ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ

ಕನ್ನಡದ ಕಿರುತೆರೆ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡ ಸಿಂಗರ್ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ಧನಂಜಯ್ ಶರ್ಮ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಅಖಿಲಾ ನಿರ್ಧರಿಸಿದ್ದಾರೆ. ಪುತ್ತೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮ ಅರ್ಜಿ ಸಲ್ಲಿಸಿದ್ದಾರೆ.

ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ
Dhananjay Sharma, Akhila Pajimannu
Edited By:

Updated on: Jun 19, 2025 | 10:34 PM

ಯುವ ಗಾಯಕಿ ಅಖಿಲಾ ಪಜಿಮಣ್ಣು (Akhila Pajimannu) ಅವರ ಖಾಸಗಿ ಬದುಕಿನ ಬಗ್ಗೆ ಶಾಕಿಂಗ್ ಸುದ್ದಿ ಇದು. ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅಖಿಲಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನಕ್ಕಾಗಿ (Divorce) ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 3 ವರ್ಷಗಳ ಹಿಂದೆ ಬೆಳಗಾವಿ ಮೂಲದ ಅಮೆರಿಕ ನಿವಾಸಿ ಧನಂಜಯ್ ಶರ್ಮ (Dhananjay Sharma) ಜೊತೆ ಅಖಿಲಾ ಪಜಿಮಣ್ಣು ವಿವಾಹ ನೆರವೇರಿತ್ತು. ಆದರೆ ಅವರ ಸಂಸಾರದಲ್ಲಿ ಸಾಮರಸ್ಯ ಮಾಯವಾಗಿದೆ. ಧನಂಜಯ್ ಶರ್ಮಾ ಮತ್ತು ಅಖಿಲಾ ಪಜಿಮಣ್ಣು ಅವರು ಬೇರಾಗಲು ನಿರ್ಧರಿಸಿದ್ದಾರೆ.

ಅಖಿಲಾ ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನವರು. ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಅವರು ಖ್ಯಾತಿ ಗಳಿಸಿದ್ದಾರೆ. ಸುಮಧುರ ಗಾಯನದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರು ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಅವರು ಪುತ್ತೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮಾ ನಡುವೆ ಮಧ್ಯಸ್ಥಿಕೆಗೆ ಕಳೆದ ಆರು ತಿಂಗಳಿಂದ ಕೋರ್ಟ್ ಅವಕಾಶ ನೀಡಿತ್ತು. ಬುಧವಾರ (ಜೂನ್ 18) ಈ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮ್ಯೂಚುಯಲ್‌ ಡಿವೋರ್ಸ್ ಪಡೆಯಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ
ಸ್ಲೀಪ್ ಡೈವೋರ್ಸ್ ನಲ್ಲಿ ಚೀನಾ, ದಕ್ಷಿಣ ಕೊರಿಯಾವನ್ನೇ ಹಿಂದಿಕ್ಕಿದ ಭಾರತ
4 ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?
ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?
ನಿದ್ರೆಯ ವಿಚ್ಛೇದನವು ದಂಪತಿಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆಯೇ?

ಧನಂಜಯ್ ಶರ್ಮ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿ ವಾಪಸ್ ತೆರಳಿದ್ದಾರೆ. ಸದ್ಯದಲ್ಲೇ ಅವರು ಅಮೆರಿಕಕ್ಕೆ ಹೋಗಲಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಈ ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ಮುಗಿದಿದೆ. ನ್ಯಾಯಾಲಯವು ಶುಕ್ರವಾರಕ್ಕೆ (ಜೂನ್ 19) ತೀರ್ಪು ಕಾಯ್ದಿರಿಸಿದೆ. ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದ ಅಖಿಲಾ ಮತ್ತು ಧನಂಜಯ್ ಅವರು ಈಗ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಆಗದಿರಲು ವಿಚ್ಛೇದನದ ಭಯವೇ ಕಾರಣ; ಓಪನ್ ಆಗಿ ಮಾತನಾಡಿದ ನಟ

ಅಷ್ಟಕ್ಕೂ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಅವರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ. ಈಗಾಗಲೇ ಅಖಿಲಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಪತಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮೌನ ಮುರಿಯಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.