ವಿಜಯ್ ದೇವರಕೊಂಡ ನಟನೆಯ ‘ಲೈಗರ್​ಗೆ’ U/A ಪ್ರಮಾಣಪತ್ರ; ಈ ಚಿತ್ರದಲ್ಲಿದೆ ಹಲವು ಸಸ್ಪೆನ್ಸ್

‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್​ಗಳು ಇರಲಿವೆ.

ವಿಜಯ್ ದೇವರಕೊಂಡ ನಟನೆಯ ‘ಲೈಗರ್​ಗೆ’ U/A ಪ್ರಮಾಣಪತ್ರ; ಈ ಚಿತ್ರದಲ್ಲಿದೆ ಹಲವು ಸಸ್ಪೆನ್ಸ್
ವಿಜಯ್ ದೇವರಕೊಂಡ
Edited By:

Updated on: Aug 05, 2022 | 3:09 PM

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಇಡೀ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ದೇಶದ ಮೂಲೆಮೂಲೆಗೆ ಈ ಸಿನಿಮಾ ತಲುಪಬೇಕು ಎಂಬುದು ಚಿತ್ರತಂಡದ ಆಲೋಚನೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರ ಈಗ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯವರು ‘ಲೈಗರ್​ಗೆ’ (Liger Movie) U/A ಪ್ರಮಾಣಪತ್ರ ನೀಡಿದ್ದಾರೆ. ಯಾವ ದೃಶ್ಯಕ್ಕೂ ಕತ್ತರಿ ಹಾಕುವಂತೆ ಸೂಚಿಸಿಲ್ಲ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಜತೆಗೆ ಸಿನಿಮಾದಲ್ಲಿ ಹಲವು ವಿಶೇಷತೆ​ಗಳು ಇರಲಿವೆ ಎನ್ನಲಾಗಿದೆ.

‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್​ಗಳು ಇರಲಿವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈಗಾಗಲೇ ಹಲವು ಹಾಡುಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ. ಹಾಡುಗಳ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ
‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಜತೆ ಡೇಟ್ ಮಾಡಲು ಸಾರಾ-ಜಾನ್ವಿ ನಡುವೆ ಸ್ಪರ್ಧೆ
‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
Vijay Devarakonda: ಹುಡುಗಿ ಬೆನ್ನಲ್ಲಿ ವಿಜಯ್​ ದೇವರಕೊಂಡ ಟ್ಯಾಟೂ; ನೆಚ್ಚಿನ ಹೀರೋ ಮುಂದೆ ಯುವತಿ ಆನಂದಭಾಷ್ಪ

ಸೆನ್ಸಾರ್ ಮಂಡಳಿಯವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್​ ದೃಶ್ಯಗಳು, ಹೀರೋ ಕ್ಯಾರೆಕ್ಟರೈಸೇಷನ್, ಡೈಲಾಗ್​ ಡೆಲಿವರಿ, ತಾಯಿ ಸೆಂಟಿಮೆಂಟ್ ಎಲ್ಲವೂ ವರ್ಕ್​ ಆಗಿದೆ ಎಂಬುದು ಸೆನ್ಸಾರ್ ಮಂಡಳಿಯವರ ಅಭಿಪ್ರಾಯ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಸದಸ್ಯರು ಮೆಚ್ಚುಗೆ ಸೂಚಿಸಿದ್ದಾರೆ.


ಇದನ್ನೂ ಓದಿ: ಬೇರೆ ನಟರಿಗಿಂತ ದೇವರಕೊಂಡ ಬಗ್ಗೆ ಫ್ಯಾನ್ಸ್​ಗೆ ಹೆಚ್ಚು ಕ್ರೇಜ್​; ‘ಲೈಗರ್’ ಇವೆಂಟ್​ನಲ್ಲಿ ನಡೆಯಿತು ಅಚ್ಚರಿಯ ಘಟನೆ

‘ಲೈಗರ್’ ಚಿತ್ರದಲ್ಲಿ ವಿಜಯ್ ಅವರು ಸಖತ್ ಆ್ಯಕ್ಷನ್​ ಮೆರೆದಿದ್ದಾರೆ ಎಂಬುದಕ್ಕೆ ಟ್ರೇಲರ್​​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಅವರು ಈ ಚಿತ್ರದ ಮೂಲಕ ಬಾಲಿವುಡ್​​ ಮಂದಿಗೆ ಪರಿಚಯಗೊಳ್ಳುತ್ತಿದ್ದಾರೆ. ಅನನ್ಯಾ ಪಾಂಡೆ ಅವರು ಈ ಚಿತ್ರದ ನಾಯಕಿ. ‘ಲೈಗರ್’ ಚಿತ್ರದ ಮೂಲಕ ಅವರು ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಪುರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್​​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್, ಪುರಿ ಜಗನ್ನಾಥ್ ಮೊದಲಾದವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:09 pm, Fri, 5 August 22