ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವೇ ಅಲ್ಲದೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಮಾರ್ನಿಂಗ್ ಶೋಗಳ ಟಿಕೆಟ್ಗಳು ಬಲು ಲಘು-ಬಗೆಯಿಂದ ಬಿಕರಿಯಾಗುತ್ತಿದೆ. ಹಲವು ಚಿತ್ರಮಂದಿರಗಳು ‘ಯುಐ’ ಸಿನಿಮಾದ ಮಾರ್ನಿಂಗ್ ಶೋ ಪ್ರದರ್ಶಿಸುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಟಿಕೆಟ್ಗಳು ಮಾರಾಟವಾಗಿಬಿಟ್ಟಿವೆ.
ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ‘ಯುಐ’ ಸಿನಿಮಾದ ಮಾರ್ನಿಂಗ್ ಶೋ ಪ್ರದರ್ಶನವಾಗುತ್ತಿದೆ. ಬೆಳಿಗ್ಗೆ 6:30 ಕ್ಕೆ ಕೆಲವೆಡೆ 6:15ಕ್ಕೆ ಶೋ ಪ್ರದರ್ಶನಗೊಳ್ಳುತ್ತಿದೆ. ಮಾರ್ನಿಂಗ್ ಶೋ ಪ್ರದರ್ಶಿಸುತ್ತಿರುವ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಕೆಲವು ಶೋಗಳು ಈಗಾಗಲೇ ಹೌಸ್ ಫುಲ್ ಸಹ ಆಗಿವೆ. ‘ಯುಐ’ ಸಿನಿಮಾದ ರಾತ್ರಿಯ ಶೋಗಳು ಸಹ ಕೆಲವು ಚಿತ್ರಮಂದಿರಗಳಲ್ಲಿ ಎರಡು ದಿನ ಮುಂಚಿತವಾಗಿಯೇ ಬುಕ್ ಆಗುತ್ತಿವೆ.
‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆ ಆಗಲಿದೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಅವರು ಮತ್ತೆ ನಿರ್ದೇಶನದ ಟೋಪಿ ಧರಿಸಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಸಿನಿಮಾದ ಟ್ರೋಲ್ ಹಾಕು ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಕೆಲ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೈಲರ್ ಸಹ ಗಮನ ಸೆಳೆಯುತ್ತಿದೆ. 2050 ರಲ್ಲಿ ಭಾರತ ಹೇಗಿರಬಹುದು ಎಂಬುದನ್ನು ಉಪೇಂದ್ರ ‘ಯುಐ’ ಸಿನಿಮಾನಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ:‘ಯುಐ’ ಚಿತ್ರಕ್ಕೆ ಬೇರೆ ಬೇರೆ ಥಿಯೇಟರ್ನಲ್ಲಿ ಡಿಫರೆಂಟ್ ಕ್ಲೈಮ್ಯಾಕ್ಸ್? ಸ್ಪಷ್ಟನೆ ನೀಡಿದ ಉಪೇಂದ್ರ
‘ಯುಐ’ ಸಿನಿಮಾಕ್ಕಾಗಿ ಸಾಕಷ್ಟು ಹೊಸ ರೀತಿಯ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ಗಳ ಬಳಕೆಯನ್ನು ಮಾಡಲಾಗಿದೆ. ಸಿನಿಮಾದ ಸಂಗೀತವನ್ನು ಬುಡಾಪೆಸ್ಟ್ನಲ್ಲಿ ಮಾಡಿಸಿದ್ದಾರೆ ಉಪೇಂದ್ರ. ‘ಯುಐ’ ಸಿನಿಮಾಕ್ಕೆ ಕೆಪಿ ಶ್ರೀಕಾಂತ್ ಮತ್ತು ಲಹರಿ ವೇಲು ಬಂಡವಾಳ ತೊಡಗಿಸಿದ್ದಾರೆ. ಸಿನಿಮಾವನ್ನು ಪರಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ. ಹಿಂದಿಯಲ್ಲಿ ಆಮಿರ್ ಖಾನ್ ಅವರು ‘ಯುಐ’ ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ‘ಯುಐ’ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ