‘ಬಿಗ್ ಬಾಸ್ ಹಿಂದಿ ಸೀಸನ್ 17′ ಸಾಕಷ್ಟು ಚರ್ಚೆಯಲ್ಲಿದೆ. ಪ್ರತಿ ಸೀಸನ್ನಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಒಂದಾದರೂ ವಿವಾದ ಆಗುತ್ತದೆ. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಮನೆಯಲ್ಲಿ ಫೈಟ್ ಜೋರಾಗಿದೆ. ಈ ವಾರ ಶೋನಲ್ಲಿ ಸಾಕಷ್ಟು ಘಟನೆಗಳು ನಡೆದವು. ಸಮರ್ಥ್ಗೆ ಹೊಡೆಯುವ ಮೂಲಕ ಅಭಿಷೇಕ್ (Abhishek) ಅವರು ಬಿಗ್ ಬಾಸ್ನಿಂದ ಔಟ್ ಆಗಿದ್ದಾರೆ. ಈ ವಿಚಾರವನ್ನು ಸಲ್ಮಾನ್ ಖಾನ್ ಅವರು ವೀಕೆಂಡ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಇಶಾ ಮಾಳವಿಯಾ, ಸಮರ್ಥ್ ಜುರೈಲ್ ಹಾಗೂ ಅಭಿಷೇಕ್ ಕುಮಾರ್ ಜಗಳ ಆಡುತ್ತಿದ್ದರು. ಮೂವರ ನಡುವಿನ ಜಗಳ ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿತ್ತೆಂದರೆ ಅಭಿಷೇಕ್ ಕೋಪದ ಭರದಲ್ಲಿ ಸಮರ್ಥ ಅವರ ಕೆನ್ನೆಗೆ ಹೊಡೆದಿದ್ದಾರೆ. ಅವರು ನಡೆದುಕೊಂಡ ರೀತಿಗೆ ಅನೇಕರು ಅಸಮಾಧಾನ ಹೊರಹಾಕಿದರು. ಕೊನೆಗೆ ಅಭಿಷೇಕ್ ಮನೆಯಿಂದ ಹೊರಹೋಗಬೇಕಾಯಿತು. ಅಭಿಷೇಕ್ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅಂಕಿತಾ ಲೋಖಂಡೆಯನ್ನು ಕೇಳಿದ್ದರು. ಅಭಿಷೇಕ್ ಅವರನ್ನು ಮನೆಯಿಂದ ಹೊರ ಕಳಿಸುವ ನಿರ್ಧಾರವನ್ನು ಅಂಕಿತಾ ತೆಗೆದುಕೊಂಡರು.
ಎಲ್ಲಾ ಬೆಳವಣಿಗೆಯಿಂದ ಈ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ತುಂಬಾ ಆಕ್ರೋಶಗೊಂಡಿದ್ದಾರೆ. ‘ವೀಕೆಂಡ್ ಕಾ ವಾರ್’ನಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಅಭಿಷೇಕ್‌ಗೆ ಮಾನಸಿಕವಾಗಿ ಹಿಂಸೆ ನೀಡಿದ್ದಕ್ಕೆ ಸಮರ್ಥ್ಗೆ ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಶಾ ಮಾಳವಿಯಾ ಬಳಿಯೂ ಸಲ್ಮಾನ್ ಅಭಿಪ್ರಾಯ ಕೇಳಿದ್ದಾರೆ.
‘ಅಭಿಷೇಕ್ ಮಾಡಿದ್ದು ತಪ್ಪು. ನೂರಕ್ಕೆ ನೂರರಷ್ಟು ತಪ್ಪು. ಆದರೆ ಆ ತಪ್ಪನ್ನು ಮಾಡುವಂತೆ ಪ್ರೇರೇಪಿಸುವುದು ತಪ್ಪಲ್ಲವೇ?’ ಎಂದು ಸಲ್ಮಾನ್ ಎಲ್ಲರಿಗೂ ಕೇಳಿದರು. ‘ಬಾಯಿಯಲ್ಲಿ ಟಿಶ್ಯೂ ಪೇಪರ್ ಹಾಕುವುದು. ಬಾಪ್ ಕಾ ಮೆಂಟಲ್ ಬೇಟಾ ಅನ್ನೋದು. ಎಲ್ಲರೂ ಇದನ್ನು ನಿಂತು ನೋಡುತ್ತಿದ್ದಿರಿ. ಆದರೆ ಯಾರೂ ಸಮರ್ಥನನ್ನು ತಡೆಯಲು ಪ್ರಯತ್ನಿಸಿಲ್ಲ. ನೀನು ಹುಚ್ಚನಾ? ನೀನು ಏನು ಮಾಡುತ್ತಿರುವೆ? ಇದನ್ನೆಲ್ಲಾ ಮಾಡಬೇಡಿ ಎಂದು ಯಾರೂ ಸಮರ್ಥ್ಗೆ ಹೇಳಲಿಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದರು.
‘ನೀವು ಅಭಿಷೇಕ್ ಸ್ಥಾನದಲ್ಲಿ ಇದ್ದರೆ ನೀವು ಏನು ಮಾಡುತ್ತಿದ್ದಿರಿ’ ಎಂದು ಇಶಾಗೆ ಸಲ್ಮಾನ್ ಕೇಳಿದ್ದಾರೆ. ಆಗ ಅವರು, ‘ನಾನು ಹೊಡೆದಿರುತ್ತಿದ್ದೆ’ ಎಂದಿದ್ದಾರೆ.
ಸಮರ್ಥ್ ಅವರಿಗೂ ಸಲ್ಲು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಅವರು (ಅಭಿಷೇಕ್) ನಿಮ್ಮ ಮೇಲೆ ಕೈ ಎತ್ತಲಿ ಎಂದು ನೀವು ಬಯಸಿದ್ದಿರಾ? ಇದು ನಿಮ್ಮ ಪ್ಲ್ಯಾನ್ ಆಗಿತ್ತೇ’ ಎಂದು ಕೇಳಿದ್ದಾರೆ ಸಲ್ಮಾನ್. ಆಗ ಸಮರ್ಥ್ ವಿವರಿಸಿದ್ದಾರೆ. ‘ಇದು ಅವನ ಟ್ರಿಗರ್ ಪಾಯಿಂಟ್ ಎಂದು ನನಗೆ ತಿಳಿದಿತ್ತು. ಅವರು ಮಾನಸಿಕವಾಗಿ ಅಷ್ಟೊಂದು ಗಟ್ಟಿಯಾಗಿಲ್ಲ’ ಎಂದರು ಸಮರ್ಥ್. ‘ಇದು ನೀವು ಬಯಸಿದ ಫೈನಲ್. ನೀವು ಅದರಲ್ಲಿ ಯಶಸ್ವಿಯಾಗಿದ್ದೀರಿ’ ಎಂದಿದ್ದಾರೆ ಸಲ್ಮಾನ್.
FULL promo #BiggBoss17 WKW #AbhishekKumar eviction and #SalmanKhan bashing HMs pic.twitter.com/kIGFyincPL
— The Khabri (@TheKhabriTweets) January 5, 2024
ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?
ಕೆಲವು ದಿನಗಳ ಹಿಂದೆ ಇಶಾ ಮಾಳವಿಯಾ, ಸಮರ್ಥ್ ಜುರೈಲ್ ಮತ್ತು ಅಭಿಷೇಕ್ ಕುಮಾರ್ ನಡುವೆ ದೊಡ್ಡ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಇಶಾ ಮತ್ತು ಸಮರ್ಥ ಅವರು ಅಭಿಷೇಕ್‌ಗೆ ತುಂಬಾ ಚುಚ್ಚುಮಾತುಗಳನ್ನು ಆಡಿದ್ದರು. ಇಶಾ ಮತ್ತು ಸಮರ್ಥ್ ಇಬ್ಬರೂ ಅಭಿಷೇಕ್ ಅವರ ಮಾನಸಿಕ ಸಮಸ್ಯೆಯನ್ನು ಗೇಲಿ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅಭಿಷೇಕ್ ಅವರು ಸಮರ್ಥ್ ಕೆನ್ನೆಗೆ ಹೊಡೆದಿದ್ದರು. ಆ ಬಳಿಕ ಅವರನ್ನು ಮನೆಯಿಂದ ಹೊರ ಹಾಕಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Sat, 6 January 24