ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ; ಏನಿದರ ವಿಶೇಷತೆ?

ವಿರಾಟ್ ಕೊಹ್ಲಿ ಅವರ ನಿವೃತ್ತಿ ಘೋಷಣೆಯ ನಂತರ, ಅವರು ಮತ್ತು ಅನುಷ್ಕಾ ಶರ್ಮಾ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಕೈಯಲ್ಲಿರುವ ಎಲೆಕ್ಟ್ರಾನಿಕ್ ಉಂಗುರ ಗಮನ ಸೆಳೆದಿದೆ. ಅನುಷ್ಕಾ ಅವರ ಭಾವುಕ ಕ್ಷಣವೂ ವೀಡಿಯೊದಲ್ಲಿದೆ.

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ; ಏನಿದರ ವಿಶೇಷತೆ?
ಅನುಷ್ಕಾ-ವಿರಾಟ್
Updated By: ರಾಜೇಶ್ ದುಗ್ಗುಮನೆ

Updated on: May 14, 2025 | 8:04 AM

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ತೆರಳಿ ದರ್ಶನ ಪಡೆದರು. ವಿರಾಟ್ ಸೋಮವಾರ ನಿವೃತ್ತಿ ಘೋಷಿಸಿದರು ಮತ್ತು ಅದಾದ ತಕ್ಷಣ, ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಿದರು. ವಿರಾಟ್ ಮತ್ತು ಅನುಷ್ಕಾ ನಿಯಮಿತವಾಗಿ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅನುಷ್ಕಾ ಹಾಗೂ ವಿರಾಟ್ ಕೈಯಲ್ಲಿರೋ ಎಲೆಕ್ಟ್ರಾನಿಕ್ ಉಂಗುರು ಗಮನ ಸೆಳೆದಿದೆ.

ಅನುಷ್ಕಾ ಹಾಗೂ ವಿರಾಟ್ ಮಹಾರಾಜರ ಆಶೀರ್ವಾದ ಪಡೆದು ಸ್ವಲ್ಪ ಸಮಯದವರೆಗೆ ಅವರೊಂದಿಗೆ ಚರ್ಚಿಸಿದರು. ಈ ಭೇಟಿಯ ಫೋಟೋಗಳು ಮತ್ತು ವೀಡಿಯೊಗಳು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ಮತ್ತು ಫೋಟೋದಲ್ಲಿ ವಿರಾಟ್ ಮತ್ತು ಅನುಷ್ಕಾ ಕೈಯಲ್ಲಿರುವ ಎಲೆಕ್ಟ್ರಾನಿಕ್ ಉಂಗುರುದ ಬಗ್ಗೆ ಚರ್ಚೆ ಆಗುತ್ತಿದೆ.

ಇದನ್ನೂ ಓದಿ
ಉಪೇಂದ್ರ ನಿರ್ದೇಶನಕ್ಕೆ ನಾನು ದೊಡ್ಡ ಫ್ಯಾನ್ ಎಂದ ರಜನಿ ಸಿನಿಮಾ ಡೈರೆಕ್ಟರ್
ಪವನ್ ಕಲ್ಯಾಣ್ ಹಳೆಯ ಚಿತ್ರಕ್ಕೆ ಕೊನೆಗೂ ಬಂತು ರಿಲೀಸ್ ಭಾಗ್ಯ
ರಶ್ಮಿಕಾ ಮಂದಣ್ಣ ಹೀರೋ ಜೊತೆ ತೆಲುಗು ಸಿನಿಮಾ ಘೋಷಿಸಿದ ಸಪ್ತಮಿ ಗೌಡ
ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ?

ವಿರಾಟ್ ಮತ್ತು ಅನುಷ್ಕಾ ದೇವರ ಹೆಸರನ್ನು ಜಪಿಸಲು ತಮ್ಮ ಬೆರಳಿಗೆ ಡಿಜಿಟಲ್ ಟ್ಯಾಲಿ ಎಲೆಕ್ಟ್ರಾನಿಕ್ ಫಿಂಗರ್ ಕ್ಲಿಕ್ಕರ್ ಉಂಗುರವನ್ನು ಧರಿಸಿದ್ದರು. ಪ್ರೇಮಾನಂದ ಮಹಾರಾಜ್ ಮುಂದೆ ವಿರಾಟ್ ಕೈಗಳನ್ನು ಮಡಚಿದಾಗ, ಈ ಎಲೆಕ್ಟ್ರಾನಿಕ್ ಉಂಗುರ ಅವರ ಬೆರಳಿನಲ್ಲಿ ಕಾಣಿಸಿಕೊಂಡಿತು. ಆದರೆ ಈ ಬಾರಿ ಅನುಷ್ಕಾ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಮರೆಮಾಡಲು ಪ್ರಯತ್ನಿಸಿದರು. ವೀಡಿಯೊದಲ್ಲಿ, ಈ ಗುಲಾಬಿ ಉಂಗುರವನ್ನು ವಿರಾಟ್ ಕೈಯಲ್ಲಿ ಸುಲಭವಾಗಿ ಕಾಣಬಹುದು. ಈ ಡಿಜಿಟಲ್ ಟ್ಯಾಲಿ ಕೌಂಟರ್, ಅಂದರೆ ಎಲೆಕ್ಟ್ರಾನಿಕ್ ಟ್ಯಾಲಿ ಕೌಂಟರ್ ರಿಂಗ್. ದೇವರ ಹೆಸರನ್ನು ಎಷ್ಟು ಬಾರಿ ಜಪಿಸಲಾಗಿದೆ ಎಂದು ಎಣಿಸಲು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಜಪಮಾಲೆಯ ಬದಲು ಈ ಉಂಗುರವನ್ನು ಬಳಸುತ್ತಾರೆ.

ಪ್ರೇಮಾನಂದ ಮಹಾರಾಜ್ ಅವರು ಅನುಷ್ಕಾ ಬಳಿ ‘ನೀವು ಸಂತೋಷವಾಗಿದ್ದೀರಾ’ ಎಂದು ಕೇಳಿದರು. ಆಗ ಅನುಷ್ಕಾ ಅವರ ಕಣ್ಣುಗಳಿಂದ ನೀರು ಹರಿಯಲು ಪ್ರಾರಂಭಿಸಿತು. ಆಗ ವಿರಾಟ್, ‘ಹೌದು, ಈಗ ಪರವಾಗಿಲ್ಲ’ ಎಂದರು. ಆಗ ಮಹಾರಾಜರು ವಿರಾಟ್​ಗೆ, ‘ನೀವು ಆರೋಗ್ಯವಾಗಿರಬೇಕು’ ಹರಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.

ಇದನ್ನೂ ಓದಿ: ನಿವೃತ್ತಿಯ ಮರುದಿನವೇ ಗುರೂಜಿಯ ಭೇಟಿಯಾದ ವಿರಾಟ್ ಕೊಹ್ಲಿ

‘ಈ ವೈಭವವನ್ನು ಪಡೆಯುವುದು ವರವಲ್ಲ, ಅದು ಪುಣ್ಯ. ನಿಮ್ಮ ಆಂತರಿಕ ಆಲೋಚನೆಗಳನ್ನು ಬದಲಾಯಿಸುವುದು ದೇವರ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ನೀವು ಇರುವಂತೆಯೇ ಇರಿ, ಲೌಕಿಕವಾಗಿರಿ. ಆದರೆ ಆಂತರಿಕ ಆಲೋಚನೆಗಳು ಬದಲಾಗಬೇಕು. ಅದರಲ್ಲಿ ಯಶಸ್ಸಿನ ಭಾವನೆ ಇರಬಾರದು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.