‘ನಾವು ಕನ್ನಡತಿ ಧಾರಾವಾಹಿ ನೋಡಲ್ಲ’; ವೀಕ್ಷಕರಿಗೆ ಬೇಸರ ತರಿಸಿದ ಆ ಒಂದು ಟ್ವಿಸ್ಟ್​

‘ಕನ್ನಡತಿ’ ಧಾರಾವಾಹಿಯಲ್ಲಿ ಎಲ್ಲರೂ ಕಾದಿದ್ದ ಕ್ಷಣ ಕೊನೆಗೂ ಬಂದಿದೆ. ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ. ಆದರೆ, ಈ ಮದುವೆಯಲ್ಲಿ ವರುಧಿನಿ ಹೈಡ್ರಾಮಾ ಮಾಡಿದ್ದಾಳೆ.

‘ನಾವು ಕನ್ನಡತಿ ಧಾರಾವಾಹಿ ನೋಡಲ್ಲ’; ವೀಕ್ಷಕರಿಗೆ ಬೇಸರ ತರಿಸಿದ ಆ ಒಂದು ಟ್ವಿಸ್ಟ್​
ವರು
Edited By:

Updated on: Jun 24, 2022 | 3:15 PM

ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವಿ (Bhuvi) ಮದುವೆ ನೋಡಲು ವೀಕ್ಷಕರು ಕಾದು ಕೂತಿದ್ದರು. ಆದರೆ, ಧಾರಾವಾಹಿಯಲ್ಲಿ ಕೆಲವು ಟ್ವಿಸ್ಟ್​ಗಳನ್ನು ನೀಡಲು ತಂಡ ಮುಂದಾಗಿತ್ತು. ಇದಕ್ಕೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ‘ನಾವು ಧಾರಾವಾಹಿ ನೋಡುವುದೇ ಇಲ್ಲ’ ಎನ್ನುವ ಕಮೆಂಟ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಫ್ಯಾನ್ಸ್ ಈ ರೀತಿ ಆಕ್ರೋಶ ಹೊರ ಹಾಕೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಕನ್ನಡತಿ’ ಧಾರಾವಾಹಿಯಲ್ಲಿ ಎಲ್ಲರೂ ಕಾದಿದ್ದ ಕ್ಷಣ ಕೊನೆಗೂ ಬಂದಿದೆ. ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ. ಆದರೆ, ಈ ಮದುವೆಯಲ್ಲಿ ವರುಧಿನಿ ಹೈಡ್ರಾಮಾ ಮಾಡಿದ್ದಾಳೆ. ಅವಳು ಕೈ ಕತ್ತರಿಸಿಕೊಂಡಿದ್ದಾಳೆ. ಈ ಮೂಲಕ ಹರ್ಷ ಹಾಗೂ ಭುವಿ ಮದುವೆ ತಡೆಯಲು ಪ್ರಯತ್ನಿಸಿದ್ದಾಳೆ. ವರುಧಿನಿಯನ್ನು ಯಾರು ಬೇಕಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವಕಾಶ ಇತ್ತು. ಆದರೆ, ಭುವಿಯೇ ವರುಧಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಇದು ವೀಕ್ಷಕರ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಕೆಲ ಧಾರಾವಾಹಿಗಳಿಗೆ ಫ್ಯಾನ್ಸ್ ಸಾಕಷ್ಟು ಕನೆಕ್ಟ್ ಆಗಿರುತ್ತಾರೆ. ಹೀಗಾಗಿ, ಧಾರಾವಾಹಿಯಲ್ಲಿ ಏನಾದರೂ ಅನಗತ್ಯ ಟ್ವಿಸ್ಟ್ ಕೊಟ್ಟರೆ ಅಥವಾ ಧಾರಾವಾಹಿ ಬೇರೆಯದೇ ಟ್ರ್ಯಾಕ್​ ಪಡೆದಕೊಂಡರೆ ಅದನ್ನು ಅವರು ಸಹಿಸಿಕೊಳ್ಳುವುದೇ ಇಲ್ಲ. ಈಗ ‘ಕನ್ನಡತಿ’ ಧಾರಾವಾಹಿಯಲ್ಲೂ ಅದೇ ಆಗಿದೆ. ಹರ್ಷ ಹಾಗೂ ಭುವಿ ಮದುವೆಯ ಮಧ್ಯೆ ತರಲಾದ ಹೈಡ್ರಾಮಾ ನೋಡಿ ಫ್ಯಾನ್ಸ್ ಕುಪಿತಗೊಂಡಿದ್ದಾರೆ.

‘ಸಾಕು ನಿಲ್ಲಿಸಿ ಈ ಗೋಳು. ನಮ್ಮ ತಲೆ ಸಿಡಿಯುತ್ತಿದೆ. ಇದನ್ನು ನೋಡಿ ‘ಹವಿ’ ಮದುವೆ ಅಂತ ಬಕ ಪಕ್ಷಿಗಳ ತರಹ ಕಾದಿದ್ದಕ್ಕೆ ಈ ತರ ಟಾರ್ಚರ್​ ಕೊಡುತ್ತಿದ್ದೀರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಕನ್ನಡತಿ ಕುಸಿಯುತ್ತಿರುವುದಕ್ಕೆ ವರು ಆರ್ಭಟ ಕಾರಣ ಅಲ್ಲ. ಹರ್ಷ-ಭುವಿನ ಸೈಡ್​ಲೈನ್​ ಮಾಡಿರೋದೆ ಕಾರಣ. ಎಲ್ಲಿ ಹೋದರು ಮೊದಲಿನ ಹರ್ಷ ಮತ್ತು ಭುವಿ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ.

‘ಇನ್ನು ಐದು ದಿನಗಳಲ್ಲಿ ಹರ್ಷ-ಭುವಿ ಮದುವೆ’ ಎನ್ನುವ ಹೊಸ ಪೋಸ್ಟ್ ಹಾಕಲಾಗಿದೆ. ಇದಕ್ಕೂ ಸಾಕಷ್ಟು ನೆಗೆಟಿವ್ ಕಮೆಂಟ್​ಗಳು ಬಂದಿವೆ. ‘ಹಾಗಿದ್ದರೆ ಇನ್ನು ಐದು ದಿನಗಳ ಕಾಲ ನಾವು ಎಪಿಸೋಡ್ ನೋಡಬೇಕು ಎಂಬುದಿಲ್ಲ. ಐದು ದಿನ ಬಿಟ್ಟು ನಾವು ಕನ್ನಡತಿ ನೋಡುತ್ತೇವೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ

‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

Published On - 3:11 pm, Fri, 24 June 22

Web contact

TV9 Kannada

Read More
Follow Us