ಭಾರತ ಟ್ರೆಂಡ್ನಲ್ಲಿ We Love Drone Prathap ಹ್ಯಾಶ್ ಟ್ಯಾಗ್; ಟ್ವಿಟರ್ನಲ್ಲಿ ಪ್ರತಾಪ್ ಹವಾ
Drone Prathap: ಡ್ರೋನ್ ಪ್ರತಾಪ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಭಾರತದ ಟಾಪ್ ಟ್ರೆಂಡ್ನಲ್ಲಿ ಪ್ರತಾಪ್ ಹೆಸರು ಕೂಡ ಇದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (BiggBoss) ಹಲವು ಮನಸ್ಥಿತಿಯ ಸ್ಪರ್ಧಿಗಳು ಆಗಮಿಸಿದ್ದರು. ಕೆಲವರು ಈಗಲೂ ಮನೆಯಲ್ಲಿದ್ದಾರೆ, ಅದರಲ್ಲಿ ಹೈಲೈಟ್ ಆದವರ ಪೈಕಿ ಪ್ರತಾಪ್ ಕೂಡ ಒಬ್ಬರು. ಈ ಮೊದಲು ಪ್ರತಾಪ್ ಅವರ ಬಗ್ಗೆ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಒಂದೆರಡು ವಾರದಲ್ಲಿ ಅವರು ಎಲಿಮಿನೇಟ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ. ಅವರು ಹೈಲೈಟ್ ಆದರು. ಅವರು ಅನೇಕರಿಗೆ ಇಷ್ಟ ಆಗುತ್ತಾ ಬಂದರು. ಈಗ ಅವರ ಹೆಸರಲ್ಲಿ ಹಲವು ಫ್ಯಾನ್ಪೇಜ್ಗಳು ಕ್ರಿಯೇಟ್ ಆಗಿವೆ. ವಿಶೇಷ ಎಂದರೆ ಈಗ ಡ್ರೋನ್ ಪ್ರತಾಪ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಭಾರತ ಟ್ರೆಂಡ್ನಲ್ಲಿ ಪ್ರತಾಪ್ ಹೆಸರು ಕೂಡ ಇದೆ.
ಪ್ರತಾಪ್ ಅವರು ಡ್ರೋನ್ ಕಂಡು ಹಿಡಿದ್ದಾಗಿ ಹೇಳಿಕೊಂಡಿದ್ದರು. ಅದು ಸುಳ್ಳು ಎನ್ನೋದು ಬಳಿಕ ಗೊತ್ತಾಯಿತು. ಈ ಕಾರಣಕ್ಕೆ ಅವರು ಸಾಕಷ್ಟ್ರು ಟ್ರೋಲ್ ಆದರು. ಆ ಬಳಿಕ ಅವರು ಬಿಗ್ ಬಾಸ್ಗೆ ಬಂದ ಬಳಿಕ ಅವರ ಚಾರ್ಮ್ ಬದಲಾಯಿತು. ಅವರನ್ನು ಅನೇಕರು ಇಷ್ಟಪಡೋಕೆ ಆರಂಭಿಸಿದರು. ಅವರ ಆಟದ ವೈಖರಿ ಬದಲಾಯಿತು. ಈಗ ಬಿಗ್ ಬಾಸ್ ಮನೆಯಲ್ಲಿ ಅವರು ಹೈಲೈಟ್ ಆಗುತ್ತಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ಪ್ರತಾಪ್ ಅವರು ಬಿಗ್ ಬಾಸ್ಗೆ ಮರಳಿದ್ದಾರೆ. ಈ ಬೆನ್ನಲ್ಲೇ ಅವರ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ಫೈಟ್; ಕೆನ್ನೆಗೆ ಬಾರಿಸಿ ಎಲಿಮಿನೇಟ್ ಆದ ಸ್ಪರ್ಧಿ
ಟ್ವಿಟರ್ನಲ್ಲಿ 26 ಸಾವಿರಕ್ಕೂ ಅಧಿಕ ಟ್ವೀಟ್ಗಳನ್ನು ಮಾಡಲಾಗಿದೆ. ‘We Love Drone Prathap’ ಅನ್ನೋದು ಟ್ರೆಂಡ್ ಆಗುತ್ತಿದೆ. ಭಾರತದ ಟ್ರೆಂಡ್ನಲ್ಲಿ ಅವರ ಹೆಸರು ಕೂಡ ಬಂದಿದೆ. ಫಿನಾಲೆ ಸಂದರ್ಭದಲ್ಲಿ ಅವರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗುತ್ತಿರುವುದಕ್ಕೆ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಸತತ ಎರಡು ದಿನ ಅವರು ಏನನ್ನೂ ತಿನ್ನದ ಕಾರಣ ಅವರ ಆರೋಗ್ಯ ಹಾಳಾಗಿತ್ತು. ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾರಣಕ್ಕೆ ಅವರು ಕೆಲವು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಈಗ ಅವರು ಮರಳಿ ಬಂದಿದ್ದಾರೆ. ಈ ವಾರ ಡ್ರೋನ್ ಪ್ರತಾಪ್ ಹೆಸರು ನಾಮಿನೇಷನ್ ಲಿಸ್ಟ್ನಲ್ಲಿದೆ. ಈ ವಾರ ಹೆಚ್ಚು ವೋಟ್ ಪಡೆದು ಸೇವ್ ಆಗಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ