ಈ ವಾರ ಬಿಗ್​ ಬಾಸ್​ನಿಂದ ಔಟ್​ ಆಗೋದು ಇವರೇ? ಹೊರಹೋಗಲಿದೆ ದೊಡ್ಡ ತಲೆ

| Updated By: ಮದನ್​ ಕುಮಾರ್​

Updated on: Dec 01, 2023 | 6:56 PM

ಬಿಗ್ ಬಾಸ್​ನಲ್ಲಿ ಎಂಟನೇ ವಾರದ ಎಲಿಮಿನೇಷನ್ ನಡೆಯಲಿದೆ. ಎಂಟು ಮಂದಿ ನಾಮಿನೇಟ್ ಆಗಿದ್ದು, ಈ ಪೈಕಿ ಒಬ್ಬರು ದೊಡ್ಮನೆಯಿಂದ ಔಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಯಾರು ಎನ್ನುವ ಕುತೂಹಲ ಮೂಡಿದೆ.

ಈ ವಾರ ಬಿಗ್​ ಬಾಸ್​ನಿಂದ ಔಟ್​ ಆಗೋದು ಇವರೇ? ಹೊರಹೋಗಲಿದೆ ದೊಡ್ಡ ತಲೆ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಎಂಟನೇ ವಾರದ ಎಲಿಮಿನೇಷನ್ ಈ ವಾರ ನಡೆಯಲಿದೆ. ಈ ಬಾರಿ ಪ್ರಮುಖರೇ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಈ ವಾರ ಔಟ್ ಆಗೋದು ದೊಡ್ಡ ತಲೆ ಎಂದು ಹೇಳಲಾಗುತ್ತಿದೆ. ಅದು ಯಾರು ಎನ್ನುವ ಕುತೂಹಲ ಮೂಡಿದೆ. ಬಿಗ್ ಬಾಸ್ ಈ ವಾರ ಟ್ವಿಸ್ಟ್ ಕೊಟ್ಟರೂ ಅಚ್ಚರಿ ಏನಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ. ವೀಕೆಂಡ್ ಎಪಿಸೋಡ್​ಗೆ ಫ್ಯಾನ್ಸ್ ಕಾದಿದ್ದಾರೆ. ಸದ್ಯ ಬಿಗ್ ಬಾಸ್ (Bigg Boss Kannada)​ ಮನೆಯಲ್ಲಿ 13 ಸ್ಪರ್ಧಿಗಳಿದ್ದಾರೆ. ಈ ಪೈಕಿ ಇಬ್ಬರು ವೈಲ್ಡ್ ಕಾರ್ಡ್​ಗಳು. 13 ಮಂದಿಯಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ, ನಮ್ರತಾ ಗೌಡ (Namratha Gowda), ಮೈಕಲ್ ಅಜಯ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಹೊರಹೋಗಲೇಬೇಕಿದೆ.

ಮೈಕಲ್ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್​ ನೀಡುತ್ತಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹೆಚ್ಚುತ್ತಿದೆ. ಸುದೀಪ್ ಅವರಿಂದ ಕಳೆದ ವಾರ ಅವರಿಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕಿದೆ. ಹೀಗಾಗಿ, ಅವರು ಹೆಚ್ಚು ವೋಟ್ ಪಡೆದು ಸೇವ್ ಆಗುತ್ತಾರೆ. ಡ್ರೋನ್ ಪ್ರತಾಪ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ವಾರ ಅವರ ಆಟ ಕಳಪೆ ಆಗಿದೆ. ಆದಾಗ್ಯೂ ಅವರಿಗೆ ಬೀಳೋ ವೋಟ್ ಕಡಿಮೆ ಆಗುವುದಿಲ್ಲ ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಹಲವು ಮೊದಲುಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಕನ್ನಡ ಸೀಸನ್ 10’; ಇಲ್ಲಿದೆ ವಿವರ

ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್ ಅವರು ಹೆಚ್ಚಿನ ವೋಟ್ ಪಡೆದು ಈ ವಾರ ಸೇವ್​ ಆಗಬಹುದು. ತನಿಷಾ ಗಾಯಗೊಂಡಿದ್ದರಿಂದ ಈ ವಾರ ಅವರು ಸೇವ್ ಆಗಿಲ್ಲ. ಆದಾಗ್ಯೂ ಅವರಿಗೆ ಬೀಳೋ ವೋಟ್ ಕಡಿಮೆ ಆಗುವುದು ಅನುಮಾನ. ಅವರು ಸೇವ್ ಆಗೋದು ಬಹುತೇಕ ಖಚಿತ. ನಮ್ರತಾ ಹಾಗೂ ಸ್ನೇಹಿತ್ ಪೈಕಿ ಈ ವಾರ ಒಬ್ಬರು ಔಟ್ ಆಗಬಹುದು ಎಂಬುದು ವೀಕ್ಷಕರ ಊಹೆ. ಈಗಾಗಲೇ ಸ್ನೇಹಿತ್​ ಈ ವಿಚಾರವನ್ನು ಹಲವು ಬಾರಿ ಹೇಳಿದ್ದಾರೆ. ‘ಬಿಗ್ ಬಾಸ್​ ಮನೆಯಿಂದ ನಾನೇ ಈ ವಾರ ಔಟ್ ಆಗಬಹುದು’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಪಾತ್ರದಲ್ಲಿ ಬಿಗ್​ ಬಾಸ್​ ಖ್ಯಾತಿಯ ರೂಪೇಶ್​ ಶೆಟ್ಟಿ; ‘ಅಧಿಪತ್ರ’ ಸಿನಿಮಾಗೆ ಬಿರುಸಿನ ಶೂಟಿಂಗ್​

ಈ ವಾರ ಬಿಗ್ ಬಾಸ್​ ಎಲಿಮಿನೇಷನ್​ಗೆ ಟ್ವಿಸ್ಟ್ ಕೊಟ್ಟರೂ ಅಚ್ಚರಿ ಏನಿಲ್ಲ. ಈ ಸೀಸನ್​ನಲ್ಲಿ ಯಾರನ್ನೂ ಸೀಕ್ರೆಟ್ ರೂಂನಲ್ಲಿ ಇಟ್ಟಿಲ್ಲ. ಈ ವಾರ ಆ ಸ್ಟೆಪ್​ನ ಬಿಗ್ ಬಾಸ್ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ವೀಕೆಂಡ್ ಎಪಿಸೋಡ್​ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಲೈವ್ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.