ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗುತ್ತದೆ. ದಕ್ಷಿಣ ಭಾರತದವರಿಗೆ ಈ ಹಬ್ಬ ವಿಶೇಷ ಆಗಿರುವುದರಿಂದ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವರ್ಷವೂ ಅದು ಮುಂದುವರಿದಿದೆ. ಕಾಲಿವುಡ್ನಲ್ಲಿ ದಳಪತಿ ವಿಜಯ್ ನಟನೆಯ ‘ವಾರಿಸು’ (Varisu) ಹಾಗೂ ಅಜಿತ್ ಕುಮಾರ್ ಅಭಿನಯದ ‘ತುನಿವು’ (Thunivu) ಜನವರಿ 11ರಂದು ರಿಲೀಸ್ ಆದವು. ಈ ಚಿತ್ರಗಳ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಸಿಕ್ಕಿದೆ. ಗಳಿಕೆ ವಿಚಾರದಲ್ಲಿ ಅಜಿತ್ ಸಿನಿಮಾಗಿಂತ ವಿಜಯ್ ಸಿನಿಮಾ 50 ಲಕ್ಷ ರೂಪಾಯಿ ಮುಂದಿದೆ.
ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಮೊದಲಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೆ. ಈಗ ಎರಡೂ ಹೀರೋಗಳ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿರುವುದರಿಂದ ಸಹಜವಾಗಿಯೇ ಸಾಕಷ್ಟು ಸ್ಪರ್ಧೆ ಇತ್ತು. ನೆಚ್ಚಿನ ಹೀರೋನ ಸಿನಿಮಾ ಗೆಲ್ಲಿಸಲು ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ಪ್ರಯತ್ನಿಸಿದ್ದಾರೆ. ಮೊದಲ ದಿನದ ಗಳಿಕೆಯಲ್ಲಿ ದಳಪತಿ ವಿಜಯ್ ಮೇಲುಗೈ ಸಾಧಿಸಿದ್ದಾರೆ.
‘ತುನಿವು’ ಸಿನಿಮಾ ಭಾರತದಲ್ಲಿ 26 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ವಾರಿಸು’ ಸಿನಿಮಾ 26.50 ಕೋಟಿ ರೂ. ಬಾಚಿಕೊಂಡಿದೆ. ತಮಿಳುನಾಡು ಬಾಕ್ಸ್ ಆಫೀಸ್ನಲ್ಲಿ ‘ತುನಿವು’ ಮೇಲುಗೈ ಸಾಧಿಸಿದೆ. ಈ ಚಿತ್ರ ತಮಿಳುನಾಡಿನಲ್ಲಿ 18 ಕೋಟಿ ರೂಪಾಯಿ ಗಳಿಕೆ ಮಾಡಿದರೆ, ‘ವಾರಿಸು’17 ಕೋಟಿ ರೂಪಾಯಿಗೆ ಮೊದಲ ದಿನದ ಆಟ ಮುಗಿಸಿದೆ.
ವಿಜಯ್ ಹಾಗೂ ಅಜಿತ್ ಕುಮಾರ್ ಸಿನಿಮಾಗಳು ಒಂದೇ ರೀತಿಯ ವಿಮರ್ಶೆ ಪಡೆದಿವೆ. ಬಾಕ್ಸ್ ಆಫೀಸ್ನಲ್ಲೂ ಸಮಬಲದ ಕಾದಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಪ್ರಿಯರು ಯಾವ ಚಿತ್ರವನ್ನು ಗೆಲ್ಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Varisu Movie Review: ಇವ ಎಂಟರ್ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ
ಹಬ್ಬದ ಸಮಯವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ಗೆ ತೆರಳುತ್ತಾರೆ. ಹೀಗಾಗಿ, ಭಾನುವಾರದವರೆಗೆ (ಜನವರಿ 15) ಎರಡೂ ಸಿನಿಮಾಗಳು ಅಬ್ಬರದ ಕಲೆಕ್ಷನ್ ಮಾಡಬಹುದು. ಅಂತಿಮವಾಗಿ ಯಾವ ಸಿನಿಮಾಗೆ ಹೆಚ್ಚು ಪ್ರೇಕ್ಷಕರು ತೆರಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 12 January 23