
ನಟ ವಿಜಯ್ ಸೇತುಪತಿ ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿಜಯ್ ಅವರು ಬೆಂಗಳೂರಿಗೆ ಆಗಮಿಸುವ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಬಗ್ಗೆ ವರದಿ ಆಗಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ (ನವೆಂಬರ್ 2) ರಾತ್ರಿ ನಟ ವಿಜಯ್ ಸೇತು ಪತಿ ಬೆಂಗಳೂರಿಗೆ ಬಂದಿದ್ದರು. ವಿಮಾನದಲ್ಲಿ ಬರುವ ವೇಳೆ ಸಹಪ್ರಯಾಣಿಕನ ಜೊತೆ ಕಿರಿಕ್ ಆಗಿದೆ. ಸಹ ಪ್ರಯಾಣಿಕ ಕುಡಿದಿದ್ದ ಎನ್ನಲಾಗಿದೆ. ವಿಮಾನ ಇಳಿದು ಏರ್ಪೋಟ್ನಿಂದ ಹೊರ ಬರುತ್ತಿದ್ದ ವೇಳೆ ವಿಜಯ್ ಸೇತುಪತಿ ಮತ್ತು ಅವರ ಪಿಎ ಮೇಲೆ ಹಿಂದಿನಿಂದ ಬಂದು ಸಹ ಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದಾನೆ. ಆ ನಂತರ ಏರ್ಪೋಟ್ ಠಾಣೆಗೆ ನಟ ಮತ್ತು ಪ್ರಯಾಣಿಕರು ತೆರಳಿದ್ದರು. ಏರ್ಪೋಟ್ ಪೊಲೀಸರು ಕೇಸ್ ದಾಖಲು ಮಾಡದೆ, ಅಪಾಲಜಿ ಬರೆಸಿಕೊಂಡು, ರಾಜಿ ಮಾಡಿ ಕಳುಹಿಸಿದ್ದಾರೆ.
ತಮಿಳಿನಲ್ಲಿ ನಡೆಯುತ್ತಿರುವ ಮಾಸ್ಟರ್ ಶೆಫ್ ಕಾರ್ಯಕ್ರಮನ್ನು ನಟ ವಿಜಯ್ ಸೇತುಪತಿ ನಿರೂಪಿಸುತ್ತಿದ್ದಾರೆ. ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದರ ನಿರೂಪಣೆಗೆ ಅವರು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿತ್ತು. ಆದರೆ, ಅವರು ಪುನೀತ್ ಸಮಾಧಿಗೆ ನಮನ ಸಲ್ಲಿಸಲು ಬಂದಿದ್ದರು ಎಂಬುದು ತಿಳಿದು ಬಂದಿದೆ.. ತಮಿಳಿನ ‘ಮಾಸ್ಟರ್’ ಸಿನಿಮಾದ ಶೂಟಿಂಗ್ ಶಿವಮೊಗ್ಗದಲ್ಲಿ ನಡೆದಿತ್ತು. ಇದರ ಶೂಟಿಂಗ್ಗೆ ಅವರು ಅಲ್ಲಿಗೆ ತೆರಳಿದ್ದರು. ಈ ವೇಳೆ ಶಿವಮೊಗ್ಗದಲ್ಲಿ ಏನು ಇಷ್ಟವಾಯಿತು? ಆ ಊರು ಹೇಗೆ ಅನ್ನಿಸಿತು ಎನ್ನುವ ಬಗ್ಗೆ ವಿಜಯ್ ಸೇತುಪತಿ ಈ ಮೊದಲು ಮಾತನಾಡಿದ್ದರು.
ಇದನ್ನೂ ಓದಿ: ಬೆಂಗಳೂರಿನ ಎಸ್ಆರ್ವಿ ಥಿಯೇಟರ್ನಲ್ಲಿ ಕೊನೆಯದಾಗಿ ಅಟೆಂಡ್ ಮಾಡಿದ್ದ ಪುನೀತ್; ಇಲ್ಲಿದೆ ಸಿಸಿಟಿವಿ ವಿಡಿಯೋ
‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್ ಸೇತುಪತಿ ಖಡಕ್ ನಿರ್ಧಾರ
Published On - 7:42 pm, Wed, 3 November 21