ಮತದಾನದ ಬಗ್ಗೆ ಜಾಗೃತಿ ಮೂಡಿಸಲು ‘ಓಟ್​ ನಮ್ಮ ಪವರ್​’ ರ‍್ಯಾಪ್​ ಸಾಂಗ್​

|

Updated on: Apr 23, 2024 | 7:03 PM

‘ಓಟ್​ ನಮ್ಮ ಪವರ್​’ ಎಂಬ ರ‍್ಯಾಪ್​ ಸಾಂಗ್​ಗೆ ರಾಕೇಶ್ ಅಡಿಗ, ಐಶ್ವರ್ಯಾ ರಂಗರಾಜನ್ ಧ್ವನಿ ನೀಡಿದ್ದಾರೆ. ಕಾರ್ತಿಕ್ ಶರ್ಮ ಅವರು ಸಂಗೀತ ನೀಡಿದ್ದು, ಅನು ಮೋತಿ ಸಾಹಿತ್ಯ ಬರೆದಿದ್ದಾರೆ. ‘ಅನೇಕ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಸ್ಮೈಲ್​ ಗುರು ರಕ್ಷಿತ್‌, ತೇಜಸ್ವಿನಿ ಶರ್ಮ ಮುಂತಾದವರು ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಪ್ರಯತ್ನಕ್ಕೆ ಸಾಥ್​ ನೀಡಿದ್ದಾರೆ.

ಮತದಾನದ ಬಗ್ಗೆ ಜಾಗೃತಿ ಮೂಡಿಸಲು ‘ಓಟ್​ ನಮ್ಮ ಪವರ್​’ ರ‍್ಯಾಪ್​ ಸಾಂಗ್​
ಓಟ್​ ನಮ್ಮ ಪವರ್​ ಹಾಡು ಬಿಡುಗಡೆಯ ಸುದ್ದಿಗೋಷ್ಠಿ
Follow us on

ಈಗ ಎಲ್ಲೆಲ್ಲೂ ಲೋಕಸಭಾ ಚುನಾವಣೆ (Lok Sabha Elections) ಕಾವು ಹೆಚ್ಚಿದೆ. ದೇಶಾದ್ಯಂತ ಹಲವು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆಯು ‘ಓಟ್​ ನಮ್ಮ ಪವರ್​’ (Vote Namma Power) ಎಂಬ ರ‍್ಯಾಪ್​ ಸಾಂಗ್​ ಸಿದ್ಧಪಡಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಹಾಡಿನ ಉದ್ದೇಶ. ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ರ‍್ಯಾಪ್​ ಸಾಂಗ್​ನ (Rap Song) ಮೊರೆ ಹೋಗಲಾಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು.

‘ಅನೇಕ ಆಡಿಯೋ’ ಮೂಲಕ ‘ಓಟ್​ ನಮ್ಮ ಪವರ್​’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಂಸ್ಥೆಯ ಮುಖ್ಯಸ್ಥ ಅರವಿಂದ್ ಮೋತಿ ಅವರು ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅನು ಮೋತಿ ಬರೆದ ಈ ಹಾಡಿಗೆ ಕಾರ್ತಿಕ್ ಶರ್ಮ ಅವರ ಸಂಗೀತ ನಿರ್ದೇಶನವಿದೆ. ಈ ಗೀತೆಯನ್ನು ರಾಕೇಶ್ ಅಡಿಗ ಮತ್ತು ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ ಎಂಬುದು ವಿಶೇಷ.

ಈ ಹಾಡಿಗೆ ಗಿರೀಶ್ ಛಾಯಾಗ್ರಾಹಣ ಮಾಡಿದ್ದಾರೆ. ತೇಜಸ್ವಿನಿ ಶರ್ಮ, ಸ್ಮೈಲ್​ ಗುರು ರಕ್ಷಿತ್‌, ಅಭಯ್‌, ಬೃಂದಾ ಪ್ರಭಾಕರ್‌, ಅನನ್ಯಾ ಅಮರ್‌ ಅವರು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇವರ ಜೊತೆಗೆ ಸಿನಿಮಾ ಹಾಗೂ ಕಿರುತೆರೆಯ ಸೆಲೆಬ್ರಿಟಿಗಳು ಹುಕ್​ ಸ್ಟೆಪ್ಸ್​ಗೆ ಡ್ಯಾನ್ಸ್​ ಮಾಡಿ ಮೆರುಗು ತಂದಿದ್ದಾರೆ. ನೀತೂ ವನಜಾಕ್ಷಿ, ನವೀನ್‌ ಶಂಕರ್‌, ಕಾರ್ತಿಕ್‌ ಮಹೇಶ್‌, ಸಾನಿಯಾ ಅಯ್ಯರ್‌, ತನಿಶಾ ಕುಪ್ಪಂಡ, ಸಾಗರ್‌ ಪುರಾಣಿಕ್‌, ಚಂದನಾ ಅನಂತಕೃಷ್ಣ, ನಿರಂಜನ್‌ ದೇಶಪಾಂಡೆ ಮುಂತಾದವರು ಈ ಹಾಡಿನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ.

‘ಓಟ್​ ನಮ್ಮ ಪವರ್​’ ರ‍್ಯಾಪ್​ ಸಾಂಗ್:

ಗಾಯಕ, ನಟ ರಾಕೇಶ್​ ಅಡಿಗ ಮಾತನಾಡಿ, ‘ಮೊದಲ ಬಾರಿ ಮತದಾನ ಮಾಡುವವರಿಗೆ ಈ ರ‍್ಯಾಪ್​ ಸಾಂಗ್​ ತುಂಬ ಇಷ್ಟ ಆಗಬಹುದು. ಯುವಜನತೆ ಮತದಾನ ಮಿಸ್​ ಮಾಡಲೇಬಾರದು’ ಎಂದು ಹೇಳಿದರು. ನಿರ್ದೇಶಕ ರಾಜ್ ಗೋಪಿ ಅವರು ಮಾತನಾಡಿ, ‘ಮತದಾನದ ಬಗ್ಗೆ ಸಂವಿದಾನದಲ್ಲಿನ ಒಂದಷ್ಟು ಅಂಶಗಳನ್ನು ತೆಗೆದುಕೊಂಡು ಈ ಸಾಂಗ್​ ಮಾಡಿದ್ದೇವೆ‌. ಈಗಿನ ಯುವಜನತೆಗೆ ರ‍್ಯಾಪ್​ ಸಾಂಗ್​ ಇಷ್ಟ. ಹಾಗಾಗಿ ಅದರ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಇದನ್ನೂ ಓದಿ: ಬಿಜೆಪಿ ಸೇರಿದ ನಟಿ ಪೂಜಾ ರಮೇಶ್​ಗೆ ಸಿಕ್ತು ಸ್ವಾಗತ

ಬಿಗ್​ ಬಾಸ್​ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ಅವರು ಈ ಕುರಿತು ತಮ್ಮ ಅನಿಸಿಕೆ ತಿಳಿಸಿದರು. ‘ಮತದಾನದ ದಿನ‌ ರಜೆ ಇದೆ ಅಂತ ಮನೆಯಲ್ಲಿ ಕೂರಬೇಡಿ ಅಥವಾ ಪ್ರವಾಸಕ್ಕೆ ಹೋಗಬೇಡಿ. ಎಲ್ಲರೂ ತಪ್ಪದೇ ಓಟ್​ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕು ಮಾತ್ರವಲ್ಲ.‌ ಅಧಿಕಾರ ಕೂಡ ಹೌದು’ ಎಂದು ಅವರು ಹೇಳಿದರು. ಕಲಾವಿದರಾದ ತೇಜಸ್ವಿನಿ ಶರ್ಮ, ಸ್ಮೈಲ್ ಗುರು ರಕ್ಷಿತ್, ನೃತ್ಯ ನಿರ್ದೇಶನ ಮಾಡಿದ ಅನನ್ಯಾ ಅಮರ್ ಅವರು ಮತದಾನದ ಮಹತ್ವ ತಿಳಿಸಿದರು. ‘ಮಾಧ್ಯಮ ಅನೇಕ’ ಸಂಸ್ಥೆಯ ಡಾ. ನಮನ ಬಿ.ಎನ್​. ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.