AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು?

ಸದ್ಯಕ್ಕೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರದ ನಟಿ ಹುಮಾ ಖುರೇಷಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ. ಪ್ರಿಯತಮ ರಚಿತ್ ಸಿಂಗ್ ಜೊತೆ ಹುಮಾ ಖುರೇಷಿ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು?
Rachit Singh, Huma Qureshi
ಮದನ್​ ಕುಮಾರ್​
|

Updated on: May 04, 2026 | 4:23 PM

Share

ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ (Huma Qureshi) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಟನಾ ತರಬೇತುದಾರ ರಚಿತ್ ಸಿಂಗ್ (Rachit Singh) ಅವರೊಂದಿಗೆ ಪ್ರೀತಿಯಲ್ಲಿದ್ದ ಹುಮಾ, ಈ ವರ್ಷದ ಅಂತ್ಯಕ್ಕೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ಜೋಡಿಯು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿದೆ. ಹುಮಾ ಖುರೇಷಿ ಅವರು ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಮೇಲೆ ಸಖತ್ ಭರವಸೆ ಇದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರ ವಿವಾಹ ಮಹೋತ್ಸವವು ಅತ್ಯಂತ ಆಪ್ತವಾಗಿ ನಡೆಯಲಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮದುವೆಯ ನಂತರ ಮುಂಬೈನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಅವರ ವಿವಾಹ ಸೇರಿದಂತೆ ಹಲವು ಸಿನಿಮಾ ಪ್ರದರ್ಶನಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಕಳೆದ ವರ್ಷವೇ ಅಮೆರಿಕದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳೂ ಇವೆ.

ಇದಕ್ಕೂ ಮುನ್ನ ಹುಮಾ ಖುರೇಷಿ ಅವರು ನಿರ್ದೇಶಕ ಮುದಸ್ಸರ್ ಅಜೀಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ 2022ರಲ್ಲಿ ಇವರು ಪರಸ್ಪರ ದೂರವಾಗಿದ್ದರು. ಆ ಬಳಿಕ ರಚಿತ್ ಸಿಂಗ್ ಜೊತೆ ಅವರಿಗೆ ಪ್ರೀತಿ ಚಿಗುರಿತು. ಈಗ ಅವರು ಮದುವೆ ಆಗಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ

ಸದ್ಯ ಹುಮಾ ಖುರೇಷಿ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಹುಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೀತು ಮೋಹನ್​ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಎಲಿಜಬೆತ್ ಎಂಬ ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ, ಕಾಂಗ್ರೆಸ್​​​ಗೆ ಬಿಗ್ ಆಫರ್
ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ, ಕಾಂಗ್ರೆಸ್​​​ಗೆ ಬಿಗ್ ಆಫರ್
ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ವಿಜಯೇಂದ್ರ ಶಾಕ್
ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ವಿಜಯೇಂದ್ರ ಶಾಕ್
ಸಹೋದರನ ಗೆಲುವಿಗೆ ಬಾಯಕ್ಕ ಖುಷಿ ಓಕೆ, ದುಃಖ ಏಕೆ?
ಸಹೋದರನ ಗೆಲುವಿಗೆ ಬಾಯಕ್ಕ ಖುಷಿ ಓಕೆ, ದುಃಖ ಏಕೆ?
ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ! ಮಂಗಳೂರಿನಲ್ಲಿ ಬಿಜೆಪಿ ಘೋಷಣೆ
ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ! ಮಂಗಳೂರಿನಲ್ಲಿ ಬಿಜೆಪಿ ಘೋಷಣೆ
ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿದ ಉಮೇಶ್​​ ಮೇಟಿ
ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿದ ಉಮೇಶ್​​ ಮೇಟಿ
ವಿಜಯ್ ಎಂಜಿಆರ್ ಗಿಂತ ಅಪಾಯಕಾರಿ: ರೊಚ್ಚಿಗೆದ್ದ ಅಭಿಮಾನಿಗಳು
ವಿಜಯ್ ಎಂಜಿಆರ್ ಗಿಂತ ಅಪಾಯಕಾರಿ: ರೊಚ್ಚಿಗೆದ್ದ ಅಭಿಮಾನಿಗಳು
ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್?
ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್?
ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಣೆ
ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಣೆ
‘ಇವತ್ತು ರಿಸಲ್ಟ್ ನಮ್ಮದೇ’ ಎಂದಿದ್ದಕ್ಕೆ ಖುಷಿಯಿಂದ ನಕ್ಕ ತ್ರಿಷಾ
‘ಇವತ್ತು ರಿಸಲ್ಟ್ ನಮ್ಮದೇ’ ಎಂದಿದ್ದಕ್ಕೆ ಖುಷಿಯಿಂದ ನಕ್ಕ ತ್ರಿಷಾ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸುನಾಮಿ: ಸುವೇಂದು ಅಧಿಕಾರಿ ಏನಂದ್ರು?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸುನಾಮಿ: ಸುವೇಂದು ಅಧಿಕಾರಿ ಏನಂದ್ರು?