ಆಸ್ಪತ್ರೆಯಿಂದ ನಟ ವಿಕ್ರಮ್ ಡಿಸ್ಚಾರ್ಜ್; ‘ಕೋಬ್ರಾ’ ಆಡಿಯೋ ಲಾಂಚ್​​ಗೆ ಬರೋದು ಖಚಿತ

ವಿಕ್ರಮ್ ಅವರು ಮನೆಗೆ ಮರಳಿದ್ದು, ಸಂಪೂರ್ಣವಾಗಿ ರಿಕವರಿ ಹೊಂದಿದ್ದಾರೆ. ಈಗತಾನೇ ಆಸ್ಪತ್ರೆಯಿಂದ ಮರಳಿರುವ ಕಾರಣ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಆಸ್ಪತ್ರೆಯಿಂದ ನಟ ವಿಕ್ರಮ್ ಡಿಸ್ಚಾರ್ಜ್; ‘ಕೋಬ್ರಾ’ ಆಡಿಯೋ ಲಾಂಚ್​​ಗೆ ಬರೋದು ಖಚಿತ
ವಿಕ್ರಮ್
Updated By: ರಾಜೇಶ್ ದುಗ್ಗುಮನೆ

Updated on: Jul 11, 2022 | 2:48 PM

ನಟ ವಿಕ್ರಮ್ (Vikram) ಅವರು ಎರಡು ದಿನ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ (Kauvery Hospitals) ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರಿಗೆ ಹೃದಯಾಘಾತವಾಗಿದೆ ಎಂಬ ವಿಚಾರ ಮೊದಲು ವರದಿ ಆಯಿತು. ಆ ಬಳಿಕ ನಟನ ಮ್ಯಾನೇಜರ್ ಸೂರ್ಯ ನಾರಾಯಣ ಹಾಗೂ ಮಗ ಧ್ರುವ ವಿಕ್ರಮ್ ಕಡೆಯಿಂದ ಈ ವಿಚಾರದ ಬಗ್ಗೆ ಸ್ಪಷ್ಟನೆ ಸಿಕ್ಕಿತು. ಈಗ ಅವರು ಮನೆಗೆ ಮರಳಿರುವುದರಿಂದ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಲ್ಲದೆ ಇಂದು (ಜುಲೈ 11) ನಡೆಯುವ ‘ಕೋಬ್ರಾ’ ಸಿನಿಮಾದ ಆಡಿಯೋ ಲಾಂಚ್ (Cobra Movie Audio Launch) ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಲಿದ್ದಾರೆ.

ಶುಕ್ರವಾರ (ಜುಲೈ 8) ಮಧ್ಯಾಹ್ನದ ವೇಳೆಗೆ ವಿಕ್ರಮ್​ಗೆ ತೀವ್ರ ಅನಾರೋಗ್ಯ ಕಾಡಿದೆ ಎಂಬ ಬಗ್ಗೆ ವರದಿ ಆಯಿತು. ಇದು ಅವರ ಫ್ಯಾನ್ಸ್​ಗೆ ಆಘಾತ ನೀಡಿತು. ಇದಾದ ಕೆಲವೇ ಸಮಯದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನುವ ವರದಿಗಳು ಬಿತ್ತರಗೊಂಡವು. ಇದರಿಂದ ಫ್ಯಾನ್ಸ್ ಮತ್ತಷ್ಟು ಆಘಾತಕ್ಕೆ ಒಳಗಾದರು. ವಿಕ್ರಮ್ ಮ್ಯಾನೇಜರ್ ಸೂರ್ಯ ನಾರಾಯಣ ಅವರು ಟ್ವಿಟರ್​ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದರು. ‘ವಿಕ್ರಮ್​ ಅವರಿಗೆ ಚೆಸ್ಟ್ ಡಿಸ್‌ಕಂಫರ್ಟ್ ಆಗಿತ್ತು ಅಷ್ಟೇ. ಹಾರ್ಟ್​​ಅಟ್ಯಾಕ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಸದ್ಯ ವಿಕ್ರಮ್ ಆರೋಗ್ಯ ಸ್ಥಿರವಾಗಿದೆ. ಅವರು ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ’ ಎಂದು ಸೂರ್ಯ ನಾರಾಯಣ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ
‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ; ಗಮನ ಸೆಳೆದ ಐಶ್ವರ್ಯಾ, ವಿಕ್ರಮ್
ಆಸ್ಪತ್ರೆಗೆ ದಾಖಲಾದ ವಿಕ್ರಮ್​ ಆರೋಗ್ಯ ಸ್ಥಿತಿ ಹೇಗಿದೆ? ಮ್ಯಾನೇಜರ್ ಕಡೆಯಿಂದ ಸಿಕ್ತು ಹೆಲ್ತ್​ ಅಪ್ಡೇಟ್
Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ
ಎಂ.ಎಸ್ ​ಧೋನಿಯನ್ನು ಭೇಟಿಯಾದ ನಟ ಚಿಯಾನ್​ ವಿಕ್ರಮ್​; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು

ಇದನ್ನೂ ಓದಿ:  ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ; ಗಮನ ಸೆಳೆದ ಐಶ್ವರ್ಯಾ, ವಿಕ್ರಮ್

ವಿಕ್ರಮ್ ಅವರು ಮನೆಗೆ ಮರಳಿದ್ದು, ಸಂಪೂರ್ಣವಾಗಿ ರಿಕವರಿ ಹೊಂದಿದ್ದಾರೆ. ಈಗತಾನೇ ಆಸ್ಪತ್ರೆಯಿಂದ ಮರಳಿರುವ ಕಾರಣ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆದರೆ, ವಿಕ್ರಮ್ ಸಿನಿಮಾ ಕೆಲಸಗಳಿಗೆ ಮರಳಲು ನಿರ್ಧರಿಸಿದ್ದಾರೆ. ಇಂದು (ಜುಲೈ 11) ‘ಕೋಬ್ರಾ’ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ. ಅದಕ್ಕೆ ವಿಕ್ರಮ್ ಕೂಡ ಹಾಜರಿ ಹಾಕಲಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರಲಿದೆ. ‘ಕೆಜಿಎಫ್​’ ಖ್ಯಾತಿಯ ಶ್ರೀನಿಧಿ ಶೆಟ್ಟಿ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ.