ಗಿಲ್ಲಿ ಮೇಲೆ ಕೈ ಮಾಡಿದ ರಿಷಾಗೆ ದೊಡ್ಡ ಶಿಕ್ಷೆ; ಇದು ಸುದೀಪ್ ಸ್ಟೈಲ್

ಜಗಳದ ವೇಳೆ ಗಿಲ್ಲಿ ನಟನಿಗೆ ರಿಷಾ ಅವರು ಹೊಡೆದಿದ್ದು ಸರಿಯೋ ತಪ್ಪೋ ಎಂಬ ಚರ್ಚೆ ಶುರುವಾಗಿದೆ. ಕಿಚ್ಚ ಸುದೀಪ್ ಅವರು ಶನಿವಾರದ ಬದಲು ಭಾನುವಾರದ ಸಂಚಿಕೆಯಲ್ಲಿ ಆ ಬಗ್ಗೆ ಮಾತನಾಡಲು ನಿರ್ಧರಿಸಿದ್ದಾರೆ. ನಿರ್ಧಾರ ತಿಳಿಸುವುದಕ್ಕೂ ಒಂದು ದಿನ ಮುಂಚೆಯೇ ರಿಷಾ ಎದೆಯಲ್ಲಿ ಢವಢವ ಹೆಚ್ಚುವಂತೆ ಮಾಡಿದ್ದಾರೆ ಸುದೀಪ್.

ಗಿಲ್ಲಿ ಮೇಲೆ ಕೈ ಮಾಡಿದ ರಿಷಾಗೆ ದೊಡ್ಡ ಶಿಕ್ಷೆ; ಇದು ಸುದೀಪ್ ಸ್ಟೈಲ್
Risha, Gilla Nata, Kichcha Sudeep,

Updated on: Nov 09, 2025 | 7:18 AM

ನಟ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವ ಶೈಲಿಯೇ ಬೇರೆ. ಸಲ್ಮಾನ್ ಖಾನ್, ನಾಗಾರ್ಜುನ, ಮೋಹನ್​ಲಾಲ್ ಮುಂತಾದವರಿಗಿಂತಲೂ ಸುದೀಪ್ ನಿರೂಪಣೆ ಡಿಫರೆಂಟ್. ಆ ಕಾರಣಕ್ಕಾಗಿ ಅಭಿಮಾನಿಗಳು ಅವರನ್ನು ಸಖತ್ ಇಷ್ಟಪಡುತ್ತಾರೆ. ಕನ್ನಡದಲ್ಲಿ ಸತತ 12 ಸೀಸನ್ ಬಿಗ್ ಬಾಸ್ ನಡೆಸಿಕೊಟ್ಟ ಖ್ಯಾತಿ ಅವರಿಗೆ ಇದೆ. ತಪ್ಪು ಮಾಡಿದ ಸ್ಪರ್ಧಿಗಳಿಗೆ ಸುದೀಪ್ ಖಂಡಿತಾ ಶಿಕ್ಷೆ ನೀಡುತ್ತಾರೆ. ಈಗ ರಿಷಾ (Risha) ಅವರಿಗೆ ಶಿಕ್ಷೆ ನೀಡುವ ಸಮಯ ಬಂದಿದೆ. ಇತ್ತೀಚೆಗೆ ರಿಷಾ ಅವರು ಗಿಲ್ಲಿ ನಟನ (Gilla Nata) ಮೇಲೆ ಕೈ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ಭಾನುವಾರದ (ನವೆಂಬರ್ 9) ಸಂಚಿಕೆಯಲ್ಲಿ ಮಾತನಾಡಲಿದ್ದಾರೆ.

ಸಾಮಾನ್ಯವಾಗಿ ಕಿಚ್ಚ ಸುದೀಪ್ ಅವರು ಇಡೀ ವಾರದ ಕಿರಿಕ್​​ಗಳನ್ನೆಲ್ಲ ಶನಿವಾರದ ಸಂಚಿಕೆಯಲ್ಲಿ ಬಗೆಹರಿಸುತ್ತಾರೆ. ಭಾನುವಾರ ಹೆಚ್ಚಿನ ಮಾತುಕಥೆ ಫನ್ ಆಗಿ ಇರುತ್ತದೆ. ಆದರೆ ಕೆಲವು ಸಂದರ್ಭಗಲ್ಲಿ ಭಾನುವಾರ ಕೂಡ ಸೀರಿಯಸ್ ವಿಷಯವನ್ನೇ ಚರ್ಚೆ ಮಾಡುತ್ತಾರೆ. ಈ ವಾರ ಕೂಡ ಹಾಗೆಯೇ ಆಗುತ್ತಿದೆ. ಭಾನುವಾರವೇ ಗಿಲ್ಲಿ ನಟ ಮತ್ತು ರಿಷಾ ನಡುವಿನ ಜಗಳದ ಟಾಪಿಕ್​​ ಚರ್ಚಿಸಲು ಅವರು ನಿರ್ಧರಿಸಿದ್ದಾರೆ.

ಶನಿವಾರದ (ನವೆಂಬರ್ 8) ಸಂಚಿಕೆ ಮುಗಿಯುವುದಕ್ಕೂ ಮುನ್ನ ಕಿಚ್ಚ ಸುದೀಪ್ ಅವರು ಈ ಬಗ್ಗೆ ಸೂಚನೆ ನೀಡಿದರು. ‘ಮುಂದಿನ ಸಂಚಿಕೆಯಲ್ಲಿ ಮಾತನಾಡಲು ಬಹಳ ದೊಡ್ಡ ಟಾಪಿಕ್ ಇದೆ. ಈ ವೇದಿಕೆ ಮೇಲೆ ಕೆಲವು ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮನೆ ಒಳಗಡೆ ಅದು ದೊಡ್ಡ ವಿಚಾರ ಆಗಲೇ ಇಲ್ಲ. ಮನೆ ಆಚೆ ಸ್ವಲ್ಪ ದೊಡ್ಡದಾಗಿದೆ. ಇಂದು ಹೋಗುವುದಕ್ಕಿಂತ ಮುಂಚೆ ನಿಮಗೆ ನೆನಪಿಸಿ ಹೋಗುತ್ತೇನೆ’ ಎಂದು ಹೇಳಿದ ಸುದೀಪ್ ಅವರು ಆ ದಿನದ ವಿಡಿಯೋ ಪ್ಲೇ ಮಾಡಿದರು.

ಬಾತ್​ರೂಮ್ ವಿಚಾರಕ್ಕೆ ಗಿಲ್ಲಿ ನಟ ಮತ್ತು ರಿಷಾ ನಡುವೆ ಜಗಳ ಆಗಿತ್ತು. ಜಗಳದ ಭರದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು. ಇದು ಬಿಗ್ ಬಾಸ್ ಆಟದ ಮೂಲ ನಿಯಮದ ಉಲ್ಲಂಘನೆ. ಕೂಡಲೇ ರಿಷಾ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ರಿಷಾಗೆ ಗೇಟ್​ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಓವರ್​ ಕಾನ್ಫಿಡೆನ್ಸ್​ನಲ್ಲಿ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಗಿಲ್ಲಿ? ವೀಕ್ಷಕರಿಗೆ ಮೂಡಿದೆ ಅನುಮಾನ

ಖಡಕ್ ನಿರ್ಧಾರ ತೆಗೆದುಕೊಳ್ಳುವುದಕ್ಕೂ 24 ಗಂಟೆಗಳ ಮುನ್ನವೇ ಸುದೀಪ್ ಅವರು ವಿಡಿಯೋ ಪ್ಲೇ ಮಾಡಿ ಸೂಚನೆ ನೀಡಿದ್ದಾರೆ. ಆದ್ದರಿಂದ ಭಾನುವಾರದ ಸಂಚಿಕೆ ಶುರು ಆಗುವವರೆಗೂ ರಿಷಾ ಎದೆಯಲ್ಲಿ ಢವಢವ ಮುಂದುವರಿಯಲಿದೆ. ಆ ಮೂಲಕ ಸುದೀಪ್ ಅವರು ತಮ್ಮದೇ ಸ್ಟೈಲ್​​ನಲ್ಲಿ ದೊಡ್ಡ ಶಿಕ್ಷೆ ನೀಡಿದ್ದಾರೆ. ಭಾನುವಾರ ಅವರು ಪ್ರಕಟಿಸಲಿರುವ ಅಂತಿಮ ತೀರ್ಪು ಏನು ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us