‘ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ..’; ಸುದ್ದಿಗೋಷ್ಠಿಯಲ್ಲಿ ತ್ರಿವಿಕ್ರಂ ಬೇಸರ
ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಂ ಅವರು ತಮ್ಮ ಆರ್ಥಿಕ ಸಂಕಷ್ಟ ಮತ್ತು ಕುಟುಂಬದ ಜವಾಬ್ದಾರಿಗಳ ಬಗ್ಗೆ ತೆರೆದಿಟ್ಟು ಮಾತನಾಡಿದ್ದಾರೆ. ಕೋವಿಡ್ ಸಮಯದಲ್ಲಿ ಎದುರಿಸಿದ ಸವಾಲುಗಳು ಮತ್ತು ತಂದೆಯನ್ನು ಕಳೆದುಕೊಂಡ ನೋವು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಗೆದ್ದಿದ್ದರೆ ಸಿಗುತ್ತಿದ್ದ ಹಣದಿಂದ ಸ್ಥಿರವಾಗಬಹುದಿತ್ತು ಎಂದು ಅವರು ಹೇಳಿದ್ದಾರೆ.

ಎಲ್ಲಾ ಕಲಾವಿದರ ಬದುಕು ಕಲರ್ಫುಲ್ ಆಗಿರುವುದಿಲ್ಲ. ಯಾವ ರೀತಿಯಲ್ಲಿ ಬಣ್ಣ ಬಣ್ಣದ ಫೋಟೋಗಳನ್ನು ಹಾಕಿಕೊಳ್ಳುತ್ತಾರೋ ಆ ರೀತಿಯಲ್ಲಿ ಅವರ ಬದುಕು ಇರುವುದಿಲ್ಲ. ಇದನ್ನು ಕೆಲವರು ಹೇಳಿಕೊಂಡರೆ, ಇನ್ನೂ ಕೆಲವರು ಅದನ್ನು ತೋರಿಸುವ ಕೆಲಸ ಮಾಡುವುದಿಲ್ಲ. ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಂ ಅವರು ಈ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ವಿನ್ ಆಗಿದ್ದರೆ ಎಷ್ಟು ಸಹಾಯ ಆಗುತ್ತಿತ್ತು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.
ತ್ರಿವಿಕ್ರಂ ಅವರು ಕಿರುತೆರೆಯಲ್ಲಿ ನಟಿಸಿದವರು. ಕೊವಿಡ್ ಸಮಯದಲ್ಲಿ ಎಲ್ಲವೂ ಬದಲಾಯಿತು. ಅವರಿಗೆ ಸಿನಿಮಾ ಇರಲಿಲ್ಲ. ಇದರ ಜೊತೆಗೆ ತಂದೆಯನ್ನು ಕೂಡ ಕಳೆದುಕೊಂಡರು. ಅವರು ತಮ್ಮ ಕಷ್ಟದ ಜೀವನದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.
‘ತಂದೆ ಹೋದಾಗ ಮಕ್ಕಳ ಮೇಲೆ ಜವಾಬ್ದಾರಿ ಬರುತ್ತದೆ. ನನ್ನ ಮೇಲೂ ಅದೇ ಜವಾಬ್ದಾರಿ ಬಂತು. ನಮ್ಮ ಕಷ್ಟಗಳು ಏನು ಅಂತ ತಾಯಿಗೆ ಮಾತ್ರ ಗೊತ್ತಿದೆ. ಇರೋ ರೀತಿ ನೋಡಿದರೆ ಕಷ್ಟನೇ ಇಲ್ಲ ಎಂಬ ರೀತಿ ಕಾಣುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ಇಲ್ಲಿ ಇರೋಕೆ ಆಗಲ್ಲ. ಎಲ್ಲಾ ಸ್ಟ್ರಗಲಿಂಗ್ ಆ್ಯಕ್ಟರ್ಗಳದ್ದು ಇದೇ ತರ ಜೀವನ ಇರುತ್ತದೆ’ ಎಂದು ತ್ರಿವಿಕ್ರಂ ಅವರು ಬೇಸರ ಹೊರಹಾಕಿದರು.
‘ನಾನು ಗೆದ್ದಿದ್ದರೆ ಆ ಹಣದಿಂದ ಸೆಟಲ್ ಆಗುತ್ತೇನೆ ಎಂಬ ಆಲೋಚನೆ ಅಮ್ಮ ಅವರದ್ದು. ನನಗೆ ಈಗ ಎಷ್ಟು ಸಿಕ್ಕಿದೆಯೋ ಆ ಬಗ್ಗೆ ಅಮ್ಮನಿಗೆ ಖುಷಿ ಇದೆ’ ಎಂದು ತ್ರಿವಿಕ್ರಂ ಅವರು ಹೇಳಿದ್ದಾರೆ. ತ್ರಿವಿಕ್ರಂ ಅವರಿಗೆ ಬಹುಮಾನ ಮೊತ್ತವಾಗಿ 15 ಲಕ್ಷ ರೂಪಾಯಿ ಸಿಕ್ಕಿದೆ. ಇದರ ಜೊತೆಗೆ 119 ದಿನ ಇದ್ದಿಕ್ಕೆ ಸಂಭಾವನೆ ಕೂಡ ಸಿಕ್ಕಿದೆ.
ಇದನ್ನೂ ಓದಿ: ಹನುಮಂತನ ಬಗ್ಗೆ ಮಾತಾಡಿ ಟ್ರೋಲ್ ಆದ ತ್ರಿವಿಕ್ರಂ ತಾಯಿ; ಅಂಥದ್ದೇನ್ ಹೇಳಿದ್ರು?
ಇತ್ತೀಚೆಗೆ ಮಾತನಾಡಿದ್ದ ತ್ರಿವಿಕ್ರಂ ಅವರ ತಾಯಿ, ‘ನನಗೆ ಹನುಮಂತ ಗೆದ್ದ ಬಗ್ಗೆ ಬೇಸರ ಇದೆ. ನನ್ನ ಮಗನೇ ಗೆಲ್ಲಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ, ಹನುಮಂತ ಗೆಲ್ಲಬಾರದಿತ್ತು. ಅವನು ಏನೂ ಮಾಡಿಲ್ಲ’ ಎಂದು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




