‘ಲೈಗರ್​’ ಟಿಕೆಟ್ ಬುಕಿಂಗ್ ಓಪನ್​; ರಿಲೀಸ್​ಗೂ ಮೊದಲೇ ಹವಾ ಎಬ್ಬಿಸಿದ ವಿಜಯ್ ದೇವರಕೊಂಡ ಚಿತ್ರ

ವಿಜಯ್ ದೇವರಕೊಂಡ ಅವರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಮಾಸ್ ಅವತಾರ ತಾಳಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ಅವರು ನಟಿಸಿದ್ದಾರೆ.

‘ಲೈಗರ್​’ ಟಿಕೆಟ್ ಬುಕಿಂಗ್ ಓಪನ್​; ರಿಲೀಸ್​ಗೂ ಮೊದಲೇ ಹವಾ ಎಬ್ಬಿಸಿದ ವಿಜಯ್ ದೇವರಕೊಂಡ ಚಿತ್ರ
ವಿಜಯ್
Updated By: ರಾಜೇಶ್ ದುಗ್ಗುಮನೆ

Updated on: Aug 22, 2022 | 4:36 PM

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರೋಕೆ ರೆಡಿ ಇದೆ. ಈ ಸಿನಿಮಾ ಬಗ್ಗೆ ವಿಜಯ್ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಅವರು ರಗಡ್ ಅವತಾರ ತಾಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಚಿತ್ರ ರಿಲೀಸ್​ಗೂ ನಾಲ್ಕು ದಿನ ಮೊದಲು ಪ್ರೀ-ಬುಕಿಂಗ್ ಬಿಡಲಾಗಿದೆ. ಹೈದರಾಬಾದ್, ಬೆಂಗಳೂರು, ಮುಂಬೈ ಮೊದಲಾದ ಕಡೆಗಳಲ್ಲಿ ಪ್ರೀ-ಬುಕಿಂಗ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೂರಿ ಜಗನ್ನಾಥ್ ಅವರು ‘ಲೈಗರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಿನಿಮಾ ಮೈಲೇಜ್ ಪಡೆದುಕೊಂಡಿದೆ. ವಿಜಯ್ ದೇವರಕೊಂಡ ಅವರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಮಾಸ್ ಅವತಾರ ತಾಳಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಟ್ರೇಲರ್ ಹಾಗೂ ಹಾಡುಗಳು ಚಿತ್ರದ ಮೈಲೇಜ್ ಹೆಚ್ಚಿಸಿದೆ. ಪ್ರೀ-ಬುಕಿಂಗ್​ನಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ.

ಸೋಮವಾರ (ಆಗಸ್ಟ್ 22) ಪ್ರೀ-ಬುಕಿಂಗ್ ಓಪನ್ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್, ಮುಂಬೈ ಮೊದಲಾದ ನಗರಗಳಲ್ಲಿ ಪ್ರೀ ಬುಕಿಂಗ್ ಓಪನ್ ಮಾಡಲಾಗಿದೆ. ಹೈದರಾಬಾದ್​ನಲ್ಲಿ ಈಗಾಗಲೇ 500ಕ್ಕೂ ಅಧಿಕ ಶೋಗಳನ್ನು ಬಿಡಲಾಗಿದೆ. ಹಲವು ಶೋಗಳು ಈಗಾಗಲೇ ಸೋಲ್ಡ್​ಔಟ್ ಆಗಿದೆ. ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಗುರುವಾರದ (ಆಗಸ್ಟ್ 25) ವೇಳೆಗೆ ಮತ್ತಷ್ಟು ಶೋ ಹೆಚ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ
Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

ಹೈದರಾಬಾದ್

ಇದನ್ನೂ ಓದಿ: ಮಂತ್ರಿಮಾಲ್​ನಲ್ಲಿ ‘ಲೈಗರ್’ ಅಬ್ಬರ; ವಿಜಯ್ ದೇವರಕೊಂಡ ನೋಡಲು ಜನವೋ ಜನ

‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಮಾಸ್ ಅವತಾರ ತಾಳಿದ್ದಾರೆ. ಅವರ ರಗಡ್​ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಅನನ್ಯಾ ಪಾಂಡೆ ಅವರು ವಿಜಯ್ ದೇವರಕೊಂಡಗೆ ಜೊತೆಯಾಗಿದ್ದಾರೆ. ಪೂರಿ ಜಗನ್ನಾಥ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಗೆ ದಿನ ಕಳೆದಂತೆ ಮೈಲೇಜ್ ಹೆಚ್ಚುತ್ತಿದೆ. ಪ್ರೀ-ಬುಕಿಂಗ್​ನಲ್ಲಿ ಸಿನಿಮಾ ಅಬ್ಬರಿಸುವುದನ್ನು ನೋಡಿದರೆ ಮೊದಲ ದಿನ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಬಹುದು.

Published On - 3:54 pm, Mon, 22 August 22