ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್​’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Sep 30, 2022 | 10:04 PM

ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟದ ಮೂಲಕ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಆ್ಯಕ್ಟೀವ್ ಆಗಿದ್ದರು.

ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್​’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ
Follow us on

ಹೊರಗೆ ಯಾರು ಎಷ್ಟೇ ಪ್ರಭಾವಿ ಆಗಿರಬಹುದು. ಆದರೆ, ‘ಬಿಗ್ ಬಾಸ್​​’ಗೆ (Bigg Boss) ಬಂದ ನಂತರದಲ್ಲಿ ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕು. ಬಿಗ್ ಬಾಸ್​ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಮನಸ್ಸಿಗೆ ಬಂದಾಗ ಮಲಗುವಂತಿಲ್ಲ. ಆಹಾರದ ವಿಚಾರದಲ್ಲೂ ಅಷ್ಟೇ, ಮಿತಿ ಮೀರಿ ತಿನ್ನೋಕೆ ಆಗುವುದಿಲ್ಲ. ಆದರೆ, ಕೆಲವರು ಬಿಗ್ ಬಾಸ್ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಪ್ರತಿಸ್ಪರ್ಧಿಗಳಿಂದ ನೆಗೆಟಿವ್ ಕಮೆಂಟ್ ಬಂದರೆ ಅದನ್ನು ಸ್ವೀಕರಿಸುವುದಿಲ್ಲ. ಈಗ ರೂಪೇಶ್ ರಾಜಣ್ಣ (Roopesh Rajanna) ಅವರಿಗೂ ಹಾಗೆಯೇ ಆಗಿದೆ. ಎಲ್ಲರಿಗೂ ಬುದ್ಧಿವಾದ ಹೇಳೋಕೆ ಹೋಗಿ ಅವರು ಬೈಯಿಸಿಕೊಂಡಿದ್ದು ಇದೆ. ಈಗ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟದ ಮೂಲಕ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಆ್ಯಕ್ಟೀವ್ ಆಗಿದ್ದರು. ಕರ್ನಾಟಕದ ಯಾವುದೇ ಭಾಗದಲ್ಲಿ ನಮ್ಮ ಭಾಷೆಯ ಮೇಲೆ ಬೇರೆ ಭಾಷೆಯ ಹೇರಿಕೆ ಆದರೆ ಅದನ್ನು ಖಂಡಿಸುತ್ತಿದ್ದರು. ಬಿಗ್ ಬಾಸ್ ಮನೆಯಲ್ಲೂ ಹೋರಾಟದ ಮನೋಭಾವನೆಯನ್ನು ಅವರು ಮುಂದುವರಿಸಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿಲ್ಲ. ಅವರ ನೀತಿ ಪಾಠ ಕೇಳೋಕೆ ಅನೇಕರಿಗೆ ಇಷ್ಟ ಇಲ್ಲ. ಈ ಕಾರಣದಿಂದ ಅವರಿಗೆ ಹೆಚ್ಚಿನ ಮಂದಿ ಕಳಪೆ ಪಟ್ಟ ನೀಡಿದ್ದಾರೆ.

ಇದನ್ನೂ ಓದಿ
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ

ಕನ್ನಡ ಕಲಿಕೆ ವಿಚಾರದಲ್ಲಿ ರೂಪೇಶ್ ಅವರು ಅನೇಕರಿಗೆ ಕಿವಿ ಮಾತು ಹೇಳಿದ್ದು ಇದೆ. ಈ ವಿಚಾರದಲ್ಲಿ ಮಯೂರಿ ಸೇರಿದಂತೆ ಅನೇಕ ಸ್ಪರ್ಧಿಗಳು ಬೇಸರಗೊಂಡಿದ್ದರು. ಆ ಸೇಡನ್ನು ಎಲ್ಲರೂ ತೀರಿಸಿಕೊಂಡಿದ್ದಾರೆ. ರೂಪೇಶ್ ರಾಜಣ್ಣ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ.

ಇದನ್ನೂ ಓದಿ: ಅ.1ರಿಂದ ಬದಲಾಗಲಿದೆ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಸ್ವರೂಪ; ಏನಿದು ಹೊಸ ಸುದ್ದಿ?

‘ನೀವು ತುಂಬಾನೇ ಫೇಕ್ ಅನಿಸುತ್ತದೆ’ ಎಂದು ಕೆಲವರು ಅಭಿಪ್ರಾಯಪಟ್ಟರು. ಅಂತಿಮವಾಗಿ ಕಳಪೆ ಪಟ್ಟ ರೂಪೇಶ್ ರಾಜಣ್ಣಗೆ ಸಿಕ್ಕಿದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ. ‘ನಾನು ಇರೋದೇ ಹೀಗೆ. ಯಾರು ನಾಟಕ ಆಡುತ್ತಿದ್ದಾರೆ ಎಂಬುದು ಗೊತ್ತು’ ಎಂದರು ರೂಪೇಶ್ ರಾಜಣ್ಣ. ಇದಕ್ಕೆ ದೀಪಿಕಾ ದಾಸ್ ತಿರುಗೇಟು ನೀಡಿದರು. ‘ಇಲ್ಲಿ ಹೋರಾಟ ಮಾಡೋಕೆ ಕರೆಸಿಲ್ಲ’ ಎಂದು ಟಾಂಟ್ ನೀಡಿದರು. ಈ ಮಾತನ್ನು ಕೇಳಿ ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾದರು. ಹೀಗೆ ಹೇಳುತ್ತಿದ್ದಂತೆ ಮೈಕ್ ಎಸೆದು ಹೋದರು ರೂಪೇಶ್ ರಾಜಣ್ಣ. ಕೊನೆಗೆ ಅವರು ಬಿಗ್ ಬಾಸ್​ ಜೈಲಿಗೆ ಹೋಗೋದು ಅನಿವಾರ್ಯ ಆಯಿತು.