ಅದಾಗಲೇ ಮದುವೆಯಾಗಿದ್ದ ಜೈಜಗದೀಶ್​ ಜೀವನಕ್ಕೆ ವಿಜಯಲಕ್ಷ್ಮಿ ಸಿಂಗ್ ಬಂದಿದ್ದು ಹೇಗೆ?

Weekend With Ramesh: ನಟ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಪರಸ್ಪರ ಭೇಟಿಯಾಗಿದ್ದು ಹೇಗೆ? ಅದಾಗಲೇ ಮದುವೆಯಾಗಿದ್ದ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಮದುವೆ ಆಗಿದ್ದು ಹೇಗೆ?

ಅದಾಗಲೇ ಮದುವೆಯಾಗಿದ್ದ ಜೈಜಗದೀಶ್​ ಜೀವನಕ್ಕೆ ವಿಜಯಲಕ್ಷ್ಮಿ ಸಿಂಗ್ ಬಂದಿದ್ದು ಹೇಗೆ?
ಜೈ ಜಗದೀಶ್-ವಿಜಯಲಕ್ಷ್ಮಿ ಸಿಂಗ್
Follow us
ಮಂಜುನಾಥ ಸಿ.
|

Updated on: May 29, 2023 | 10:05 PM

ಜೈ ಜಗದೀಶ್ (Jai Jagadish) ಹಾಗೂ ವಿಜಯಲಕ್ಷ್ಮಿ ಸಿಂಗ್ (Vijalakshmi Singh) ಅವರದ್ದು ಚಂದನವನದ ಹಿರಿಯ ಜೋಡಿ. ದಂಪತಿಗಳಿಬ್ಬರೂ ಸಿನಿಮಾವನ್ನೇ ಉಸಿರಾಡುತ್ತಾ ತಮ್ಮದೇ ಆದ ವಿಧಾನದಲ್ಲಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯೌವ್ವನದಿಂದಲೂ ಸ್ಪುರದ್ರೂಪಿಯಾಗಿದ್ದ, ಬಾಲಿವುಡ್​ ಹೀರೋ ರೀತಿ ಬೈಕ್ ಸ್ಟಂಟ್ ಕಲಿತಿದ್ದ ಗೆಳೆಯರ ಪಡೆ ಹೊಂದಿದ್ದ ಜೈಜಗದೀಶ್​ ಬಾಳಲ್ಲಿ ವಿಜಯಲಕ್ಷ್ಮಿ ಸಿಂಗ್ ಬರುವ ವೇಳೆಗೆ ಅದಾಗಲೇ ಅವರಿಗೆ ವಿವಾಹವಾಗಿತ್ತು. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಅವರದ್ದು ‘ಬಿಟ್ಟು-ಹಿಡಿದ ಪ್ರೇಮಕತೆ’.

ಜೈ ಜಗದೀಶ್ ಮೈಸೂರಿನ ಪುಂಢರಲ್ಲಿ ಒಬ್ಬರಾಗಿದ್ದವರು. ಪಿಯುಸಿ ಕಲಿಯುವ ವೇಳೆಗೆಲ್ಲ ಹುಡುಗಿಯರನ್ನು ಛೇಡಿಸುವುದು, ಬೈಕ್ ಸ್ಟಂಟ್ ಮಾಡುವುದನ್ನು ಕಲಿತಿದ್ದರಂತೆ. ಒಮ್ಮೆ ವಿಜಯಲಕ್ಷ್ಮಿ ಸಿಂಗ್ ಇನ್ನೂ ಏಳನೇ ಕ್ಲಾಸಿನಲ್ಲಿರುವಾಗ ಹಿಂದಿಯ ಗುಡ್ಡಿ ಸಿನಿಮಾಕ್ಕೆ ಹೋಗಿದ್ದರಂತೆ. ಆಗ ಜೈಜಗದೀಶ್ ವಿಜಯಲಕ್ಷ್ಮಿ ಸಿಂಗ್ ಹಾಗೂ ಅವರ ಗೆಳತಿಗೆ ಪಾಪ್​ಕಾರ್ನ್ ಕೊಡಿಸಿ ಸಿನಿಮಾ ಮುಗಿದ ಮೇಲೆ ಅವರನ್ನು ಮನೆಯ ವರೆಗೆ ಫಾಲೋ ಮಾಡಿದ್ದರಂತೆ. ಆದರೆ ವಿಜಯಲಕ್ಷ್ಮಿ ಸಿಂಗ್, ಸಂಗ್ರಾಮ್ ಸಿಂಗ್ ತಂಗಿ ಎಂದು ಗೊತ್ತಾದ ಬಳಿಕ ವಿಜಯಲಕ್ಷ್ಮಿಯ ತಂಟೆಗೆ ಹೋಗಲಿಲ್ಲವಂತೆ.

ಅದಾದ ಬಳಿಕ ಜೈ ಜಗದೀಶ್​ಗೆ ಮೊದಲ ಸಿನಿಮಾ ಅವಕಾಶ ಬಂದಾಗ ವಿಜಯಲಕ್ಷ್ಮಿ ಸಿಂಗ್ ಅವರ ಮನೆಗೆ ಬಂದು ಹಿರಿಯರ ಆಶೀರ್ವಾದ ಪಡೆದು ಹೋಗಿದ್ದರಂತೆ. ಅದಾದ ಬಳಿಕ ಒಮ್ಮೆ ಅಂಬರೀಶ್, ವಿಜಯಲಕ್ಷ್ಮಿಯವರ ಮನೆಗೆ ಬಂದು ಜೈಜಗದೀಶ್​ಗೆ ರೂಪ ಎಂಬುವರೊಟ್ಟಿಗೆ ಮದುವೆ ಆಯಿತು ಎಂದರಂತೆ. ಆಗಲೂ ವಿಜಯಲಕ್ಷ್ಮಿಗೆ ವಿಶೇಷವಾಗಿ ಏನೂ ಅನ್ನಿಸಿರಲಿಲ್ಲವಂತೆ. ಅದಾದ ಬಳಿಕ ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈ ಜಗದೀಶ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗೆಲ್ಲ ಜೈಜಗದೀಶ್ ರೂಂನಲ್ಲಯೇ ಉಳಿಯುತ್ತಿದ್ದರಂತೆ. ಮನೆಯಿದ್ದರೂ ಏಕೆ ರೂಂನಲ್ಲೇ ಉಳಿಯುತ್ತಾರೆ ಎಂದೆಲ್ಲ ಅನುಮಾನಗಳು ಕಾಡಿದ್ದವಂತೆ.

ಇದನ್ನೂ ಓದಿ:ಪುಟ್ಟಣ್ಣ ಕಣಗಾಲ್ ಸಹವಾಸವೇ ಬೇಡೆಂದು ಶೂಟಿಂಗ್ ಬಿಟ್ಟು ಓಡಿಬಂದಿದ್ದ ಜೈ ಜಗದೀಶ್ ಅನ್ನು ತಡೆದಿದ್ದು ಯಾರು?

ಅದಾದ ಬಳಿಕ ಅವರ ಸಂಸಾರದಲ್ಲಿ ಸಮಸ್ಯೆ ಆಗಿದೆ ಎಂಬುದು ಗೊತ್ತಾಗಿದೆ. ಬಂಧನ ಸಿನಿಮಾದ ವೇಳೆಗೆ ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈಜಗದೀಶ್ ಪರಸ್ಪರ ಹತ್ತಿರವಾಗಿದ್ದಾರೆ. ಆ ಬಳಿಕ ಇಬ್ಬರೂ ಮದುವೆ ಆಗಲು ನಿಶ್ಚಯಿಸಿದ್ದಾರೆ. ಆದರೆ ಇಬ್ಬರೂ ಮದುವೆ ಆಗಲು ಎಂಟು ವರ್ಷ ಹಿಡಿಯಿತಂತೆ. ಹಳೆಯ ಮದುವೆಯಿಂದ ಜೈಜಗದೀಶ್ ಬಿಡುಗಡೆ ಪಡೆಯಲು ಎಂಟು ವರ್ಷ ಹಿಡಿಯಿತಂತೆ. ಅದಾಗಲೇ ಜೈ ಜಗದೀಶ್​ಗೆ ಮಗಳೊಬ್ಬಳು ಸಹ ಇದ್ದರಂತೆ. ಆದರೆ ಅವರು ವಿಜಯಲಕ್ಷ್ಮಿ ಸಿಂಗ್ ಜೊತೆಗೆ ಚೆನ್ನಾಗಿದ್ದರಂತೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಮೂವರು ಸಹ ಯಾನ ಹೆಸರಿನ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನ ಮಾಡಿದ್ದಾರೆ.

ಇನ್ನು ಜೈ ಜಗದೀಶ್ ಈ ವರೆಗೆ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 47 ವರ್ಷಗಳ ಕಲಾಸೇವೆ ಅವರದ್ದು. ಈಗಲೂ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ