AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಜೀ ತೆಲುಗು ‘ಸರಿಗಮಪ’ ಆಡಿಷನ್; ಯುವ ಗಾಯಕರಿಗೆ ಸುವರ್ಣಾವಕಾಶ

ಜೀ ತೆಲುಗು ವಾಹಿನಿಯ 'ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್' ಬೆಂಗಳೂರಿನಲ್ಲಿ ಆಡಿಷನ್‌ಗಳನ್ನು ನಡೆಸುತ್ತಿದೆ. ಜೂನ್ 28ರಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುವ ಈ ಆಡಿಷನ್‌ಗೆ 18 ರಿಂದ 35 ವರ್ಷದೊಳಗಿನ ಪ್ರತಿಭಾವಂತ ಗಾಯಕರಿಗೆ ಅವಕಾಶವಿದೆ. ಸಂಗೀತಕ್ಕೆ ಭಾಷೆಯ ಮಿತಿಯಿಲ್ಲ ಎಂಬುದನ್ನು ಸಾರುವ ಈ ವೇದಿಕೆ, ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಿದೆ.

ಬೆಂಗಳೂರಿನಲ್ಲಿ ಜೀ ತೆಲುಗು 'ಸರಿಗಮಪ' ಆಡಿಷನ್; ಯುವ ಗಾಯಕರಿಗೆ ಸುವರ್ಣಾವಕಾಶ
ಸರಿಗಮಪ
ರಾಜೇಶ್ ದುಗ್ಗುಮನೆ
|

Updated on: Jun 26, 2026 | 2:42 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ ಸರಿಗಮಪ ತೆಲುಗು ಆಡಿಷನ್
  • ಸರಿಗಮಪ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಇದೆ ವಯಸ್ಸಿನ ಮಿತಿ
  • ಜೀ ತೆಲುಗು ಸರಿಗಮಪ ನೀಡುವ ಸುವರ್ಣಾವಕಾಶ ಪಡೆಯಲು ಹೀಗೆ ಮಾಡಿ

ಸಂಗೀತಕ್ಕೆ ಭಾಷೆಯ ಮಿತಿ ಇಲ್ಲ. ಪರಭಾಷೆಯ ಅನೇಕ ಗಾಯಕರು ಕನ್ನಡ ಹಾಡನ್ನು ಹಾಡಿದ್ದು ಇದೆ. ಅದೇ ರೀತಿ ಅನೇಕ ಕನ್ನಡದ ಕಲಾವಿದರು ಪರಭಾಷೆಯಲ್ಲಿ ಮಿಂಚಿದ್ದಾರೆ. ಈಗ ಜೀ ತೆಲುಗು ವಾಹಿನಿಯವರು ಪ್ರತಿಭೆಗಳನ್ನು ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. ‘ಸರಿಗಮಪ’ ತೆಲುಗು ಆಡಿಷನ್ಸ್ ಬೆಂಗಳೂರಿನಲ್ಲ ನಡೆಯಲಿದೆ. ಈ ಬಾರಿ ‘ಸರಿಗಮ ಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು, ದೇಶದ ವಿವಿಧೆಡೆ ಆಡಿಷನ್‌ಗಳು ಆರಂಭವಾಗಿವೆ. ತೆಲುಗು ರಾಜ್ಯಗಳ ಜೊತೆಗೆ ದೇಶದ ಇತರೆ ಭಾಗಗಳಲ್ಲಿರುವ ಪ್ರತಿಭಾವಂತ ಗಾಯಕರನ್ನು ಗುರುತಿಸಲು ಈ ವೇದಿಕೆ ಸಹಕಾರಿ ಆಗಲಿದೆ.

ಬೆಂಗಳೂರಿನಲ್ಲಿಯೂ ಆನ್-ಗ್ರೌಂಡ್ ಆಡಿಷನ್ ಹಮ್ಮಿಕೊಳ್ಳಲಾಗಿದೆ. ಜೂನ್ 28ರ ಭಾನುವಾರದಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ (ಮಧು ಆರ್ಟ್ ಸ್ಟುಡಿಯೋ) ಆಡಿಷನ್ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಡಿಷನ್ ನಡೆಯಲಿದೆ. ಈ ಆಡಿಷನ್​​ ಅಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಷರತ್ತುಗಳು ಕೂಡ ಇವೆ.

ಈ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಇದೆ. 18 ರಿಂದ 35 ವರ್ಷದೊಳಗಿನವರು ಮಾತ್ರ ಇದರಲ್ಲಿ ಭಾಗಿ ಆಗಬಹುದು. ಸಂಗೀತ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಆಸಕ್ತ ಗಾಯಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆಡಿಷನ್ ಸ್ಥಳಕ್ಕೆ ತಲುಪಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವೀಕ್ಷಕರು ಜೀ ತೆಲುಗು ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಗಮನಿಸಬಹುದು.

ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?

ಬೆಂಗಳೂರಿನಲ್ಲಿ ತೆಲುಗು ಭಾಷಿಕರು ಕೂಡ ಇದ್ದಾರೆ. ಅನೇಕರಿಗೆ ತೆಲುಗು ಹಾಗೂ ಕನ್ನಡ ಎರಡನ್ನೂ ಮಾತನಾಡುವವರು ಇದ್ದಾರೆ. ಕೆಲವರು ಕನ್ನಡ ಸರಿಗಮಪ ಶೋ ಆಡಿಷನ್ ಕೊಟ್ಟು ಅವಕಾಶ ಪಡೆದುಕೊಳ್ಳಲು ವಿಫಲರಾಗಿರಬಹುದು. ಅಂಥವರಿಗೆ ‘ಸರಿಗಮಪ ತೆಲುಗು’ ವೇದಿಕೆ ಒಳ್ಳೆಯ ವೇದಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ