
ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು (Cinema) ಎಂದಾಗ ಪ್ರತಿ ಚಿತ್ರದ ದೃಶ್ಯ, ಹಾಡು, ಫೈಟ್ಗಳು ಅದ್ಭುತವಾಗಿ ಮೂಡಿ ಬರುವಂತೆ ನೋಡಿಕೊಳ್ಳುತ್ತಾರೆ. ಈಗ ‘ನಾಗಬಂಧಂ’ ಹೆಸರಿನ ಚಿತ್ರವು ತೆಲುಗಿನಲ್ಲಿ ಸಿದ್ಧವಾಗುತ್ತಿದೆ. ಅಭಿಷೇಕ್ ನಮ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಗಪತಿ ಬಾಬು, ಬಿಎಸ್ ಅವಿನಾಶ್, ವಿರಾಟ್ ಕರ್ಣ, ಮುರಳಿ ಶರ್ಮ, ಐಶ್ವರ್ಯಾ ಮೆನನ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿನ ಬಗ್ಗೆ ಚರ್ಚೆ ಶುರುವಾಗಿದೆ. ಇದರ ಬಜೆಟ್ ಅಚ್ಚರಿ ಮೂಡಿಸಿದೆ.
‘ನಾಗಬಂಧಮ್’ ಚಿತ್ರವನ್ನು ಕಿಶೋರ್ ಹಾಗೂ ವಿರಾಟ್ ಕರ್ಣ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವು ಪೋಸ್ಟ್ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಒಂದು ಭರ್ಜರಿ ಸಾಂಗ್ನ ಇಡಲು ತಂಡದವರು ಆಲೋಚಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದಕ್ಕೆ ಕಾರಣ ಹಾಡಿನ ಅದ್ದೂರಿತನ.
ಅನಂತ ಪದ್ಮನಾಭ ಸ್ವಾಮಿ ದೇವಾಲಯವನ್ನು ಸೆಟ್ ಮೂಲಕ ರೀ-ಕ್ರಿಯೇಟ್ ಮಾಡಲಾಗಿದೆ. ಇದು ನೋಡೋಕೆ ಥೇಟ್ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ರೀತಿಯೇ ಕಾಣುತ್ತಿದೆ. ಗಣೇಶ್ ಆಚಾರ್ಯ ಅವರು ಹಾಡಿನ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಮೊದಲು ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಹಾಡಿಗಳನ್ನು ಕೊರಿಯೋಗ್ರಫಿ ಮಾಡಿದ್ದರು. ವಿರಾಟ್ ಕರ್ಣ ಹಾಗೂ ಇತರ 5000 ಡ್ಯಾನ್ಸರ್ಗಳ ಜೊತೆ ಸಾಂಗ್ನ ಶೂಟ್ ಮಾಡಲಾಗುತ್ತಿದೆ. ಈ ಹಾಡಿನ ಜೊತೆ 10 ನಿಮಿಷಗಳ ದೃಶ್ಯ ಇರಲಿದೆ. ಇದಕ್ಕಾಗಿ ನಿರ್ಮಾಪಕರು 10 ಕೋಟಿ ರೂಪಾಯಿ ಸುರಿಯಲು ರೆಡಿ ಆಗಿದ್ದಾರಂತೆ.
ಇದನ್ನೂ ಓದಿ:ಯುವರಾಜ್ ಕುಮಾರ್ ‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್
ಸಾಮಾನ್ಯವಾಗಿ ಈ ರೀತಿಯ ಅದ್ದೂರಿ ಹಾಡುಗಳನ್ನು ಮಾಡುವಾಗ ದೊಡ್ಡ ಬಜೆಟ್ ಹಾಕಲು ನಿರ್ಮಾಪಕರು ಒಪ್ಪೋದಿಲ್ಲ. ಹಾಡಿಗೆ ಇಷ್ಟು ಹಣ ಖರ್ಚಾದರೆ ಮುಂದೇನು ಎನ್ನುವ ಪ್ರಶ್ನೆಯನ್ನು ಮಾಡುತ್ತಾರೆ. ಆದರೆ, ‘ನಾಗಬಂಧಮ್’ ಚಿತ್ರದ ನಿರ್ಮಾಪಕರು ಇದಕ್ಕೆ ಹಿಂಜರಿಕೆ ತೋರಿಸದೇ ಗಟ್ಟಿ ನಿರ್ಧಾರ ಮಾಡಿದ್ದಾರೆ.
ಭಾರತದ ಪ್ರಾಚೀನ ವಿಷ್ಣು ದೇವಾಲಯಗಳ ಅನ್ವೇಷಣೆ, ನಾಗಬಂಧದ ನಿಗೂಢ ಆಚರಣೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರವು ಗುಪ್ತ ರಹಸ್ಯಗಳು ಮತ್ತು ಪವಿತ್ರ ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ