AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಿಕಾ ರಂಗನಾಥ್​ ಹುಟ್ಟುಹಬ್ಬಕ್ಕೆ ಟಾಲಿವುಡ್​ ಮಂದಿ ಶುಭಾಶಯ; ‘ವಿಶ್ವಂಭರ’ ಪೋಸ್ಟರ್​ ಬಿಡುಗಡೆ

ಆಶಿಕಾ ರಂಗನಾಥ್​ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ತೆಲುಗು ಚಿತ್ರರಂಗದಲ್ಲೂ ಆಶಿಕಾ ರಂಗನಾಥ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ವಿಶ್ವಂಭರ’ ಚಿತ್ರತಂಡದವರು ಹೊಸ ಪೋಸ್ಟರ್​ ಮೂಲಕ ಆಶಿಕಾಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲೂ ಆಶಿಕಾ ರಂಗನಾಥ್​ ಅವರು ಫೇಮಸ್​ ಆಗುತ್ತಿದ್ದಾರೆ.

ಆಶಿಕಾ ರಂಗನಾಥ್​ ಹುಟ್ಟುಹಬ್ಬಕ್ಕೆ ಟಾಲಿವುಡ್​ ಮಂದಿ ಶುಭಾಶಯ; ‘ವಿಶ್ವಂಭರ’ ಪೋಸ್ಟರ್​ ಬಿಡುಗಡೆ
ಆಶಿಕಾ ರಂಗನಾಥ್​
ಮದನ್​ ಕುಮಾರ್​
|

Updated on: Aug 05, 2024 | 10:31 PM

Share

ಖ್ಯಾತ ನಟಿ ಆಶಿಕಾ ರಂಗನಾಥ್​ ಅವರಿಗೆ ಇಂದು (ಆಗಸ್ಟ್​ 5) ಹುಟ್ಟುಹಬ್ಬದ ಸಂಭ್ರಮ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸ್ಟಾರ್​ ನಟಿಯಾಗಿ ಆಶಿಕಾ ಮಿಂಚುತ್ತಿದ್ದಾರೆ. ಹಾಗಾಗಿ ಟಾಲಿವುಡ್​ ಮಂದಿ ಕೂಡ ಆಶಿಕಾ ರಂಗನಾಥ್​ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ದಿನದಿಂದ ದಿನಕ್ಕೆ ಆಶಿಕಾ ರಂಗನಾಥ್​ ಅವರ ಅಭಿಮಾನಿಗಳ ಬಳಗ ಹಿರಿದಾಗುತ್ತಲೇ ಇದೆ. ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ಆಶಿಕಾ ಆ್ಯಕ್ಟೀವ್​ ಆಗಿದ್ದಾರೆ. ಸ್ಟಾರ್​ ನಟರ ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಆಶಿಕಾಗೆ ಸಿಗುತ್ತಿದೆ. ‘ವಿಶ್ವಂಭರ’ ತಂಡದವರು ಆಶಿಕಾಗೆ ವಿಶ್​ ಮಾಡಿದ್ದಾರೆ.

‘ಮೆಗಾ ಸ್ಟಾರ್​’ ಚಿರಂಜೀವಿ ನಟಿಸುತ್ತಿರುವ ‘ವಿಶ್ವಂಭರ’ ಸಿನಿಮಾದಲ್ಲಿ ಆಶಿಕಾ ರಂಗನಾಥ್​ ಅವರಿಗೂ ಒಂದು ಪ್ರಮುಖ ಪಾತ್ರ ಇದೆ. ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಶಿಕಾ ರಂಗನಾಥ್​ ಅವರು ರಾಯಲ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​ ಮೂಲಕ ನಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗಿದೆ. ಅಭಿಮಾನಿಗಳು ಕಮೆಂಟ್​ ಮೂಲಕ ತಮ್ಮ ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ.

ಆಶಿಕಾ ರಂಗನಾಥ್​ ಅವರು ಅಪ್ಪಟ ಕನ್ನಡದ ಹುಡುಗಿ. ಸ್ಯಾಂಡಲ್​ವುಡ್​ನಲ್ಲಿ ಅವರು ಸಾಕಷ್ಟು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ‘ಮುಗುಳು ನಗೆ’, ‘ತಾಯಿಗೆ ತಕ್ಕ ಮಗ’ ಮುಂತಾದ ಸಿನಿಮಾಗಳಿಂದ ಅವರು ಶೈನ್​ ಆಗಿದ್ದಾರೆ. ಹಲವು ಅವಕಾಶಗಳು ಅವರ ಕೈಯಲ್ಲಿ ಇವೆ. ಅವರು ಅತ್ಯುತ್ತಮ ಡ್ಯಾನ್ಸರ್​ ಕೂಡ ಹೌದು. ‘ಚುಟು ಚಟು..’ ಮುಂತಾದ ಹಾಡುಗಳಿಂದ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್

ಕನ್ನಡ ನಟಿಯರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​ನಲ್ಲಿ ಧೂಳೆಬ್ಬಿಸಿದ್ದಾರೆ. ಅವರ ರೀತಿಯೇ ನಟಿ ಆಶಿಕಾ ರಂಗನಾಥ್​ ಅವರಿಗೂ ತೆಲುಗು ಚಿತ್ರರಂಗದಲ್ಲಿ ಆಫರ್​ಗಳು ಹೆಚ್ಚಿವೆ. ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಚಿತ್ರದಲ್ಲಿ ಆಶಿಕಾ ನಟಿಸಿದ್ದರು. ಈಗ ‘ವಿಶ್ವಂಭರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಿಂದ ಅವರ ಹವಾ ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್
ಸ್ಮಿತ್ ಸಿಡಿಲಬ್ಬರ... ಒಂದೇ ಓವರ್​ನಲ್ಲಿ ದಾಖಲೆ ಉಡೀಸ್
ಸ್ಮಿತ್ ಸಿಡಿಲಬ್ಬರ... ಒಂದೇ ಓವರ್​ನಲ್ಲಿ ದಾಖಲೆ ಉಡೀಸ್
ಇವತ್ತು ಫಿನಾಲೆ ಅಲ್ಲ, ಪ್ರೀ ಫಿನಾಲೆ; ಮಾಹಿತಿ ಕೊಟ್ಟ ಕಲರ್ಸ್ ಕನ್ನಡ
ಇವತ್ತು ಫಿನಾಲೆ ಅಲ್ಲ, ಪ್ರೀ ಫಿನಾಲೆ; ಮಾಹಿತಿ ಕೊಟ್ಟ ಕಲರ್ಸ್ ಕನ್ನಡ