Weekend With Ramesh: ಅವಿನಾಶ್ ಸಾಗಿ ಬಂದ ಹಾದಿ, ಕಂಡ ಏರಿಳಿತಗಳ ಭಾವುಕ ನೆನಪು

Weekend With Ramesh: ವೀಕೆಂಡ್ ವಿತ್ ರಮೇಶ್​ನ ಈ ವಾರದ ಅತಿಥಿಯಾಗಿದ್ದ ಅವಿನಾಶ್ ತಮ್ಮ ಜೀವನದ ಅನೇಕ ಸಂಗತಿಗಳನ್ನು ಶನಿವಾರದ ಎಪಿಸೋಡ್​ನಲ್ಲಿ ಮೆಲುಕು ಹಾಕಿದರು. ಅದರ ಮುಖ್ಯಾಂಶಗಳು ಇಲ್ಲಿವೆ. ಅಂದಹಾಗೆ, ಅವಿನಾಶ್​ರ ಮೂಲ ಹೆಸರೇನು ಗೊತ್ತೆ?

Weekend With Ramesh: ಅವಿನಾಶ್ ಸಾಗಿ ಬಂದ ಹಾದಿ, ಕಂಡ ಏರಿಳಿತಗಳ ಭಾವುಕ ನೆನಪು
ಅವಿನಾಶ್
Follow us
ಮಂಜುನಾಥ ಸಿ.
|

Updated on: Apr 23, 2023 | 12:26 AM

ಜನಪ್ರಿಯ ಪೋಷಕ ನಟ ಅವಿನಾಶ್ (Avinash), ನಟನೆ ಆರಂಭಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಈ ಮೂವತ್ತು ವರ್ಷಗಳಲ್ಲಿ ಹಲವು ನಾಯಕ ನಟರು ಆಳಿ-ಅಳಿದು ಹೋಗಿದ್ದಾರೆ ಆದರೆ ಪೋಷಕ ಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವಿನಾಶ್ ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಕೈತುಂಬಾ ಅವಕಾಶಗಳು ಈಗಲೂ ಅವರ ಬಳಿ ಇವೆ. ಇಂಗ್ಲೀಷ್ ಉಪನ್ಯಾಸಕ ಆಗಿದ್ದ, ಕನ್ನಡ ಉಚ್ಛಾರಣೆಯೇ ಬಾರದಿದ್ದ ಅವಿನಾಶ್ ನಟನೆಯ ಕಡೆಗೆ ಹೊರಳಿದ್ದು ಹೇಗೆ? ಅವರು ಸಾಗಿ ಬಂದ ದಾರಿ ಎಂಥಹದ್ದು, ಎಲ್ಲದರ ಮೇಲೂ ವೀಕೆಂಡ್ ವಿತ್ ರಮೇಶ್ (Weekend With Ramesh) ಬೆಳಕು ಚೆಲ್ಲಿತು. ಅವಿನಾಶ್ ಜೀವನದ ಹಲವು ಮಜಲುಗಳನ್ನು ಪ್ರೇಕ್ಷಕರ ಎದುರಿಗಿಟ್ಟಿತು.

ಅವಿನಾಶ್ ಮೂಲ ಹೆಸರು ವೈಎನ್ ರವೀಂದ್ರ, ಜನಿಸಿದ್ದು ಚಾಮರಾಜನಗರದ ಯಳಂದೂರಿನಲ್ಲಿ. ತಂದೆ ವಕೀಲರಾಗಿದ್ದವರು ಜೊತೆಗೆ ರೈತರೂ ಸಹ. ಬಾಲ್ಯದಲ್ಲಿ ಬಹಳ ತುಂಟರಾಗಿದ್ದ ಅವಿನಾಶ್, ಊರಿನ ಮೆಚ್ಚಿನ ಮಗುವೂ ಆಗಿದ್ದರು. ಆದರೆ ಪ್ರಾಥಮಿಕ ಶಿಕ್ಷಣದ ವೇಳೆ ಇಂಗ್ಲೀಷ್ ಸರಿಯಾಗಿ ಬರದೇ ಇದ್ದ ಕಾರಣ ಆ ಭಾಷೆಯ ಮೇಲೆ ಹಿಡಿತ ಸಾಧಿಸಲೇ ಬೇಕು ಎಂದು ಹಠತೊಟ್ಟು ಪದವಿಯಲ್ಲಿ ಹಾಗೂ ಎಂಎಯಲ್ಲಿ ಇಂಗ್ಲೀಷ್ ಅನ್ನೇ ಆರಿಸಿಕೊಂಡು ಇಂಗ್ಲೀಷ್ ಉಪನ್ಯಾಸಕರಾದರು. ಮಾನಸ ಗಂಗೋತ್ರಿಯಲ್ಲಿ ಯುಆರ್ ಅನಂತಮೂರ್ತಿ ಅಂಥಹಾ ಗುರುಗಳ ನೆರಳಲ್ಲಿ ವಿಚಾರಗಳನ್ನು ತಿದ್ದಿಕೊಂಡರು.

ಕಾಲೇಜು ಸಮಯದಲ್ಲಿ ಸಿನಿಮಾ ನೋಡುವುದು, ಕ್ರಿಕೆಟ್ ಆಡುವುದು ಹೊರತಾಗಿ ನಾಟಕದ ಬಗ್ಗೆ ದೊಡ್ಡ ಮಟ್ಟಿಗಿನ ಆಸಕ್ತಿಯೇನೂ ಇರಿಸಿಕೊಂಡಿರದಿದ್ದ ಅವಿನಾಶ್​ ಒಮ್ಮೆ ಬ್ರಿಟನ್​ನಿಂದ ಬಂದ ನಾಟಕ ನಿರ್ದೇಶಕ ಮಾಡುತ್ತಿದ್ದ ವರ್ಕ್​ಶಾಪ್ ಆಡಿಷನ್​ಗೆ ಸುಮ್ಮನೆ ಹೋಗಿ ಆಯ್ಕೆ ಆಗಿಬಿಟ್ಟರು. ಆ ಒಂದು ತಿಂಗಳ ನಾಟಕ ಕಾರ್ಯಾಗಾರ ಅವರನ್ನು ನಾಟಕದತ್ತ ಸೆಳೆದುಬಿಟ್ಟಿತು. ಅದಾದ ಬಳಿಕ ಸ್ಪಂದನಾ ನಾಟಕ ತಂಡ ಸೇರಿಕೊಂಡು ಅಲ್ಲಿ ಹಲವು ನಾಟಕಗಳನ್ನು ಮಾಡಿದರು. ಹಲವು ಅತ್ಯದ್ಭುತ ನಿರ್ದೇಶಕರುಗಳ ನಾಟಕಗಳಲ್ಲಿ ಪಾತ್ರಗಳನ್ನು ಮಾಡಿದರು. ಅದೇ ಸ್ಪಂದನಾನಲ್ಲಿ ಅವಿನಾಶ್​ರ ಜೀವದ ಗೆಳೆಯ ಖ್ಯಾತ ನಟ ಡೈನಮಿಕ್ ಸ್ಟಾರ್ ದೇವರಾಜ್ ಪರಿಚಯವಾಗಿದ್ದು.

ಅದಾದ ಬಳಿಕ ಒಮ್ಮೆ ದೇವರಾಜ್ ಅವರನ್ನು ಒಪ್ಪಿಸಿ ಸಿನಿಮಾದ ಆಡಿಷನ್​ಗೆ ಕರೆದುಕೊಂಡು ಹೋದರು. ಅಲ್ಲಿ ಅವಿನಾಶ್​ಗೆ ನಾಯಕನ ಪಾತ್ರ ಸಿಕ್ಕರೆ ದೇವರಾಜ್​ಗೆ ವಿಲನ್ ಪಾತ್ರ ಸಿಕ್ಕಿತು. ವಿಶೇಷವೆಂದರೆ ಅದೇ ಸಿನಿಮಾಕ್ಕೆ ಆಡಿಷನ್ ನೀಡಿದ್ದ ರಮೇಶ್​ಗೆ ಪಾತ್ರ ಸಿಕ್ಕಿರಲಿಲ್ಲ. ತ್ರಿಶೂಲ ಹೆಸರಿನ ಆ ಸಿನಿಮಾ ಚಿತ್ರೀಕರಣ ಆಯಿತಾದರೂ ಬಿಡುಗಡೆ ಆಗಲಿಲ್ಲ. ಅದಾದ ಬಳಿಕವೂ ನಾಟಕಗಳ ನಟನೆ ನಡೆದೇ ಇತ್ತು. ಶಂಕರ್ ನಾಗ್ ಅವರು ಸಂಕೇತ್​ಗೆ ಕರೆದರು ಪಾತ್ರಗಳನ್ನು ನೀಡಿದರು. ಅರುಂಧತಿ ನಾಗ್, ಅನಂತ್​ನಾಗ್ ಅವರೊಟ್ಟಿಗೆ ರಂಗಭೂಮಿಯಲ್ಲಿ ಅವಿನಾಶ್ ಕೆಲಸ ಮಾಡಿದರು.

ಅವರ ನಟನೆ ಮೆಚ್ಚಿ ಹಲವು ಸಿನಿಮಾ ಅವಕಾಶಗಳು ಒಂದರ ಮೇಲೊಂದರಂತೆ ಸಿಗುತ್ತಲೇ ಹೋದವು. ಹೀಗಿದ್ದಾಗ ಟಿ.ಎನ್.ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರಾವಾಹಿಯಲ್ಲಿ ಪಾತ್ರ ದೊರಕಿತು. ಅದೇ ಧಾರಾವಾಹಿಯಲ್ಲಿ ಮಾಳವಿಕಾ ನಟಿಸುತ್ತಿದ್ದರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇತ್ತು, ಒಮ್ಮೆ ಮಾಳವಿಕಾ ಮನೆಗೆ ಅವಿನಾಶ್ ಹೋಗಿದ್ದಾಗ ಮಾಳವಿಕಾ ತಾಯಿಯವರೇ ರಾಗಿಣಿಯನ್ನು (ಮಾಳವಿಕಾ) ಮದುವೆಯಾಗುತ್ತೀಯಾ? ಎಂದು ಕೇಳಿದರು. ಮಾಳವಿಕಾ ಅವರ ಬಗ್ಗೆ ಪ್ರೀತಿ ಇದ್ದ ಅವಿನಾಶ್ ಅವರ ಕುಟುಂಬದವರನ್ನು ಕೇಳಿ ಮದುವೆಯಾದರು. ಅವರಿಗೆ ಗಾಲವ್ ಹೆಸರಿನ ಮಗು ಜನಿಸಿದ. ಆದರೆ ಆ ಮಗುವಿಗೆ ವುಲ್ಫ್ ಹರ್ಷಾನ್ ಸಿಂಡ್ರೋಮ್ ಎಂಬ ಸಮಸ್ಯೆಯಿಂದ ಆತ ಸಾಮಾನ್ಯನಂತಿಲ್ಲ. ಆ ನೋವಿನ ನಡುವೆಯೇ ಮಗನನ್ನು ಪ್ರೀತಿಯಿಂದ ನೋಡಿಕೊಂಡು ಹೋಗುತ್ತಿದ್ದಾರೆ ಈ ದಂಪತಿ.

ಇನ್ನು ಅವಿನಾಶ್ ಹಾಗೂ ಮಾಳವಿಕಾ ಜೀವನದಲ್ಲಿ ವಿಷ್ಣುವರ್ಧನ್ ಪಾತ್ರ ಮಹತ್ವದ್ದು, ಈ ದಂಪತಿಗಳ ಮೇಲೆ ವಿಷ್ಣುವರ್ಧನ್​ಗೆ ವಿಪರೀಪ ಪ್ರೇಮ. ಮಾಳವಿಕಾ ಅವರ ಕಂಡರೆ ವಿಷ್ಣುವರ್ಧನ್ ಅವರಿಗೆ ವಿಶೇಷ ಮಮತೆ. ಅವರು ಅಗಲಿದ ಬಳಿಕ ಅವರ ಫೋಟೊವನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದಾರೆ ಅವಿನಾಶ್-ಮಾಳವಿಕಾ ದಂಪತಿ. ಇನ್ನು ಸದಾ ಕೆಲಸದಲ್ಲಿ ಬ್ಯುಸಿಯಾಗಿರುವ ಅವಿನಾಶ್, ಕನ್ನಡ, ತೆಲುಗು, ತಮಿಳು, ಮಲಯಾಳಂನ ಐದುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಯಸ್ಸು 63 ಆದರು ಈಗಲೂ ಪ್ರತಿದಿನ ಬಿಡದೇ ಜಿಮ್ ಮಾಡುತ್ತಾರೆ. ಮಿತ ಆಹಾರ, ಯಾರೊಂದಿಗೂ ಭಿನ್ನಾಭಿಪ್ರಾಯಗಳಿಲ್ಲದೆ ಎಲ್ಲರೊಟ್ಟಿಗೂ ಆತ್ಮೀಯತೆ ಉಳಿಸಿಕೊಂಡಿದ್ದಾರೆ. ನಟ ಕಿಶೋರ್ ಸೇರಿದಂತೆ ಹಲವು ತಮಗಿಂತ ಕಿರಿಯ ಪೋಷಕ ನಟರಿಗೆ ವೃತ್ತಿಯಲ್ಲಿ ಸಹಾಯ ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಕನ್ನಡ ಚಿತ್ರರಂಗ ನಾನು ಏನು ಏಣಿಸಿದ್ದೆನೊ ಅದಕ್ಕಿಂತಲೂ ಹೆಚ್ಚಿನದನ್ನೇ ನೀಡಿದೆ. ಮೊಗೆ-ಮೊಗೆದು ನನಗೆ ಅವಕಾಶಗಳನ್ನು ನೀಡಿದೆ ಎಂದು ಸಂತೃಪ್ತಭಾವ ವ್ಯಕ್ತಪಡಿಸಿದ್ದಾರೆ ಅವಿನಾಶ್. ಆದರೆ ಅವರ ಪ್ರತಿಭೆಗೆ ತಕ್ಕಂಥಹಾ ಒಂದು ಪಾತ್ರ ಈ ವರೆಗೆ ಅವರಿಗೆ ಸಿಕ್ಕಿಲ್ಲ ಎಂಬ ಕೊರಗು ಅವರಿಗೆ ಇಂದಿಗೂ ಇದೆಯಂತೆ. ಆ ಕೊರಗು ಎಂದು ನಿವಾರಣೆ ಆಗುತ್ತದೆ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ