ದಲಿತರ ನಿಂದನೆ ಮಾಡಿದ ಬಿಗ್ ಬಾಸ್ ಸ್ಪರ್ಧಿಗೆ ಬಿಸಿ ಮುಟ್ಟಿಸಿದ ಯೂಟ್ಯೂಬ್
ತಮ್ಮ ಆಲೋಚನೆಗಳನ್ನು ಹೇಳಿಕೊಳ್ಳೋಕೆ ಮೀರಾ ಮಿಥುನ್ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದರು. ಸಾಕಷ್ಟು ಜನರು ಅವರ ವಿಡಿಯೋಗಳನ್ನು ನೋಡುತ್ತಿದ್ದರು. ಒಂದು ರೀತಿಯಲ್ಲಿ ಇದು ಅವರಿಗೆ ಆದಾಯವನ್ನೂ ತಂದುಕೊಡುತ್ತಿತ್ತು.
ದಲಿತರನ್ನು ನಿಂದಿಸಿರುವ ಆರೋಪ ಎದುರಿಸುತ್ತಿರುವ ತಮಿಳು ಬಿಗ್ ಬಾಸ್ ಸ್ಪರ್ಧಿ ಮೀರಾ ಮಿಥುನ್ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಮೀರಾ ಜೈಲಿಗೆ ಹೋಗಿದ್ದು ಒಂದು ಕಡೆಯಾದರೆ, ಇವರ ಬಾಯ್ಫ್ರೆಂಡ್ ಅರೆಸ್ಟ್ ಆಗಿದ್ದು ಮತ್ತೊಂದು ಕಡೆ. ಈಗ ಯೂಟ್ಯೂಬ್ ಕಡೆಯಿಂದಲೂ ಮೀರಾಗೆ ಶಾಕ್ ಸಿಕ್ಕಿದೆ.
ತಮ್ಮ ಆಲೋಚನೆಗಳನ್ನು ಹೇಳಿಕೊಳ್ಳೋಕೆ ಮೀರಾ ಮಿಥುನ್ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದರು. ಸಾಕಷ್ಟು ಜನರು ಅವರ ವಿಡಿಯೋಗಳನ್ನು ನೋಡುತ್ತಿದ್ದರು. ಒಂದು ರೀತಿಯಲ್ಲಿ ಇದು ಅವರಿಗೆ ಆದಾಯವನ್ನೂ ತಂದುಕೊಡುತ್ತಿತ್ತು. ಆದರೆ, ಅವರ ವಿಡಿಯೋ ಯೂಟ್ಯೂಬ್ ನೀತಿಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಈ ಕಾರಣಕ್ಕೆ ಶೀಘ್ರವೇ ಅವರ ಚಾನೆಲ್ಅನ್ನು ಯೂಟ್ಯೂಬ್ ಡಿಲೀಟ್ ಮಾಡಲಿದೆ.
‘ಅನೈತಿಕ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಂಡಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಾರೆ. ಕಾರಣ ಇಲ್ಲದೇ ಯಾರೂ ಯಾರ ಬಗ್ಗೆಯೂ ಕೆಟ್ಟದ್ದು ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಕಾರಣ. ಅಂಥವರನ್ನೆಲ್ಲ ಚಿತ್ರರಂಗದಿಂದ ತೊಲಗಿಸಲು ಇದು ಸರಿಯಾದ ಸಮಯ ಅಂತ ನನಗೆ ಅನಿಸುತ್ತದೆ’ ಎಂದು ಸಂದರ್ಶನವೊಂದರಲ್ಲಿ ಮೀರಾ ಹೇಳಿಕೆ ನೀಡಿದ್ದರು.
ಮೀರಾ ಮಿಥುನ್ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಜಾತಿ ನಿಂದನೆ ಆರೋಪದಡಿಯಲ್ಲಿ ಮೀರಾ ವಿರುದ್ಧ ಸಾಕಷ್ಟು ಪ್ರಕರಣಗಳು ಕೂಡ ದಾಖಲಾಗಿದ್ದವು. ಈ ಸಂಬಂಧ ಪೊಲೀಸರು ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಈಗ ಮೀರಾ ಬಂಧನ ನಡೆದಿದೆ. ನಟಿ ವಿರುದ್ಧ ಐಪಿಸಿ ಸೆಕ್ಷನ್ 153, 153ಎ(1)(ಎ), 505(1)(ಬಿ), 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮೀರಾ ಕಾಲಿವುಡ್ನಲ್ಲಿ ಅಷ್ಟು ಚಿರಪರಿಚಿತ ಮುಖವಲ್ಲ. ಅವರು ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು. ಮೀರಾಗೆ, ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ. ತಮಿಳು ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿಯಾಗಿ ಮೀರಾ ಎಂಟ್ರಿ ಕೊಟ್ಟಿದ್ದರು. ನಂತರ ಅವರ ಜನಪ್ರಿಯತೆ ಕೊಂಚ ಹೆಚ್ಚಿತ್ತು.
ಇದನ್ನೂ ಓದಿ: ಬಿಗ್ ಬಾಸ್ ಗಮನ ಸೆಳೆಯಲು ಸ್ಪೈಡರ್ ಮ್ಯಾನ್ ಕಾಸ್ಟ್ಯೂಮ್ ಧರಿಸಿ ಸೆಟ್ ಹೊರಗಡೆ ಧರಣಿಗೆ ಕುಳಿತಳು ರಾಖಿ ಸಾವಂತ್