AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಜತೆ ನಿಶ್ಚಿತಾರ್ಥ ಆದ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ

ಸೋಮವಾರ (ಅ.6) ಸಂಜೆ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಕಾರು ಅಪಾಘತಕ್ಕೆ ಒಳಗಾಗಿದೆ. ಪುಟ್ಟಪರ್ತಿಯಿಂದ ಹೈದರಾಬಾದ್​​​ಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಅಪಘಾತ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಜೊತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ.

ರಶ್ಮಿಕಾ ಜತೆ ನಿಶ್ಚಿತಾರ್ಥ ಆದ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ
Vijay Deverakonda
ಮದನ್​ ಕುಮಾರ್​
|

Updated on: Oct 06, 2025 | 8:54 PM

Share

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಒಂದು ಶಾಕಿಂಗ್ ಘಟನೆ ನಡೆದಿದೆ. ವಿಜಯ್ ದೇವರಕೊಂಡ (Vijay Deverakonda) ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಸಮೀಪ ಈ ಅಪಘಾತ (Vijay Deverakonda Car Accident) ಸಂಭವಿಸಿದೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ತೀವ್ರ ಆತಂಕ ಆಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ವಿಜಯ್ ದೇವರಕೊಂಡ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಸೋಮವಾರ (ಅಕ್ಟೋಬರ್ 6) ವಿಜಯ್ ದೇವರಕೊಂಡ ಅವರು ಪುಟ್ಟಪರ್ತಿಗೆ ಭೇಟಿ ನೀಡಿದ್ದರು. ಪುಟ್ಟಪರ್ತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿಜಯ್ ಅವರು ಸತ್ಯ ಸಾಯಿ ಬಾಬಾ ಸಮಾಧಿ ನಮಿಸಿ ಆಶೀರ್ವಾದ ತೆಗೆದುಕೊಳ್ಳಲು ಬಂದಿದ್ದರು. ಅಲ್ಲಿಂದ ವಾಪಸ್ ಹೈದರಾಬಾದ್​​ಗೆ ತೆರಳುವಾಗ ಗದ್ವಾಲ್ ಜಿಲ್ಲೆಯ ಉಂಡವಳ್ಳಿಯಲ್ಲಿ ವಿಜಯ್ ದೇವರಕೊಂಡ ಅವರ ಕಾರು ಅಪಘಾತಕ್ಕೆ ಒಳಗಾಯಿತು.

ಸಹಾಯಕ ರವಿಕಾಂತ್ ಯಾದವ್ ಮತ್ತು ಚಾಲಕ ಅಂಡೆ ಶ್ರೀಕಾಂತ್ ಅವರು ವಿಜಯ್ ದೇವರಕೊಂಡ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎದುರಿಗೆ ಇದ್ದ ಟ್ರಕ್ ತಕ್ಷಣ ಬ್ರೇಕ್ ಹಾಕಿದ್ದರಿಂದ ಈ ಅವಘಡ ಸಂಭವಿಸಿತು. ಆಗ ಇನ್ನೊಂದು ಕಾರಿಗೆ ವಿಜಯ್ ದೇವರಕೊಂಡ ಅವರ ಕಾರು ಡಿಕ್ಕಿ ಹೊಡೆಯಿತು. ಇದರಿಂದ ವಿಜಯ್ ದೇವರಕೊಂಡ ಅವರ ಕಾರಿಗೆ ಹಾನಿ ಆಗಿದೆ.

ಈ ಅಪಘಾತದಲ್ಲಿ ವಿಜಯ್ ದೇವರಕೊಂಡ ಹಾಗೂ ಅವರ ಜೊತೆಗಿದ್ದವರಿಗೆ ಏನೂ ತೊಂದರೆ ಆಗಿಲ್ಲ. ಕಾರು ಚಾಲಕ ಅಂಡೆ ಶ್ರೀಕಾಂತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಳಿಕ ವಿಜಯ್ ದೇವರಕೊಂಡ ಅವರು ಮತ್ತೊಂದು ಕಾರಿನಲ್ಲಿ ಹೈದರಾಬಾದ್‌ಗೆ ತೆರಳಿದರು.

ಇದನ್ನೂ ಓದಿ: ರಶ್ಮಿಕಾ, ದೇವರಕೊಂಡ ನಡುವೆ ವಯಸ್ಸಿನ ಅಂತರ ಎಷ್ಟು?

ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜನಪ್ರಿಯತೆ ಇದೆ. ‘ಅರ್ಜುನ್ ರೆಡ್ಡಿ’, ‘ಲೈಗರ್’, ‘ಕಿಂಗ್ಡಮ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಜೊತೆ ಅವರು ಆಪ್ತವಾಗಿದ್ದಾರೆ. ಇತ್ತೀಚೆಗೆ ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬದ ಕಡೆಯಿಂದ ಯಾರೂ ಸ್ಪಷ್ಟಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕದನ ವಿರಾಮ ಬೆನ್ನಲ್ಲೇ ಚಿನ್ನದ ರೇಟ್ ಏರಿಕೆ: ಬೇಸರ ವ್ಯಕ್ತಪಡಿಸಿದ ಗ್ರಾಹಕರು
ಕದನ ವಿರಾಮ ಬೆನ್ನಲ್ಲೇ ಚಿನ್ನದ ರೇಟ್ ಏರಿಕೆ: ಬೇಸರ ವ್ಯಕ್ತಪಡಿಸಿದ ಗ್ರಾಹಕರು
ಟೋಲ್ ಗೇಟ್ ದಾಟುವಾಗ ಕಾರಿನ ಮೇಲೆ ಬಿದ್ದ ಸಿಮೆಂಟ್ ಟ್ಯಾಂಕರ್
ಟೋಲ್ ಗೇಟ್ ದಾಟುವಾಗ ಕಾರಿನ ಮೇಲೆ ಬಿದ್ದ ಸಿಮೆಂಟ್ ಟ್ಯಾಂಕರ್
4 ಪಂದ್ಯಗಳ ಬಳಿಕ ವಿಕೆಟ್ ಖಾತೆ ತೆರೆದ ಅರ್ಷದೀಪ್
4 ಪಂದ್ಯಗಳ ಬಳಿಕ ವಿಕೆಟ್ ಖಾತೆ ತೆರೆದ ಅರ್ಷದೀಪ್
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ