾಸ್ಕ್ ನೀಡಿದ್ದರು. ಮನೆಯಲ್ಲಿ ಯಾರಾದರೂ ರೂಲ್ಸ್ ಬ್ರೇಕ್ ಮಾಡಿದರೆ ಬ್ಯಾಟರಿ ಡೌನ್ ಆಗುತ್ತದೆ. ಈ ರೀತಿ ಆಗಬಾರದು ಎಂದರೆ ರೂಲ್ಸ್ ಬ್ರೇಕ್ ಮಾಡದಂತೆ ನೋಡಿಕೊಳ್ಳಬೇಕು. ಎಲ್ಲರೂ ಎಚ್ಚರಿಕೆ ವಹಿಸಿದರೆ ಪ್ರಶಾಂತ್ ಸಂಬರ್ಗಿ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ!

‘ಪ್ರಶಾಂತ್ ನೀವೊಬ್ರೇ ರಿಯಲ್​, ಉಳಿದವರೆಲ್ಲರೂ ಫೇಕ್​’ ಎಂದ ಸುದೀಪ್​; ‘ನಾಯಿಬಾಲ ಡೊಂಕು’ ಎಂದ ಸಂಬರ್ಗಿ
ಪ್ರಶಾಂತ್​-ಸುದೀಪ್​
Follow us on

ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಬಿಗ್ ಬಾಸ್ ಮನೆಯಲ್ಲಿ ಏರುಧ್ವನಿಯಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಕಳೆದ ಸೀಸನ್​ನಲ್ಲಿ ಅವರು ಏರುಧ್ವನಿಯಲ್ಲಿ ಮಾತನಾಡಿಯೇ ಫೇಮಸ್ ಆಗಿದ್ದರು. ಈ ವರ್ಷವೂ ಅದು ಮುಂದುವರಿದಿದೆ. ಕೆಲವು ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡಿದ್ದೂ ಇದೆ. ಧರಣಿಗಳಂತೂ ಸರ್ವೇ ಸಾಮಾನ್ಯ. ಹೀಗಿದ್ದರೂ ಕೂಡ ಕಿಚ್ಚ ಸುದೀಪ್ ಅವರು ಪ್ರಶಾಂತ್ ಸಂಬರ್ಗಿಗೆ ರಿಯಲ್​ ಎನ್ನುವ ಮೆಚ್ಚುಗೆ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ಇದನ್ನು ಹೊಗಳಿ ನೀಡಿದ್ದಲ್ಲ. ಸುದೀಪ್ (Sudeep) ಹೀಗೆ ಹೇಳೋಕೆ ಬೇರೆಯದೇ ಉದ್ದೇಶ ಇದೆ.

ಈ ವಾರ ಬಿಗ್ ಬಾಸ್ ಭಿನ್ನ ಟಾಸ್ಕ್ ನೀಡಿದ್ದರು. ಮನೆಯಲ್ಲಿ ಯಾರಾದರೂ ರೂಲ್ಸ್ ಬ್ರೇಕ್ ಮಾಡಿದರೆ ಬ್ಯಾಟರಿ ಡೌನ್ ಆಗುತ್ತದೆ. ಈ ರೀತಿ ಆಗಬಾರದು ಎಂದರೆ ರೂಲ್ಸ್ ಬ್ರೇಕ್ ಮಾಡದಂತೆ ನೋಡಿಕೊಳ್ಳಬೇಕು. ಎಲ್ಲರೂ ಎಚ್ಚರಿಕೆ ವಹಿಸಿದರೆ ಪ್ರಶಾಂತ್ ಸಂಬರ್ಗಿ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ! ತಮ್ಮ ಪಾಡಿಗೆ ತಾವು ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದರು. ಕ್ಯಾಪ್ಟನ್ ಆಗದ ಹೊರತಾಗಿಯೂ ಕ್ಯಾಪ್ಟನ್ ರೂಂನಲ್ಲಿ ಅವರು ಸ್ನಾನ ಮಾಡಿದ್ದರು. ಈ ಮೂಲಕ ರೂಲ್ಸ್ ಬ್ರೇಕ್ ಮಾಡಿದರು.

ಈ ವಿಚಾರವನ್ನೇ ಇಟ್ಟುಕೊಂಡು ಸುದೀಪ್ ಮಾತನಾಡಿದ್ದಾರೆ. ‘ಪ್ರಶಾಂತ್ ಇಡೀ ಮನೆಯಲ್ಲಿ ನೀವೊಬ್ಬರೇ ರಿಯಲ್. ಉಳಿದವರೆಲ್ಲ ಫೇಕ್. ಏಕೆ ಹೇಳಿ, ಪ್ರತಿವಾರ ರೂಲ್ಸ್ ಬ್ರೇಕ್ ಮಾಡುವವರೆಲ್ಲ ನಿಯಮ ಮುರಿಯದೆ ಆಟ ಆಡಿದ್ದರು. ಆದರೆ, ನೀವು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ರೂಲ್ಸ್ ಬ್ರೇಕ್ ಮಾಡುತ್ತಾ ಆಟ ಆಡುತ್ತಿದ್ದಿರಿ’ ಎಂದು ಟೀಕಿಸಿದರು. ಇದಕ್ಕೆ ಪ್ರಶಾಂತ್ ಸಂಬರ್ಗಿ, ‘ಹಾಗೇನು ಇಲ್ಲ ಸರ್. ನಾಯಿ ಬಾಲ ಡೊಂಕು ಅನ್ನೋ ಹಾಗೆ’ ಎಂದು ನಕ್ಕರು. ಪ್ರಶಾಂತ್ ಸಂಬರ್ಗಿ ಮಾತು ಕೇಳಿ ಇಡೀ ಮನೆ ಮಂದಿ ನಕ್ಕರು.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿಗೆ ಹೊಸ ಬಿರುದು ಕೊಟ್ಟ ಕಿಚ್ಚ ಸುದೀಪ್​; ಮನೆಯವರಿಗೆ ನಗುವೋ ನಗು

ಪ್ರಶಾಂತ್ ಸಂಬರ್ಗಿ ಆಗಾಗ, ಇಡೀ ಮನೆಯವರು ಫೇಕ್​ ಎನ್ನುವ ಪದ ಬಳಕೆ ಮಾಡುತ್ತಾರೆ. ಈ ವಿಚಾರ ಇಟ್ಟುಕೊಂಡು ಸುದೀಪ್ ಈ ಮಾತನ್ನು ಹೇಳಿದ್ದಾರೆ. ಈ ವಾರ ಸ್ಪರ್ಧಿಗಳ ಕುಟುಂಬದವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಈ ಕಾರಣಕ್ಕೆ ಈ ವಾರದ ಆಟ ವಿಶೇಷವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ