ಅಂದು ಹಾಗೆ, ಇಂದು ಹೀಗೆ; ‘ಬಿಗ್ ಬಾಸ್​’ ಮೇಲಿದ್ದ ಅಭಿಪ್ರಾಯ ಬದಲಿಸಿಕೊಂಡ ರೂಪೇಶ್ ರಾಜಣ್ಣ

| Updated By: Digi Tech Desk

Updated on: Dec 28, 2022 | 11:32 AM

Roopesh Rajanna: ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್​ ಬಗ್ಗೆ ಬೇರೆಯದೇ ಅಭಿಪ್ರಾಯ ಹೊಂದಿದ್ದರು. ಈ ಬಗ್ಗೆ ಹಲವು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದರು. ಬಿಗ್ ಬಾಸ್ ಮನೆ ಒಳಗೆ ಹೋದ ನಂತರದಲ್ಲಿ ಅವರು ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ.

ಅಂದು ಹಾಗೆ, ಇಂದು ಹೀಗೆ; ‘ಬಿಗ್ ಬಾಸ್​’ ಮೇಲಿದ್ದ ಅಭಿಪ್ರಾಯ ಬದಲಿಸಿಕೊಂಡ ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ
Follow us on

ರೂಪೇಶ್ ರಾಜಣ್ಣ (Roopesh Rajanna) ಅವರು ಸಮಾಜದಲ್ಲಿ ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಕೇವಲ ಹೋರಾಟಗಾರ ಎಂಬುದಷ್ಟೇ ಜನರಿಗೆ ಗೊತ್ತಿತ್ತು. ಅವರ ನಿಜವಾದ ವ್ಯಕ್ತಿತ್ವ ಜನರಿಗೆ ಪರಿಚಯ ಆಗಿರಲಿಲ್ಲ. ಅದು ಬಿಗ್ ಬಾಸ್ (Bigg Boss) ಮನೆಯಿಂದ ಆಗಿದೆ. ಈಗ ಅವರು ಫಿನಾಲೆ ರೇಸ್​ನಲ್ಲಿದ್ದಾರೆ. ಕಪ್ ಎತ್ತಬೇಕು ಎಂಬ ಕನಸನ್ನು ರೂಪೇಶ್ ರಾಜಣ್ಣ ಕಾಣುತ್ತಿದ್ದಾರೆ. ಬಿಗ್ ಬಾಸ್ ಆಟದ ಬಗ್ಗೆ ರೂಪೇಶ್ ರಾಜಣ್ಣ ತಮ್ಮದೇ ಅಭಿಪ್ರಾಯ ಹೊಂದಿದ್ದರು. ಆದರೆ, ಈಗ ಆ ಅಭಿಪ್ರಾಯವನ್ನು ಅವರು ಬದಲಿಸಿಕೊಂಡಿದ್ದಾರೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್​ ಬಗ್ಗೆ ಬೇರೆಯದೇ ಅಭಿಪ್ರಾಯ ಹೊಂದಿದ್ದರು. ಈ ಬಗ್ಗೆ ಹಲವು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದರು. ಬಿಗ್ ಬಾಸ್ ಮನೆ ಒಳಗೆ ಹೋದ ನಂತರದಲ್ಲಿ ಅವರು ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಫಿನಾಲೆ ವಾರದಲ್ಲಿ ಈ ಮಾತನ್ನು ಹೇಳಿದ್ದಾರೆ ಅವರು.

ಇದನ್ನೂ ಓದಿ: ‘ಆರ್ಯವರ್ಧನ್ ಬದಲು ದಿವ್ಯಾ ಉರುಡುಗ ಹೋಗಬೇಕಿತ್ತು’; ಮಿಡ್​ವೀಕ್ ಎಲಿಮಿನೇಷನ್ ಬಗ್ಗೆ ಫ್ಯಾನ್ಸ್ ರಿಯಾಕ್ಷನ್

ಇದನ್ನೂ ಓದಿ
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ಬಿಗ್ ಬಾಸ್ ಫಿನಾಲೆ ವಾರದಲ್ಲಿ ಮಿಡ್​ ವೀಕ್ ಎಲಿಮಿನೇಷನ್ ಇತ್ತು. ಎಲ್ಲಾ ಸ್ಪರ್ಧಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ ಇತ್ತು. ಬಿಗ್ ಬಾಸ್​ನಲ್ಲಿ ಕಳೆದ ಇಷ್ಟು ದಿನಗಳ ಅನುಭವ ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ಎಲ್ಲರೂ ಈ ಆಟದ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದರು. ಅದೇ ರೀತಿ ರೂಪೇಶ್ ರಾಜಣ್ಣ ಕೂಡ ದೊಡ್ಮನೆ ಆಟದ ಬಗ್ಗೆ ಹೇಳಿದರು.

ಇದನ್ನೂ ಓದಿ: ನಿಜವಾಗಲೂ ನಾಚಿಕೆ ಆಗುತ್ತಿದೆ ಎಂದು ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆಪಿನ ತಬ್ಬಿದ ದಿವ್ಯಾ ಉರುಡುಗ

‘ಬಿಗ್ ಬಾಸ್ ಒಳಗೆ ಬರೋಕೆ ಮೊದಲು ಏನೇನೋ ಆಲೋಚನೆಗಳನ್ನು ಇಟ್ಟುಕೊಂಡು ಬಂದೆ. ಆದರೆ, ಅದು ಸುಳ್ಳಾಯಿತು. ನಮ್ಮ ಜೀವನವನ್ನು ತಿದ್ದುವ ಶಿಕ್ಷಕನಾಗಿ ಬಿಗ್ ಬಾಸ್ ಕಂಡರು. ಇಲ್ಲಿ ಬರದೆ ಇದ್ದಿದ್ದರೆ ಅದ್ಭುತ ಶೋನ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಅನಿಸಿದ್ದಿದೆ. ನಮ್ಮ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ತು. ಇದು ಬಿಜಕ್ಕೂ ಒಳ್ಳೆಯ ವೇದಿಕೆ. ಇಲ್ಲಿಗೆ ಬರೋಕೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ದೊಡ್ಡ ಅದೃಷ್ಟ’ ಎಂದಿದ್ದಾರೆ ರೂಪೇಶ್ ರಾಜಣ್ಣ. ಈ ಸಂದರ್ಭದಲ್ಲಿ ವೋಟ್ ಹಾಕಿ ಇಲ್ಲಿವರೆಗೆ ಕರೆತಂದ ಜನರಿಗೂ ರೂಪೇಶ್ ರಾಜಣ್ಣ ಧನ್ಯವಾದ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:07 am, Wed, 28 December 22