Khushbu Sundar: ‘ದಿ ಕೇರಳ ಸ್ಟೋರಿ’ ವಿಚಾರದಲ್ಲಿ ಭಿನ್ನ ನಿಲುವು ತಾಳಿದ ನಟಿ ಖುಷ್ಬೂ ಸುಂದರ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಒಟ್ಟಾರೆ 252 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ‘ದಿ ಕೇರಳ ಸ್ಟೋರಿ’ ವಿಚಾರದಲ್ಲಿ ಇತಿಹಾಸ ಮರುಕಳಿಸುವ ಸೂಚನೆ ಸಿಕ್ಕಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾದ (The Kerala Story) ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿದೆ. ಈ ಸಿನಿಮಾ ಪರವಾಗಿ ಕೆಲವರು ಮಾತನಾಡಿದರೆ, ಇನ್ನೂ ಕೆಲವರು ಸಿನಿಮಾ ವಿರೋಧಿಸಿದ್ದಾರೆ. ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಈ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರು ‘ದಿ ಕೇರಳ ಸ್ಟೋರಿ’ ಚಿತ್ರವನ್ನು ವೀಕ್ಷಿಸಿದ್ದಾರೆ. ಜೊತೆಗೆ ಇದು ನೋಡಲೇಬೇಕಾದ ಸಿನಿಮಾ ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಸಮ್ಮತಿ ಸೂಚಿಸಿದ್ದಾರೆ.
‘ದಿ ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಲು ಹೋರಾಡುತ್ತಿರುವವರಿಗೆ ಏನು ತಪ್ಪು ಕಾಣಿಸಿತು ಎಂದು ಆಶ್ಚರ್ಯ ಆಗುತ್ತದೆ. ಹಲವು ವರ್ಷಗಳ ಕಾಲ ಹುದುಗಿದ್ದ ಸತ್ಯವನ್ನು ಅಥವಾ ಸತ್ಯದ ಭಾಗವನ್ನು ಹೇಳಲಾಗಿದೆ. ಏನನ್ನು ವೀಕ್ಷಿಸಬೇಕು ಎಂಬುದನ್ನು ಜನರು ನಿರ್ಧರಿಸಲಿ. ಸಿನಿಮಾ ಶೋಗಳನ್ನು ರದ್ದು ಮಾಡಲು ತಮಿಳುನಾಡು ಸರ್ಕಾರ ಕುಂಟು ನೆಪ ಹೇಳುತ್ತಿದೆ. ಇದು ನೋಡಲೇಬೇಕಾದ ಸಿನಿಮಾ’ ಎಂದು ಅವರು ಬರೆದುಕೊಂಡಿದ್ದಾರೆ.
2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಗೆ ಬಂತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3.5 ಕೋಟಿ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಸಿನಿಮಾ ಒಟ್ಟಾರೆ 252 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ‘ದಿ ಕೇರಳ ಸ್ಟೋರಿ’ ವಿಚಾರದಲ್ಲಿ ಇತಿಹಾಸ ಮರುಕಳಿಸುವ ಸೂಚನೆ ಸಿಕ್ಕಿದೆ.
How sad to see you speak without getting the facts right Kapil ji. None of the films mentioned by you were banned by the BJP Govt. If you, to support your lies, depend on fractions who protest, and connect them with them with BJP, just shows how desperate you are. My sympathies… https://t.co/k4LVPHGAln
— KhushbuSundar (@khushsundar) May 9, 2023
ಇದನ್ನೂ ಓದಿ: ಖುಷ್ಬೂ ಸುಂದರ್ ಮಗಳ ಬಗ್ಗೆ ಅಶ್ಲೀಲ ಕಮೆಂಟ್; ಬಟ್ಟೆ ಬಗ್ಗೆ ಕೆಟ್ಟದಾಗಿ ಮಾತನಾಡಿದ ನೆಟ್ಟಿಗರು
ಅನುಪಮ್ ಖೇರ್ ನಿಲುವೇನು?
‘ಈ ರೀತಿಯ ಸಿನಿಮಾಗಳನ್ನು ವಿರೋಧಿಸುವವರು ಎಲ್ಲೆಡೆ ಕಾಣುತ್ತಾರೆ. ಸಿಎಎ ಪ್ರತಿಭಟನೆ, ಶಾಹೀನ್ ಬಾಗ್ ಪ್ರತಿಭಟನೆ ಅಥವಾ ಜೆಎನ್‌ಯು ಪ್ರತಿಭಟನೆಯಲ್ಲಿ ಅವರು ಕಾಣುತ್ತಾರೆ. ಕಾಶ್ಮೀರ್ ಫೈಲ್ಸ್ ಅನ್ನು ಟೀಕಿಸಿದ್ದು ಇದೇ ಮುಖಗಳು. ನನಗೆ ಅವರ ಉದ್ದೇಶ ಏನು ಎಂಬುದು ತಿಳಿದಿಲ್ಲ. ಅವರ ಕಡೆಗೆ ಗಮನ ಹರಿಸೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಅನುಪಮ್ ಖೇರ್.
‘ಮತ್ತೆ ನಾನು ಹೇಳುವುದು ಅದನ್ನೇ, ಇದು ಅದೇ ಮುಖಗಳು. ನಾನು ಸಿನಿಮಾ ನೋಡಿಲ್ಲ. ಆದರೆ ಜನ ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಇದು ಪ್ರೊಪೊಗಾಂಡ ಸಿನಿಮಾ ಎಂದು ಕರೆಯುವವರು ಪರಿಪೂರ್ಣ ಎನಿಸುವ ವಿಷಯದೊಂದಿಗೆ ಸಿನಿಮಾ ಮಾಡಬಹುದು. ಅದನ್ನು ಯಾರೂ ತಡೆಯಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ