AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯ ಟಿವಿಯಲ್ಲಿ ‘ರಾಧಿಕಾ’: ಹೊಸ ಸೀರಿಯಲ್​ ಮೂಲಕ ಮನರಂಜನೆ ನೀಡಲಿರುವ ಕಾವ್ಯಾ ಶಾಸ್ತ್ರಿ

ನಟಿ ಮತ್ತು ನಿರೂಪಕಿಯಾಗಿ ಗಮನ ಸೆಳೆದ ಕಾವ್ಯಾ ಶಾಸ್ತ್ರಿ ಅವರು ‘ರಾಧಿಕಾ’ ಧಾರಾವಾಹಿಯಲ್ಲಿ ಹೆಡ್​ ನರ್ಸ್​ ಪಾತ್ರ ಮಾಡುತ್ತಿದ್ದಾರೆ. ಮಾ.14ರಿಂದ ಈ ಸೀರಿಯಲ್​ ಆರಂಭ ಆಗಲಿದೆ.

ಉದಯ ಟಿವಿಯಲ್ಲಿ ‘ರಾಧಿಕಾ’: ಹೊಸ ಸೀರಿಯಲ್​ ಮೂಲಕ ಮನರಂಜನೆ ನೀಡಲಿರುವ ಕಾವ್ಯಾ ಶಾಸ್ತ್ರಿ
ಕಾವ್ಯಾ ಶಾಸ್ತ್ರಿ
TV9 Web
| Updated By: ಮದನ್​ ಕುಮಾರ್​|

Updated on:Mar 09, 2022 | 3:30 PM

Share

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಜನಮನ ಗೆದ್ದಿವೆ. ಅವುಗಳ ಮೂಲಕ ಸಾವಿರಾರು ಕಥೆಗಳು ವೀಕ್ಷಕರನ್ನು ತಲುಪಿವೆ. ಹಾಗಿದ್ದರೂ ಇಲ್ಲಿ ಕಥೆಗಳಿಗೆ ಬರಗಾಲವಿಲ್ಲ. ಭಿನ್ನ ವಿಭಿನ್ನ ಸ್ಟೋರಿಗಳನ್ನು ಇಟ್ಟುಕೊಂಡು ಹೊಸ ಹೊಸ ಸೀರಿಯಲ್​ಗಳು ಬರುತ್ತಲೇ ಇವೆ. ಆ ಸಾಲಿಗೆ ‘ರಾಧಿಕಾ’ ಧಾರಾವಾಹಿ ಸೇರ್ಪಡೆ ಆಗುತ್ತಿದೆ. ‘ಉದಯ ಟಿವಿ’ (Udaya TV) ಮೂಲಕ ಈ ಸೀರಿಯಲ್​ ಪ್ರಸಾರಕ್ಕೆ ಸಜ್ಜಾಗಿದೆ. ಟಿಆರ್​ಪಿ ವಿಚಾರದಲ್ಲಿ ಎಲ್ಲ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಇದೆ. ಪ್ರಸಾರ ಆಗುವ ಅನೇಕ ಧಾರಾವಾಹಿಗಳ ಪೈಕಿ ಪ್ರೇಕ್ಷಕರು ಯಾವುದಕ್ಕೆ ಮನ ಸೋಲುತ್ತಾರೆ ಎಂಬ ನಿರೀಕ್ಷೆ ಸದಾ ಇರುತ್ತದೆ. ಸಿನಿಮಾದ ಗುಣಮಟ್ಟದಲ್ಲೇ ಎಲ್ಲ ಸೀರಿಯಲ್​ಗಳು ಮೂಡಿಬರುತ್ತಿವೆ. ಹೊಸ ಧಾರಾವಾಹಿಗಳು ಪ್ರಸಾರ ಆದಾಗ ಸಹಜವಾಗಿಯೇ ಅವುಗಳ ಬಗ್ಗೆ ವೀಕ್ಷಕರು ಒಂದು ಕಣ್ಣು ಇಡುತ್ತಾರೆ. ಕಥೆ ಚೆನ್ನಾಗಿದ್ದರೆ ಖಂಡಿತವಾಗಿ ಇಷ್ಟಪಡುತ್ತಾರೆ. ಈಗ ‘ರಾಧಿಕಾ’ ಸೀರಿಯಲ್ (Radhika Kannada Serial) ಕೂಡ ಜನರನ್ನು ರಂಜಿಸಲು ಬರುತ್ತಿದೆ. ಈ ಧಾರಾವಾಹಿಯಲ್ಲಿ ಖ್ಯಾತ ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ (Kavya Shastry) ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಪ್ರಸಾರದ ಸಮಯ ಏನು? ಕಥೆ ಯಾವ ರೀತಿ ಇರಲಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ..

ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ ಮುಂತಾದ ಧಾರಾವಾಹಿಗಳಿಂದ ಗಮನ ಸೆಳೆದ ಉದಯ ವಾಹಿನಿ ಈಗ ‘ರಾಧಿಕಾ’ ಸೀರಿಯಲ್​ ಅನ್ನು ವೀಕ್ಷಕರ ಮುಂದೆ ಇರಿಸುತ್ತಿದೆ. ಮಾರ್ಚ್ 14ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರ ಆಗಲಿದೆ.

ಹೆಡ್​ ನರ್ಸ್​ ಪಾತ್ರದಲ್ಲಿ ಕಾವ್ಯಾ ಶಾಸ್ತ್ರಿ:

ಕಿರುತೆರೆಯಲ್ಲಿ ನಟಿ ಮತ್ತು ನಿರೂಪಕಿಯಾಗಿ ಗಮನ ಸೆಳೆದು, ಸಿನಿಮಾಗಳಲ್ಲೂ ಅಭಿನಯಿಸಿದ ಅನುಭವ ಹೊಂದಿರುವ ಕಾವ್ಯಾ ಶಾಸ್ತ್ರಿ ಅವರು ‘ರಾಧಿಕಾ’ ಧಾರಾವಾಹಿಯಲ್ಲಿ ಹೆಡ್​ ನರ್ಸ್​ ಪಾತ್ರ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ತನ್ನ ಕುಟುಂಬಕ್ಕೆ ಏಕೈಕ ಆಧಾರಸ್ತಂಭವಾಗಿ ಇರುವಂತಹ ಹುಡುಗಿಯ ಪಾತ್ರ ಇದು. ಒಡಹುಟ್ಟಿದವರ ಭವಿಷ್ಯವನ್ನು ರೂಪಿಸಲು ಹಗಲು-ಇರುಳು ಕಷ್ಟಪಡುವ ಯುವತಿಯಾಗಿ ಕಾವ್ಯಾ ಶಾಸ್ತ್ರಿ ಕಾಣಿಸಿಕೊಳ್ಳಲಿದ್ದಾರೆ.

ಒಡಹುಟ್ಟಿದವರ ಕಥೆ:

ತನ್ನ ಸೋದರ, ಸೋದರಿಯರು ನೆಲೆಕಂಡುಕೊಳ್ಳವವರೆಗೂ ತಾನು ಉಪ್ಪಿರುವ ಆಹಾರವನ್ನು ಸೇವಿಸುವುದಿಲ್ಲ ಎಂದು ರಾಧಿಕಾ ಪ್ರತಿಜ್ಞೆ ಮಾಡಿದ್ದಾಳೆ. ಸಹೋದರ ಪೊಲೀಸ್ ಆಗಬೇಕು, ಓರ್ವ ಸಹೋದರಿ ಡಾಕ್ಟರ್ ಆಗಬೇಕು ಹಾಗೂ ಮತ್ತೊಬ್ಬಳು ಕಾರ್ಪೊರೇಟ್ ಉದ್ಯೋಗ ಪಡೆಯಬೇಕು ಎಂಬುದು ರಾಧಿಕಾಳ ಆಸೆ. ತನ್ನ ಜೀವನದ ಪ್ರತಿಯೊಂದು ಸವಾಲನ್ನು ನಗುವಿನಿಂದ ಸ್ವೀಕರಿಸುವುದು ಆಕೆಯ ಗುಣ. ಆರ್ಥಿಕವಾಗಿ ದುರ್ಬಲವಾಗಿರುವ ಹುಡುಗಿಯರು ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಬೇಕಿರುವ ಏಕೈಕ ಆಸ್ತಿ ಎಂದರೆ ಅದು ಧೈರ್ಯ ಎಂದು ನಂಬಿರುವ ರಾಧಿಕಾ, ಖಾಸಗಿ ಆಸ್ಪತ್ರೆಯಲ್ಲಿ ಹೆಡ್ ನರ್ಸ್ ಆಗಿ ಕೆಲಸ ಮಾಡುತ್ತಾಳೆ. ಎಲ್ಲರಿಗೂ ಆಕೆ ಎಂದರೆ ಇಷ್ಟ. ಇಂಥ ಹುಡುಗಿ ತನ್ನ ಒಡಹುಟ್ಟಿದವರ ಜೀವನವನ್ನು ದಡಮುಟ್ಟಿಸುವಲ್ಲಿ ಗೆಲ್ಲುತ್ತಾಳಾ? ಆಕೆ ಸ್ವತಂತ್ರವಾಗಿ ತನ್ನ ಜೀವನವನ್ನು ಅನುಭವಿಸಲು ಸಾಧ್ಯವಾ? ಇವೇ ಮೊದಲಾದ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ‘ರಾಧಿಕಾ’ ಸೀರಿಯಲ್​ ಸಾಗುತ್ತದೆ.

ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?

ಕಾವ್ಯಾ ಶಾಸ್ತ್ರಿ ಜೊತೆ ನಾಯಕನಾಗಿ ಶರತ್ ಕ್ಷತ್ರಿಯ ಕಾಣಿಸಿಕೊಳ್ಳಲಿದ್ದಾರೆ. ಗಾಯತ್ರಿ ಪ್ರಭಾಕರ್, ರವಿ ಕಲಾಬ್ರಹ್ಮ, ಮಾಲತಿ ಸರದೇಶಪಾಂಡೆ, ಸುರೇಶ್ ರೈ, ಸವಿತಾ ಕೃಷ್ಣಮೂರ್ತಿ, ಶ್ವೇತಾ ರಾವ್, ಸುನಿಲ್, ಜೀವನ್, ರೇಖಾ ಸಾಗರ್, ಇಂಚರಾ ಶೆಟ್ಟಿ, ಪ್ರಿಯದರ್ಶಿನಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಶ್ರೀದುರ್ಗಾ ಕ್ರಿಯೇಷನ್ಸ್ ಬ್ಯಾನರ್ ಮೂಲಕ ‘ರಾಧಿಕಾ’ ಸೀರಿಯಲ್​ ಅನ್ನು ಗಣಪತಿ ಭಟ್ ನಿರ್ಮಾಣ ಮಾಡುತ್ತಿದ್ದು, ದರ್ಶಿತ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಹೆಗಡೆ ಮತ್ತು ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ಶೀರ್ಷಿಕೆ ಗೀತೆ  ತಯಾರಾಗಿದೆ. ತುರುವೇಕೆರೆ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದು, ರಾಘವೇಂದ್ರ ಸಂಕಲನ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಹೊಸ ಧಾರಾವಾಹಿ ‘ಮದುಮಗಳು’ ಪ್ರಸಾರಕ್ಕೆ ಉದಯ ಟಿವಿ ಸಜ್ಜು; ಈ ಸೀರಿಯಲ್​ ಕಥೆ ಏನು?

ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ

Published On - 3:14 pm, Wed, 9 March 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ