105 ದಿನಗಳ ನಂತರ ‘ಬಿಗ್ ಬಾಸ್ 18′ ಗ್ರ್ಯಾಂಡ್ ಫಿನಾಲೆ ನಡೆದಿದೆ. ನಟ ಸಲ್ಮಾನ್ ಖಾನ್ ಅವರ ಹೋಸ್ಟಿಂಗ್‌ನಿಂದಾಗಿ ಈ ಕಾರ್ಯಕ್ರಮದ ಜನಪ್ರಿಯತೆ ಅತ್ಯಧಿಕವಾಗಿದೆ. ಹತ್ತು ವರ್ಷಗಳಿಂದಲೂ ಸಲ್ಮಾನ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇದಕ್ಕಾಗಿ ಅವರು ನಿರ್ಮಾಪಕರಿಂದ ಭಾರಿ ಶುಲ್ಕ ಪಡೆಯುತ್ತಾರೆ. ಬಿಗ್ ಬಾಸ್ ಹದಿನೆಂಟನೇ ಸೀಸನ್ಗೆ ಸಲ್ಮಾನ್ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರೆ. ಅದು ಎಷ್ಟು, ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮಾಧ್ಯಮ ವರದಿಗಳ ಪ್ರಕಾರ ‘ಬಿಗ್ ಬಾಸ್ 18′ ಹೋಸ್ಟ್ ಮಾಡಲು ಸಲ್ಮಾನ್ ಖಾನ್ ತಿಂಗಳಿಗೆ 60 ಕೋಟಿ ರೂಪಾಯಿ ಸಂಭಾವನೆ ಸ್ವೀಕರಿಸಿದ್ದಾರೆ. ಇದು ಅವರನ್ನು ದೂರದರ್ಶನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಆಗಿದ್ದಾರೆ. ತಿಂಗಳಿಗೆ 60 ಕೋಟಿಯಂತೆ, ಬಿಗ್ ಬಾಸ್ ನಾಲ್ಕು ತಿಂಗಳ ಲೆಕ್ಕ ನಡೆದಿದ್ದು, 200+ ಕೋಟಿ ರೂಪಾಯಿ ಪಡೆದಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಸಂಭಾವನೆಯು ಕೆಲವು ಭಾರತೀಯ ಬ್ಲಾಕ್‌ಬಸ್ಟರ್ ಚಿತ್ರಗಳ ಬಜೆಟ್‌ಗಿಂತ ಹೆಚ್ಚು. ಎಸ್. ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ 180 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದೆ. ಶಾರುಖ್ ಖಾನ್ ಅಭಿನಯದ ‘ಡಂಕಿ’ 120 ಕೋಟಿ ರೂ. ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದೆ.
ಕಿರುತೆರೆಯ ಇತರ ಸ್ಟಾರ್ಗಳಿಗೆ ಹೋಲಿಸಿದರೆ ಸಲ್ಮಾನ್ ಪಡೆದಿರುವ ಈ ಮೊತ್ತ ಹಲವು ಪಟ್ಟು ಹೆಚ್ಚು. ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್ಗಾಗಿ ಹಾಸ್ಯನಟ ಕಪಿಲ್ ಶರ್ಮಾ 60 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ‘ಕೌನ್ ಬನೇಗಾ ಕರೋಡ್ ಪತಿ’ ಶೋಗಾಗಿ ಉತ್ತಮ ಮೊತ್ತವನ್ನು ವಿಧಿಸುತ್ತಾರೆ. ಆದರೆ ಆ ನಂಬರ್ ಸಲ್ಮಾನ್ ಸಂಭಾವನೆಗಿಂತ ಕಡಿಮೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಗೆ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಕೆ
ಕಳೆದ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದ ಕೆಲವು ಸೀಸನ್‌ಗಳನ್ನು ನಟರಾದ ಅರ್ಷದ್ ವಾರ್ಸಿ ಮತ್ತು ಅಮಿತಾಭ್ ಬಚ್ಚನ್ ಕೂಡ ಆಯೋಜಿಸಿದ್ದರು. ಆದರೆ ಸಲ್ಮಾನ್‌ನಿಂದಾಗಿ ಈ ಶೋ ದೇಶಾದ್ಯಂತ ಭಾರೀ ಜನಪ್ರಿಯತೆ ಗಳಿಸಿದೆ. ಅವರ ‘ವೀಕೆಂಡ್ ಕಾ ವಾರ್’ ಸಂಚಿಕೆಯನ್ನು ವೀಕ್ಷಿಸಲು ವೀಕ್ಷಕರು ಕಾತರರಾಗಿರುತ್ತಾರೆ. ‘ಬಿಗ್ ಬಾಸ್ ಹಿಂದಿ ಸೀಸನ್ 18’ರಲ್ಲಿ ಕರಣ್ ವೀರ್ ಸಿಂಗ್ ವಿನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.