ಆಸ್ಪತ್ರೆಗೆ ದಾಖಲಾದ ವಿಕ್ರಮ್​ ಆರೋಗ್ಯ ಸ್ಥಿತಿ ಹೇಗಿದೆ? ಮ್ಯಾನೇಜರ್ ಕಡೆಯಿಂದ ಸಿಕ್ತು ಹೆಲ್ತ್​ ಅಪ್ಡೇಟ್

ಇಂದು ಮಧ್ಯಾಹ್ನ ವಿಕ್ರಮ್​ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಬೆನ್ನಲ್ಲೇ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಿದಾಡಿತು.

ಆಸ್ಪತ್ರೆಗೆ ದಾಖಲಾದ  ವಿಕ್ರಮ್​ ಆರೋಗ್ಯ ಸ್ಥಿತಿ ಹೇಗಿದೆ? ಮ್ಯಾನೇಜರ್ ಕಡೆಯಿಂದ ಸಿಕ್ತು ಹೆಲ್ತ್​ ಅಪ್ಡೇಟ್
ವಿಕ್ರಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 08, 2022 | 5:58 PM

ಹಲವು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ಗಮನ ಸೆಳೆದಿರುವ ತಮಿಳುಜ ನಟ ವಿಕ್ರಮ್ (Vikram) ಅವರಿಗೆ ಹಾರ್ಟ್​ ಅಟ್ಯಾಕ್ ಆಗಿದೆ ಎಂಬ ಸುದ್ದಿ ಇಂದು (ಜುಲೈ 8) ಮಧ್ಯಾಹ್ನ ಹರಿದಾಡಿತ್ತು. ಇದು ಅವರ ಫ್ಯಾನ್ಸ್​​ ವಲಯದಲ್ಲಿ ಆತಂಕ ಮೂಡಿಸಿತ್ತು. ಇದು ಸುಳ್ಳು ಸುದ್ದಿ ಆಗಿರಲಿ ಎಂದು ಅನೇಕರು ಬೇಡಿಕೊಂಡಿದ್ದರು. ಫ್ಯಾನ್ಸ್ ಪ್ರಾರ್ಥನೆ ಫಲಿಸಿದೆ. ವಿಕ್ರಮ್​ಗೆ ಹೃದಯಾಘಾತ (Heart Attack) ಆಗಿದೆ ಎಂಬುದು ಸುಳ್ಳು ಸುದ್ದಿ ಎಂದು ವಿಕ್ರಮ್ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಧ್ಯಾಹ್ನ ವಿಕ್ರಮ್​ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಬೆನ್ನಲ್ಲೇ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಿದಾಡಿತು. ಇದರಿಂದ ಫ್ಯಾನ್ಸ್​ ವಲಯದಲ್ಲಿ ಆತಂಕ ಹೆಚ್ಚಿತು. ಈಗ ಮ್ಯಾನೇಜರ್ ಕಡೆಯಿಂದ ಸ್ಪಷ್ಟನೆ ಸಿಕ್ಕಿರುವುದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ
Image
Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ
Image
ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
Image
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Image
ಎಂ.ಎಸ್ ​ಧೋನಿಯನ್ನು ಭೇಟಿಯಾದ ನಟ ಚಿಯಾನ್​ ವಿಕ್ರಮ್​; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು

ವಿಕ್ರಮ್ ಮ್ಯಾನೇಜರ್ ಸೂರ್ಯ ನಾರಾಯಣ ಅವರು ಟ್ವಿಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ವಿಕ್ರಮ್​ ಅವರಿಗೆ ಚೆಸ್ಟ್ ಡಿಸ್‌ಕಂಫರ್ಟ್ ಆಗಿತ್ತು ಅಷ್ಟೇ. ಹಾರ್ಟ್​​ಅಟ್ಯಾಕ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಸದ್ಯ ವಿಕ್ರಮ್ ಆರೋಗ್ಯ ಸ್ಥಿರವಾಗಿದೆ. ಒಂದು ದಿನದಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ’ ಎಂದು ಸೂರ್ಯ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಹಲವು ಪ್ರಾಜೆಕ್ಟ್​ಗಳಲ್ಲಿ ವಿಕ್ರಮ್​ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಪೊನ್ನಿಯಿನ್​ ಸೆಲ್ವನ್​’ ಮತ್ತು ‘ಕೋಬ್ರಾ’ ಸಿನಿಮಾಗಳು ಹೆಚ್ಚು ನಿರೀಕ್ಷೆ ಮೂಡಿಸಿವೆ. ಈಗಾಗಲೇ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದಲ್ಲಿನ ಅವರ ಕೆಲವು ಪೋಸ್ಟರ್​ಗಳು ಸಖತ್​ ಹೈಪ್​ ಸೃಷ್ಟಿ ಮಾಡಿವೆ. ಇಂದು (ಜುಲೈ 8) ಸಂಜೆ 6 ಗಂಟೆಗೆ ಈ ಸಿನಿಮಾದ ಟೀಸರ್​​ ಲಾಂಚ್​ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಕ್ರಮ್​ ಭಾಗಿ ಆಗಬೇಕಿತ್ತು. ಆದರೆ ಅಷ್ಟರಲ್ಲೇ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ.

Published On - 4:57 pm, Fri, 8 July 22