ಉಪ್ಪಿ, ರಾಮ್ ನಟನೆಯ ‘ಆಂಧ್ರ ಕಿಂಗ್’ ಮೊದಲ ದಿನದ ಕಲೆಕ್ಷನ್ ಎಷ್ಟು?
Andhra King Taluka: ಉಪೇಂದ್ರ, ರಾಮ್ ಪೋತಿನೇನಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ನಿನ್ನೆ (ನವೆಂಬರ್ 27) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಮೊದಲ ದಿನ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಗಳಿಸಿದ್ದೆಷ್ಟು?

ರಾಮ್ ಪೋತಿನೇನಿ, ಉಪೇಂದ್ರ (Upendra) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ನಿನ್ನೆ (ನವೆಂಬರ್ 27) ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ವಿಮರ್ಶೆಗಳು, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಗಳು ಅದ್ಭುತವಾಗಿವೆ ಎಂದು ವಿಮರ್ಶಕರು, ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದಾರೆ. ರಾಮ್ ಪೋತಿನೇನಿ, ಉಪೇಂದ್ರ ಅವರುಗಳು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಸಿನಿಮಾ ಪಕ್ಕಾ ಹಿಟ್ ಎಂದೇ ಉಪ್ಪಿ, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಹೇಳಿದ್ದರು. ಹಾಗಿದ್ದರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಿದೆ?
‘ಆಂದ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 10 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ರಾಮ್ ಪೋತಿನೇನಿ ಸಿನಿಮಾಗಳು ಮೊದಲ ದಿನ 10 ಕೋಟಿ ಗಳಿಕೆ ಮಾಡುವುದು ಸಣ್ಣ ವಿಷಯವಲ್ಲ. ರಾಮ್ ಅವರ ಕಳೆದ ಕೆಲವು ಸಿನಿಮಾಗಳು ಮೊದಲ ದಿನ 5 ಕೋಟಿ ಸಹ ಗಳಿಸಿರುವುದು ಅನುಮಾನ. ಹಾಗಿರುವಾಗ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿದೆ ಎನ್ನಬಹುದು.
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಅಮೆರಿಕದಲ್ಲಿ ಉತ್ತಮ ಗಳಿಕೆ ಮಾಡಿದೆ. ಅಮೆರಿಕದಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಸುಮಾರು 176 ಲೊಕೇಶನ್ಗಳಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನ ಅಮೆರಿಕ ಒಂದರಲ್ಲೇ 2.50 ಲಕ್ಷ ಡಾಲರ್ ಮೊತ್ತ ಗಳಿಕೆ ಮಾಡಿದೆ. ಅಂದರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಮೊದಲ ದಿನ ಅಮೆರಿಕದಲ್ಲಿ 2.23 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಸಿನಿಮಾ ಶುಕ್ರವಾರದಿಂದ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುವ ಭರವಸೆ ಮೂಡಿಸಿದೆ.
ಇದನ್ನೂ ಓದಿ:ರಾಮ್ ಪೋತಿನೇನಿಗೆ ಕನ್ನಡ ಹೇಳಿಕೊಟ್ಟ ಉಪೇಂದ್ರ
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದ ಬಗ್ಗೆ ಮೊದಲ ದಿನ ಬಹಳ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಸರಳ ಹಾಗೂ ಸುಂದರ ಸಿನಿಮಾ ಇದೆಂದು ಹಲವಾರು ವಿಮರ್ಶಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಶುಕ್ರವಾರ ಹಾಗೂ ವೀಕೆಂಡ್ನಲ್ಲಿ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಂಭವ ಇದೆ.
‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ, ಒಬ್ಬ ಅಭಿಮಾನಿ ಹಾಗೂ ಒಬ್ಬ ಸ್ಟಾರ್ ಹೀರೋ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಒಬ್ಬರನ್ನೊಬ್ಬರು ಎಂದೂ ನೋಡದೇ ಇದ್ದರೂ ಸಹ ಹೇಗೆ ಒಬ್ಬರ ಜೀವನದ ಮೇಲೆ ಇನ್ನೊಬ್ಬರು ಪ್ರಭಾವ ಬೀರಿದ್ದಾರೆ ಎಂಬುದನ್ನು ಕತೆಯನ್ನು ಚೆನ್ನಾಗಿ ತೋರಿಸಲಾಗಿದೆ. ಸಿನಿಮಾ ಅನ್ನು ಮಹೇಶ್ ಬಾಬು ಪಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ. ಮುರಳಿ ಶರ್ಮಾ ಮತ್ತು ರಾವ್ ರಮೇಶ್ ಅವರುಗಳು ಪ್ರಧಾನ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




