ಟಾಲಿವುಡ್​ಗೆ ಡಬ್ಬಿಂಗ್​ ಭಯ; ತೆಲಂಗಾಣ, ಆಂಧ್ರದಲ್ಲಿ ಸಂಕ್ರಾಂತಿ ವೇಳೆ ಬೇರೆ ಭಾಷೆಯ ಚಿತ್ರಗಳಿಗೆ ಸಂಕಷ್ಟ

Tollywood News | Dubbing Movies: ಆಂಧ್ರ ಮತ್ತು ತೆಲಂಗಾಣದಲ್ಲಿ ಹಬ್ಬಗಳ ಸಂದರ್ಭದಲ್ಲಿ ಡಬ್ಬಿಂಗ್​ ಸಿನಿಮಾಗಳ ಬಿಡುಗಡೆಗೆ ಆದ್ಯತೆ​ ನೀಡಬಾರದು ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಿಸಿದೆ. ಈ ನಿರ್ಧಾರ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಟಾಲಿವುಡ್​ಗೆ ಡಬ್ಬಿಂಗ್​ ಭಯ; ತೆಲಂಗಾಣ, ಆಂಧ್ರದಲ್ಲಿ ಸಂಕ್ರಾಂತಿ ವೇಳೆ ಬೇರೆ ಭಾಷೆಯ ಚಿತ್ರಗಳಿಗೆ ಸಂಕಷ್ಟ
ಅಜಿತ್​, ವಿಜಯ್​
Follow us
TV9 Web
| Updated By: ಮದನ್​ ಕುಮಾರ್​

Updated on:Nov 13, 2022 | 9:43 PM

ಪ್ಯಾನ್​ ಇಂಡಿಯಾ ಸಿನಿಮಾಗಳಿಂದಾಗಿ (Pan India Movies) ಬೇರೆ ಬೇರೆ ಭಾಷೆಯ ಚಿತ್ರರಂಗದ ನಡುವೆ ಉತ್ತಮ ಒಡನಾಡ ಶುರುವಾಗಿದೆ. ಆದರೆ 2023ರ ಆರಂಭದಲ್ಲಿ ಬೇರೆ ಬೇರೆ ಚಿತ್ರರಂಗಗಳ ನಡುವೆ ಬಿರುಕು ಮೂಡುವ ಸಾಧ್ಯತೆ ಗೋಚರಿಸುತ್ತಿದೆ. ಡಬ್ಬಿಂಗ್​ ಸಿನಿಮಾಗಳ ವಿಷಯದಲ್ಲಿ ಟಾಲಿವುಡ್​ (Tollywood) ನಿರ್ಮಾಪಕರು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. 2023ರ ಸಂಕ್ರಾಂತಿಯಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ಚಿತ್ರಗಳನ್ನು ಹೊರತು ಪಡಿಸಿ ಬೇರೆ ಭಾಷೆಯ ಡಬ್ಬಿಂಗ್​ ಸಿನಿಮಾಗಳಿಗೆ ಚಿತ್ರಮಂದಿರ ನೀಡಬಾರದು ಎಂದು ತೆಲುಗು ನಿರ್ಮಾಪಕರ ಸಂಘವು (Telugu Film Producers Council) ಎಲ್ಲ ವಿತರಕರಿಗೆ ಮತ್ತು ಪ್ರದರ್ಶಕರಿಗೆ ಸೂಚನೆ ನೀಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಡಬ್ಬಿಂಗ್​ ಸಿನಿಮಾಗಳು ಎಲ್ಲ ರಾಜ್ಯಗಳಲ್ಲಿ ರಾರಾಜಿಸುತ್ತಿವೆ. ಕನ್ನಡದ ‘ಕಾಂತಾರ’ ಸಿನಿಮಾ ತೆಲುಗಿಗೆ ಡಬ್​ ಆಗಿ ಧೂಳೆಬ್ಬಿಸಿದೆ. ಹಲವು ತೆಲುಗು ಚಿತ್ರಗಳಿಗೆ ಗಲ್ಲಾಪೆಟ್ಟಿಗೆಯಲ್ಲಿ ರಿಷಬ್​ ಶೆಟ್ಟಿಯ ಈ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಈಗ ತಮಿಳಿನ ‘ವಾರಿಸು’ ಸಿನಿಮಾ ಕೂಡ ತೆಲುಗಿಗೆ ಡಬ್​ ಆಗಿ ತೆರೆಕಾಣಲು ಸಜ್ಜಾಗಿದೆ. ಆದರೆ ಸಂಕ್ರಾಂತಿ ಸಂದರ್ಭದಲ್ಲಿ ಡಬ್ಬಿಂಗ್​ ಸಿನಿಮಾಗಳ ಬಿಡುಗಡೆಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಆದತ್ಯೆ​ ನೀಡಬಾರದು ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಿಸಿದೆ.

ತೆಲುಗಿನ ಖ್ಯಾತ ನಿರ್ಮಾಪಕ ದಿಲ್​ ರಾಜು ಅವರು ತಮಿಳಿನ ‘ವಾರಿಸು’ ಚಿತ್ರದ ತೆಲುಗು ವರ್ಷನ್​ ಅನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ಕೆಲವೇ ವರ್ಷಗಳ ಹಿಂದೆ ಇದೇ ದಿಲ್​ ರಾಜು ಅವರು ಡಬ್ಬಿಂಗ್​ ಚಿತ್ರಗಳ ವಿರುದ್ಧ ಮಾತನಾಡಿದ್ದರು. ಅಂದಿನ ಅವರ ಹೇಳಿಕೆಯನ್ನು ಈಗ ಮತ್ತೆ ನೆನಪಿಸುವ ಕಾರ್ಯ ಆಗುತ್ತಿದೆ. ಒಟ್ಟಾರೆಯಾಗಿ ಈ ವಿಚಾರ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ
Image
ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಸೋತಿದ್ದು ಯಾಕೆ? ಎಲ್ಲವನ್ನೂ ವಿವರಿಸಿದ ಮನೋಜ್​ ಬಾಜ್​ಪಾಯಿ
Image
ಡಬ್ಬಿಂಗ್​ ಚಿತ್ರದ ಕನ್ನಡ ವರ್ಷನ್​ಗೆ ಹೆಚ್ಚು ಥಿಯೇಟರ್​ ಸಿಗಲ್ಲ ಯಾಕೆ? ಪ್ರಾಕ್ಟಿಕಲ್​ ಕಾರಣ ತಿಳಿಸಿದ ‘83’ ವಿತರಕ ಜಾಕ್​​ ಮಂಜು

ಒಂದು ವೇಳೆ ಸಂಕ್ರಾಂತಿ, ದಸರಾ ಮುಂತಾದ ಹಬ್ಬದ ಸಂದರ್ಭದಲ್ಲಿ ಆಂಧ್ರ ಮತ್ತು ತೆಲಂಗಾಣದ ಥಿಯೇಟರ್​ಗಳಲ್ಲಿ ತೆಲುಗು ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಅಲ್ಲಿನ ನಿರ್ಮಾಪಕರು ಕಠಿಣ ತೀರ್ಮಾನ ತೆಗೆದುಕೊಂಡರೆ ಬೇರೆ ಭಾಷೆಯ ಚಿತ್ರಗಳಿಗೆ ತೊಂದರೆ ಆಗಲಿದೆ. ಅದೇ ರೀತಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದಲ್ಲೂ ಇಂಥ ಪರಿಸ್ಥಿತಿ ನಿರ್ಮಾಣವಾದರೆ ಪ್ಯಾನ್​ ಇಂಡಿಯಾ​ ಚಿತ್ರಗಳ ಮಾರುಕಟ್ಟೆಗೆ ದೊಡ್ಡ ಪೆಟ್ಟು ಬೀಳುವುದು ಖಚಿತ.

ಡಬ್ಬಿಂಗ್​ ಸಿನಿಮಾಗಳಿಗೆ ತೆಲುಗು ಮಂದಿ ಕಡಿವಾಣ ಹಾಕುವುದು ನಿಜವೇ ಹೌದಾದರೆ ಕರ್ನಾಟಕದಲ್ಲೂ ತೆಲುಗು ಸಿನಿಮಾಗಳ ರಿಲೀಸ್​ಗೆ ಅವಕಾಶ ನೀಡಬಾರದು ಎಂದು ಸೋಶಿಯಲ್​ ಮೀಡಿಯಾದಲ್ಲಿ ಕನ್ನಡದ ಪ್ರೇಕ್ಷಕರಿಂದ ಒತ್ತಾಯ ಕೇಳಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:19 pm, Sun, 13 November 22