Bigg Boss Kannada: ‘ಆರ್ಯವರ್ಧನ್ ಬದಲು ದಿವ್ಯಾ ಉರುಡುಗ ಹೋಗಬೇಕಿತ್ತು’; ಮಿಡ್​ವೀಕ್ ಎಲಿಮಿನೇಷನ್ ಬಗ್ಗೆ ಫ್ಯಾನ್ಸ್ ರಿಯಾಕ್ಷನ್

Aryavardhan Guruji Elimination: ಆರ್ಯವರ್ಧನ್ ಗುರೂಜಿ ಅವರು ಸಂಖ್ಯಾ ಶಾಸ್ತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದೂ ಇದೆ. ಬಿಗ್ ಬಾಸ್​ ಒಟಿಟಿ ಮೂಲಕ ಅವರು ಮತ್ತಷ್ಟು ಜನರಿಗೆ ಪರಿಚಯ ಆದರು.

Bigg Boss Kannada: ‘ಆರ್ಯವರ್ಧನ್ ಬದಲು ದಿವ್ಯಾ ಉರುಡುಗ ಹೋಗಬೇಕಿತ್ತು’; ಮಿಡ್​ವೀಕ್ ಎಲಿಮಿನೇಷನ್ ಬಗ್ಗೆ ಫ್ಯಾನ್ಸ್ ರಿಯಾಕ್ಷನ್
ದಿವ್ಯಾ-ಆರ್ಯವರ್ಧನ್
Follow us
| Updated By: Digi Tech Desk

Updated on:Dec 28, 2022 | 11:07 AM

ಆರ್ಯವರ್ಧನ್ ಗುರೂಜಿ  (Aryavardhan Guruji) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಕೊನೆಯ ವಾರದಲ್ಲಿ ಎಲಿಮಿನೇಟ್​ ಆಗಿದ್ದಾರೆ. ಮಿಡ್​ವೀಕ್ ಎಲಿಮಿನೇಷನ್​ನಲ್ಲಿ ಅವರು ಹೊರ ಹೋಗಿರುವುದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಗುರೂಜಿ ಅವರು ಎಲಿಮಿನೇಟ್ ಆದ ಬಗ್ಗೆ ಕಲರ್ಸ್ ಕನ್ನಡ ಪೋಸ್ಟ್ ಹಾಕಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ದಿವ್ಯಾ ಉರುಡುಗ (Divya Uruduga) ಔಟ್ ಆಗಿ ಆರ್ಯವರ್ಧನ್​ ಉಳಿದುಕೊಳ್ಳಬೇಕಿತ್ತು’ ಎಂದು ಗುರೂಜಿ ಫ್ಯಾನ್ಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆರ್ಯವರ್ಧನ್ ಗುರೂಜಿ ಅವರು ಸಂಖ್ಯಾ ಶಾಸ್ತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದೂ ಇದೆ. ಬಿಗ್ ಬಾಸ್​ ಒಟಿಟಿ ಮೂಲಕ ಅವರು ಮತ್ತಷ್ಟು ಜನರಿಗೆ ಪರಿಚಯ ಆದರು. ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ತಿಳಿಯಿತು. ಅವರು ಎಲ್ಲರನ್ನೂ ನಗಿಸುತ್ತಿದ್ದ ರೀತಿ ವೀಕ್ಷಕರಿಗೆ ಇಷ್ಟವಾಯಿತು. ಹೀಗಾಗಿ, ಟಿವಿ ಸೀಸನ್​ಗೆ ಬರುವ ಅರ್ಹತೆಯನ್ನು ಅವರು ಪಡೆದರು. 90ಕ್ಕೂ ಹೆಚ್ಚು ದಿನ ಟಿವಿ ಸೀಸನ್​ನಲ್ಲಿ ಭಾಗವಹಿಸಿ ಈಗ ಅವರು ಔಟ್ ಆಗಿದ್ದಾರೆ.

ದಿವ್ಯಾ ಉರುಡುಗ ಹಾಗೂ ಆರ್ಯವರ್ಧನ್ ಗುರೂಜಿ ಮಧ್ಯೆ ಕಾಂಪಿಟೇಷನ್ ಇತ್ತು. ದಿವ್ಯಾಗಿಂತ ಆರ್ಯವರ್ಧನ್​​ ಹೆಚ್ಚು ಮನರಂಜನೆ ನೀಡುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರ ವಲಯದಲ್ಲಿತ್ತು. ಆದರೆ, ‘ಬಿಗ್ ಬಾಸ್​​’ ಫಿನಾಲೆ ವಾರದಲ್ಲಿ ಆರ್ಯವರ್ಧನ್ ಔಟ್ ಆಗಿದ್ದಾರೆ. ಇದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಅನೇಕರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ

‘ಬಿಗ್ ಬಾಸ್ ಸೀಸನ್ ಒಂಭತ್ತರ ಹದಿನಾಲ್ಕನೇ ಎಲಿಮಿನೇಷನ್ ಆರ್ಯವರ್ಧನ್’ ಎಂದು ಕಲರ್ಸ್ ಕನ್ನಡ ಪೋಸ್ಟ್ ಮಾಡಿದೆ. ಇದಕ್ಕೆ ಆರ್ಯವರ್ಧನ್​ ಗುರೂಜಿ ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ‘ದಿವ್ಯಾ ಬದಲು ಆರ್ಯವರ್ಧನ್ ಉಳಿದುಕೊಳ್ಳಬೇಕಿತ್ತು. ಅವರು ಹೆಚ್ಚು ಅರ್ಹರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಗುರೂಜಿಗೆ ಧನ್ಯವಾದ ಹೇಳಿದ್ದಾರೆ. ‘ನಮಗೆ ಮನರಂಜನೆ ನೀಡಿದ್ದಕ್ಕೆ  ಧನ್ಯವಾದ ಗುರೂಜಿ. ನೀವು ಯಾವಾಗಲೂ ನೆನಪಿನಲ್ಲಿ ಇರುತ್ತೀರಿ’ ಎಂದು ಕೆಲವರು ಹೇಳಿದ್ದಾರೆ. ಅವರ ಎಲಿಮಿನೇಷನ್ ಅನೇಕರಿಗೆ ಬೇಸರ ಮೂಡಿಸಿದೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್ ಫಿನಾಲೆ ರೇಸ್​ನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:29 am, Wed, 28 December 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ