Varisu first look: ವಾರಿಸು ಲುಕ್ಗೆ ದಿ ಬಾಸ್ ರಿಟರ್ನ್ಸ್ ಎಂದ ವಿಜಯ್ ಫ್ಯಾನ್ಸ್
Varisu first look: ಕಾಲಿವುಡ್ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಅವರ ಕೊನೆಯ ಸಿನಿಮಾ ಬೀಸ್ಟ್ ಅಟ್ಟರ್ ಫ್ಲಾಪ್ ಆಗಿತ್ತು. ಆ ಚಿತ್ರದ ಬಗ್ಗೆ ಇಳಯ ದಳಪತಿ ಅಭಿಮಾನಿಗಳೇ ಅಸಾಮಾಧಾನ ಹೊರಹಾಕಿದ್ದರು.

Varisu first look: ತಮಿಳು ನಟ ಇಳಯ ದಳಪತಿ ವಿಜಯ್ (Vijay) ನಟನೆಯ ಮುಂಬರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ತಮ್ಮ 48 ನೇ ಹುಟ್ಟುಹಬ್ಬದ ಮುನ್ನ ದಿನದಂದು ವಿಜಯ್ ತಮ್ಮ 66ನೇ ಚಿತ್ರದ ಲುಕ್ ಹಾಗೂ ಟೈಟಲ್ ಅನ್ನು ಅನಾವರಣಗೊಳಿಸಿದ್ದಾರೆ. ಚಿತ್ರಕ್ಕೆ ವಾರಿಸು (Varisu first look) ಎಂದು ಶೀರ್ಷಿಕೆ ಇಡಲಾಗಿದ್ದು, ಇದರ ಅರ್ಥ ವಾರಸು ಅಥವಾ ವಾರಸುದಾರ ಎಂದಾಗಿದೆ. ಇನ್ನು ಟೈಟಲ್ ಅಡಿಯಲ್ಲಿ ‘ದಿ ಬಾಸ್ ರಿಟರ್ನ್ಸ್’ ಎನ್ನುವ ಟ್ಯಾಗ್ ಲೈನ್ ನೀಡಲಾಗಿರುವುದು ವಿಶೇಷ. ಈ ಪೋಸ್ಟರ್ನಲ್ಲಿ ವಿಜಯ್ ರಾಜಭಂಗಿಯಲ್ಲಿ ಕಾಣಿಸಿಕೊಂಡಿದ್ದು, ದುಬಾರಿ ಸೂಟ್ ಲುಕ್ನಲ್ಲಿ ಮಿಂಚಿದ್ದಾರೆ.
#Varisu pic.twitter.com/b2bwNNAQP8
ಇದನ್ನೂ ಓದಿ— Vijay (@actorvijay) June 21, 2022
ವಾರಿಸು ಚಿತ್ರಕ್ಕೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ವಿಜಯ್ ತನ್ನ ತಾಯ್ನಾಡಿಗೆ ಹಿಂದಿರುಗುವ ಎನ್‌ಆರ್‌ಐ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ವಂಶಿ ನಿರ್ದೇಶಿಸಿದ ಕೊನೆಯ ಚಿತ್ರ ಮಹರ್ಷಿ ತೆಲುಗಿನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದರು. ಅಲ್ಲದೆ ಅವರು ವಿದೇಶದಿಂದ ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸಲು ಬರುವ ಕಥೆ ಹೊಂದಿತ್ತು. ಹೀಗಾಗಿ ಇದೇ ಕಥೆಯನ್ನೇ ತಮಿಳಿನಲ್ಲಿ ವಿಜಯ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಸದ್ಯ ಹೈದರಾಬಾದ್ನಲ್ಲಿ ವಾರಿಸು ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ವಿಜಯ್ಗೆ ಜೋಡಿಯಾಗುತ್ತಿದ್ದಾರೆ. ಇವರಲ್ಲದೆ , ಶಾಮ್, ಯೋಗಿ ಬಾಬು, ಶರತ್‌ಕುಮಾರ್, ಪ್ರಭು, ಪ್ರಕಾಶ್ ರಾಜ್ ಮತ್ತು ಜಯಸುಧಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಾರಿಸು ಚಿತ್ರವು ಮುಂದಿನ ವರ್ಷ ಸಂಕ್ರಾಂತಿ/ಪೊಂಗಲ್ ಹಬ್ಬದಂದು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದ್ದು, ಈ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದ್ದಾರೆ ನಟ ವಿಜಯ್.
ಏಕೆಂದರೆ ಕಾಲಿವುಡ್ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಅವರ ಕೊನೆಯ ಸಿನಿಮಾ ಬೀಸ್ಟ್ ಅಟ್ಟರ್ ಫ್ಲಾಪ್ ಆಗಿತ್ತು. ಆ ಚಿತ್ರದ ಬಗ್ಗೆ ಇಳಯ ದಳಪತಿ ಅಭಿಮಾನಿಗಳೇ ಅಸಾಮಾಧಾನ ಹೊರಹಾಕಿದ್ದರು. ಹೀಗಾಗಿ ವಾರಿಸು ಮೂಲಕ ಅಭಿಮಾನಿಗಳ ಮನತಣಿಸುವ ವಿಶ್ವಾಸವನ್ನು ನಟ ವಿಜಯ್ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








