ತೆಲುಗು ಸಿನಿಮಾ ನಿರ್ದೇಶಕ ಎಎಸ್ ರವಿಕುಮಾರ್ ನಿಧನ
AS Ravikumar: ತೆಲುಗು ಚಿತ್ರರಂಗದ ಕೆಲ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿರುವ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಎಸ್ ರವಿಕುಮಾರ್ ನಿಧನ ಹೊಂದಿದ್ದಾರೆ. ರವಿಕುಮಾರ್ ಅವರು ಕಳೆದ ಕೆಲ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು, ನಿನ್ನೆ ತಡರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ತೆಲುಗು ಚಿತ್ರರಂಗದ (Tollywood) ಕೆಲ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿರುವ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಎಸ್ ರವಿಕುಮಾರ್ ನಿಧನ ಹೊಂದಿದ್ದಾರೆ. ರವಿಕುಮಾರ್ ಅವರು ಕಳೆದ ಕೆಲ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು, ನಿನ್ನೆ ತಡರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ರವಿಕುಮಾರ್ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದರೂ ಸಹ ಕೆಲ ವರ್ಷಗಳಿಂದ ಅವರು ಒಬ್ಬರೇ ಬದುಕುತ್ತಿದ್ದರು ಎನ್ನಲಾಗಿದೆ.
ನಂದಮೂರಿ ಬಾಲಕೃಷ್ಣ, ಗೋಪಿಚಂದ್, ನಿತಿನ್ ಇನ್ನೂ ಕೆಲವು ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ಎಎಸ್ ರವಿಕುಮಾರ್ ಕೆಲಸ ಮಾಡಿದ್ದಾರೆ. ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದ ಗೋಪಿಚಂದ್ ಅವರನ್ನು ‘ಯಜ್ಞಂ’ ಸಿನಿಮಾ ಮೂಲಕ ನಾಯಕ ನಟನನ್ನಾಗಿ ಮಾಡಿದ್ದು ಎಎಸ್ ರವಿಕುಮಾರ್. ಆ ನಂತರ ಮೆಗಾಸ್ಟಾರ್ ಕುಟುಂಬದ ಸಾಯಿ ದುರ್ಗ ತೇಜ್ ಅವರ ಮೊದಲ ಸಿನಿಮಾ ‘ಪಿಲ್ಲಾ ನೂವು ಲೇನಿ ಜೀವತಂ’ ಅನ್ನು ರವಿಕುಮಾರ್ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ:ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಓಪನ್ ಟ್ರೋಲ್; ಹುಟ್ಟಿತು ಚರ್ಚೆ
ನಟ ನಂದಮೂರಿ ಬಾಲಕೃಷ್ಣ ನಟನೆಯ ‘ವೀರಭದ್ರ’ ಸಿನಿಮಾವನ್ನು ರವಿಕುಮಾರ್ ನಿರ್ದೇಶಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ನಿತಿನ್ ಜೊತೆಗೆ ‘ಆಟಾಡಿಸ್ತ’ ಸಿನಿಮಾ ಮಾಡಿದ್ದರು. ಗೋಪಿಚಂದ್ ನಟನೆಯ ‘ಶೌಖ್ಯಂ’ ಸಿನಿಮಾ ಮಾಡಿದ್ದರು. ರಾಜ್ ತರುಣ್ ನಟನೆಯ ‘ತಿರಗಬಡರಾ ಸಾಮಿ’ ರವಿಕುಮಾರ್ ಅವರ ಕೊನೆಯ ಸಿನಿಮಾ. ಎಎಸ್ ರವಿಕುಮಾರ್ ನಿಧನಕ್ಕೆ ತೆಲುಗು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ