ಗರ್ಲ್​ಫ್ರೆಂಡ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೃಥ್ವಿ ಷಾ; ಕಾಲೆಳೆದ ಕಪಿಲ್​ ಶರ್ಮಾ

| Updated By: ರಾಜೇಶ್ ದುಗ್ಗುಮನೆ

Updated on: Jan 18, 2022 | 9:18 PM

‘ದಿ ಕಪಿಲ್​ ಶರ್ಮಾ ಶೋ’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಾಮಿಡಿ ಶೋ. ಈ ಬಾರಿ ಟೀಂ ಇಂಡಿಯಾ ಆಟಗಾರರಾದ ಪೃಥ್ವಿ ಷಾ ಹಾಗೂ ಶಿಖರ್​ ಧವನ್​ ಆಗಮಿಸಿದ್ದರು. ಈ ವೇಳೆ ಪೃಥ್ವಿಗೆ ಗರ್ಲ್​ಫ್ರೆಂಡ್​ ಬಗ್ಗೆ ಪ್ರಶ್ನೆ ಒಂದನ್ನು ಕೇಳಲಾಯಿತು.

ಗರ್ಲ್​ಫ್ರೆಂಡ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೃಥ್ವಿ ಷಾ; ಕಾಲೆಳೆದ ಕಪಿಲ್​ ಶರ್ಮಾ
ಕಪಿಲ್​ ಶರ್ಮಾ-ಪೃಥ್ವಿ ಷಾ
Follow us on

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಖಾಸಗಿ ವಿಚಾರವನ್ನು ಆದಷ್ಟು ಗುಟ್ಟಾಗಿ ಇಡೋಕೆ ಪ್ರಯತ್ನಿಸುತ್ತಾರೆ. ಆ ಬಗ್ಗೆ ಸುದ್ದಿ ಲೀಕ್​ ಆದರೆ ಸೋಶಿಯಲ್​ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳಲ್ಲಿ ನಾನಾ ರೀತಿಯ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಪಾಪರಾಜಿಗಳ ಕ್ಯಾಮೆರಾ ಇವರ ಮೇಲೆ ನೆಟ್ಟಿರುತ್ತದೆ. ಈ ಕಾರಣಕ್ಕೆ, ಪ್ರೀತಿ-ಪ್ರೇಮದ ವಿಚಾರದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಗುಟ್ಟು ಕಾಯ್ದುಕೊಳ್ಳುತ್ತಾರೆ. ಸಾಕಷ್ಟು ಕ್ರಿಕೆಟರ್​ಗಳು ಕೂಡ ವೈಯಕ್ತಿಕ ವಿಚಾರವನ್ನು ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಾರೆ. ಈಗ ಗರ್ಲ್​ಫ್ರೆಂಡ್ ಬಗ್ಗೆ ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ (Team India) ಆಟಗಾರ ಪೃಥ್ವಿ ಷಾ (Prithvi Shaw) ನೇರವಾಗಿ ಉತ್ತರಿಸಿದ್ದಾರೆ. ಆದರೆ, ಉತ್ತರ ಹೇಳಿದ ನಂತರ ಅವರು ಮಾಡಿದ ರೀತಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

‘ದಿ ಕಪಿಲ್​ ಶರ್ಮಾ ಶೋ’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಾಮಿಡಿ ಶೋ. ಈ ಶೋಗೆ ಸಿನಿಮಾ ತಂಡದವರು ಮಾತ್ರವಲ್ಲದೆ, ಬೇರೆಬೇರೆ ಕ್ಷೇತ್ರದವರೂ ಆಗಮಿಸುತ್ತಾರೆ. ಕ್ರಿಕೆಟ್​ ಲೋಕದ ಸಾಕಷ್ಟು ಮಂದಿ ಈ ಶೋಗೆ ಆಗಮಿಸಿದ್ದರು. ಈ ಬಾರಿ ಟೀಂ ಇಂಡಿಯಾ ಆಟಗಾರರಾದ ಪೃಥ್ವಿ ಷಾ ಹಾಗೂ ಶಿಖರ್​ ಧವನ್​ ಆಗಮಿಸಿದ್ದರು. ಈ ವೇಳೆ ಪೃಥ್ವಿಗೆ ಗರ್ಲ್​ಫ್ರೆಂಡ್​ ಬಗ್ಗೆ ಪ್ರಶ್ನೆ ಒಂದನ್ನು ಕೇಳಲಾಯಿತು. ಪೃಥ್ವಿ ಇದಕ್ಕೆ ನೇರವಾಗಿ ಉತ್ತರ ನೀಡಿದರು.

‘ನನಗೆ ಗರ್ಲ್​ಫ್ರೆಂಡ್​ ಇಲ್ಲ’ ಎನ್ನುವ ಮಾತನ್ನು ಪೃಥ್ವಿ ಷಾ ಹೇಳಿದರು. ಆ ಬಳಿಕ ನಾಲಿಗೆ ಕಚ್ಚಿಕೊಂಡರು. ಸೋನಿ ಟಿವಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ನಟಿ ಪ್ರಾಚಿ ಸಿಂಗ್​ ಜತೆ ಪೃಥ್ವಿ ಷಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿಲ್ಲ.

ಇತ್ತೀಚೆಗೆ ಚಿತ್ರರಂಗದಲ್ಲಿ ಬಯೋಪಿಕ್​ ಟ್ರೆಂಡ್​ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಜನರ ಬಯೋಪಿಕ್​ಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಅನೇಕರು ಯಶಸ್ಸು ಕಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಕಾಮಿಡಿಯನ್​ ಕಪಿಲ್​ ಶರ್ಮಾ  ಕುರಿತು ಈಗ ಬಯೋಪಿಕ್​ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಕಪಿಲ್​ ಶರ್ಮಾ ಅವರ ಆರಂಭಿಕ ಜೀವನ ಹೇಗಿತ್ತು? ಅವರು ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಹೀಗೆ ಹಲವು ವಿಚಾರಗಳ ಬಗ್ಗೆ ಈ ಬಯೋಪಿಕ್​ನಲ್ಲಿ ಹೇಳಲಾಗುತ್ತದೆ. ‘ಫನ್ಕಾರ್​’  ಎನ್ನುವ ಶೀರ್ಷಿಕೆಯನ್ನು ಸಿನಿಮಾಗೆ ಇಡಲಾಗಿದೆ. ಮೃಗದೀಪ್​ ಸಿಂಗ್​ ಲಂಬಾ  ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಕಪಿಲ್​ ಶರ್ಮಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ

ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್​ ಶರ್ಮಾ ಶೋ’ ಹಾಸ್ಯನಟ