ಕ್ಯಾನ್ಸರ್ ಮುಕ್ತರಾದ ಬಳಿಕ ಎನರ್ಜಿ ಹೆಚ್ಚಿಸಿಕೊಂಡ ಶಿವಣ್ಣ; ಇಲ್ಲಿದೆ ವಿಡಿಯೋ ಸಾಕ್ಷಿ

ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅವರ ಹೊಸ ಚಿತ್ರ ‘45’ರ ಪ್ರಚಾರ ಕಾರ್ಯಕ್ರಮದಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಘಟನೆಗಳು ಅವರ ಸಂಪೂರ್ಣ ಚೇತರಿಕೆಯನ್ನು ತೋರಿಸುತ್ತವೆ.

ಕ್ಯಾನ್ಸರ್ ಮುಕ್ತರಾದ ಬಳಿಕ ಎನರ್ಜಿ ಹೆಚ್ಚಿಸಿಕೊಂಡ ಶಿವಣ್ಣ; ಇಲ್ಲಿದೆ ವಿಡಿಯೋ ಸಾಕ್ಷಿ
ಶಿವರಾಜ್​ಕುಮಾರ್
Updated By: ರಾಜೇಶ್ ದುಗ್ಗುಮನೆ

Updated on: Apr 18, 2025 | 8:04 AM

ಶಿವರಾಜ್​ಕುಮಾರ್ (Shiva Rajkumar) ಅವರು ಕ್ಯಾನ್ಸರ್​​ಗೆ ಒಳಗಾಗಿದ್ದರು. ಅವರಿಗೆ ಕ್ಯಾನ್ಸರ್ ಇರೋ ವಿಚಾರ ಸಾಕಷ್ಟು ಆತಂಕ ಮೂಡಿಸಿತ್ತು. ಆದರೆ, ಶಿವರಾಜ್​ಕುಮಾರ್ ಅವರು ಈಗ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅವರು ಅಮೆರಿಕದಲ್ಲಿ ಆಪರೇಷನ್​ಗೆ ಒಳಗಾಗಿ, ಭಾರತಕ್ಕೆ ಬಂದರು. ಈಗ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಶಿವರಾಜ್​ಕುಮಾರ್ ಅವರು ಈಗ ಮೊದಲಿನ ಎನರ್ಜಿಗೆ ಬಂದಿದ್ದಾರೆ. ಅವರ ಎನರ್ಜಿ ಮತ್ತಷ್ಟು ಹೆಚ್ಚಾದಂತೆ ಕಾಣುತ್ತಿದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ.

ಶಿವಣ್ಣ ಹಾಗೂ ಜೀ ಕನ್ನಡದ ಮಧ್ಯೆ ಅವಿನಾಭಾವ ಸಂಬಂಧ ಇದೆ. ಶಿವರಾಜ್​ಕುಮಾರ್ ಅವರು ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು. ಈಗ ಅವರು ‘ಸರಿಗಮಪ’ ವೇದಿಕೆ ಮೇಲೆ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ಜೊತೆ ಮಗಳು ನಿವೇದಿತಾ ಕೂಡ ಇದ್ದರು. ನಿವೇದಿತಾ ನಿರ್ಮಾಣದ ‘ಫೈರ್​ ಫ್ಲೈ’ ಚಿತ್ರದ ಪ್ರಚಾರ ಮಾಡಲಾಗಿದೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಶಿವಣ್ಣ ಅವರು ಮೊದಲಿನ ಎನರ್ಜಿಯಲ್ಲೇ ಡ್ಯಾನ್ಸ್ ಮಾಡಿರೋದು ವಿಶೇಷ.

ಇದನ್ನೂ ಓದಿ
ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?
ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಸಿನಿಮಾ
ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ  

ಶಿವರಾಜ್​ಕುಮಾರ್ ವೇದಿಕೆ ಏರಿದರು ಎಂದರೆ ಅವರಿಂದ ಎಲ್ಲರೂ ಡ್ಯಾನ್ಸ್​ನ ನಿರೀಕ್ಷೆ ಮಾಡುತ್ತಾರೆ. ಆದರೆ, ಅವರಿಗೆ ಆಪರೇಷನ್ ಆಗಿದೆ. ಈಗ ಅವರ ಬಳಿ ಡ್ಯಾನ್ಸ್ ಮಾಡಿಸಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಮೂಡಬಹುದು. ಆದರೆ, ಶಿವರಾಜ್​ಕುಮಾರ್ ಮೊದಲಿನ ಎನರ್ಜಿಗೆ ಮರಳಿದ್ದಾರೆ. ‘ಸರಿಗಮಪ’ ವೇದಿಕೆ ಮೇಲೆ ಅವರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಶಿವಣ್ಣ ಅವರನ್ನು ನೋಡಿ ಆ್ಯಂಕರ್ ಅನುಶ್ರೀ, ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಖುಷಿ ಆಗಿದ್ದಾರೆ.

ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್​ಕುಮಾರ್

ಅರ್ಜುನ್ ಜನ್ಯ ಅವರು ಸಿನಿಮಾ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಅವರು ‘45’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಶಿವರಾಜ್​ಕುಮಾರ್ ಅವರು ಹೀರೋ. ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಈ ಸಿನಿಮಾ ರಿಲೀಸ್​ಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಚಿತ್ರ್ಕೆ ಉತ್ತಮ ಪ್ರಚಾರ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Fri, 18 April 25